ಕನ್ನಡ ರಾಜ್ಯೋತ್ಸವಕ್ಕೂ ಅನೌನ್ಸ್ ಆಗಿಲ್ಲ ಯಶ್-19: ಯಶ್ ಅಭಿಮಾನಿಗಳು ಬಯಸುತ್ತಿರೋದೇ ಬೇರೆ..!
ರಾಕಿಂಗ್ ಸ್ಟಾರ್ ಫ್ಯಾನ್ಸ್ ಆಸೆ ಇಂದೂ ಕೂಡ ಈಡೇರಿಲ್ಲ. ಈ ಕನ್ನಡದ ರಾಜ್ಯೋತ್ಸವಕ್ಕೆ ಯಶ್ 19 ಸಿನಿಮಾ ಅನೌನ್ಸ್ ಆಗುತ್ತೆ ಅಂತ ಕಾದಿದ್ದೆ ಬಂದು. ಆದ್ರೆ ಅದು ಆಗೇ ಇಲ್ಲ. ಆದ್ರೆ ಈ ಕನ್ನಡ ರಾಜ್ಯೋತ್ಸವ ದಿನದಲ್ಲಿ ಯಶ್ ಫ್ಯಾನ್ಸ್ ಬಯಸುತ್ತಿರೋದೇ ಬೇರೆ ಅನ್ನೋ ಗುಟ್ಟು ಮಾತ್ರ ಈಗ ರಟ್ಟಾಗಿದೆ.
ರಾಕಿಂಗ್ ಸ್ಟಾರ್ ಯಶ್. ಯಾವ್ ಪಾತ್ರಕ್ಕೂ ಸೂಟ್ ಆಗಬಲ್ಲ ಸೂಪರ್ ಸ್ಟಾರ್. ಇದಕ್ಕೆ ಸಾಕ್ಷಿ ಯಶ್(Yash) ಹಲವು ಕ್ಯಾರೆಕ್ಟರ್ ಫೋಟೋಗಳು ಈ ಹಿಂದೆ ವೈರಲ್ ಆಗಿದ್ವು. ಯಶ್ ಮಹಾಭಾರತ ಕರ್ಣನ(Karna) ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತೆ ಅಂತ ಕರ್ಣನ ಲುಕ್ ಡಿಸೈನ್ ಮಾಡಿದ್ರು ಫ್ಯಾನ್ಸ್(Fans). ಅಷ್ಟೇ ಅಲ್ಲ ಯಶ್ ಈಗ ಟ್ರೆಂಡ್ ಆಗ್ತಿರೋದು ರಾಮಾಯಣ ಕಥೆಯ ರಾವಣ(Ravana) ಪಾತ್ರಕ್ಕೆ. ಹಿಂದಿಯಲ್ಲಿ ಬರೋ ರಾಮಾಯಣ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಅನ್ನೋ ಬಗ್ಗೆ ಹಲವು ದಿನಗಳಿಂದ ಸುದ್ದಿ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ರಾವಣನ ಯಶ್ ಲುಕ್ ಕೂಡ ವೈರಲ್ ಆಗದೆ.
ಇದರ ಜೊತೆಗೆ ಹಾಲಿವುಡ್ ನ ವಾರಿಯ ಅವತಾರ ಹಾಗು ಮೊನ್ನೆಯಷ್ಟೆ ಯಶ್ 19 ಫಸ್ಟ್ ಲುಕ್ ಇದೆ ಅಂತ ಅಂಡರ್ ವರ್ಲ್ಡ್ ಡಾನ್ ಅವತಾರದ ಫೋಟೋ ಕೂಡ ಹೊರ ಬಂದಿದೆ. ಇದರ ಮಧ್ಯೆ ಯಶ್ ಫ್ಯಾನ್ಸ್ ಈಗ ಹೊಸ ಆಸೆಯೊಂದನ್ನ ಚಿಗುರೊಡೆಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇಮ್ಮಡಿ ಪುಲಿಕೇಶಿ ಆದ್ರೆ ಹೆಂಗಿರುತ್ತೆ..? ಈ ದೊಡ್ಡ ಆಸೆ ಯಶ್ ಫ್ಯಾನ್ಸ್ ಮನದಲ್ಲಿ ಹುಟ್ಟಿದೆ. ಇದಕ್ಕೆ ಸಾಕ್ಷಿ ಈ ಕನ್ನಡ ರಾಜ್ಯೊತ್ಸವದಲ್ಲಿ ಯಶ್ ರ ಬೆಳಗಾವಿ ಫ್ಯಾನ್ಸ್ ಇಮ್ಮಡಿ ಪುಲಿಕೇಶಿ ಯಶ್ 19 ಅನ್ನೋ ಫೋಟೋ ಹಿಡಿದು ಸಂಭ್ರಮಿಸಿದ್ದಾರೆ. ಅಂದ್ರೆ ಇದರ ಅರ್ಥ ಯಶ್ 19ನೇ ಸಿನಿಮಾ ಇಮ್ಮಡಿ ಪುಲಿಕೇಶಿ ಕಥೆಯೇ ಆಗಿರಲಿ ಅನ್ನೋ ಅಭಿಮಾನಿಗಳ ಆಸೆ.
ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ. ಒಂದು ಕಮರ್ಷಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳು ಇಮ್ಮಡಿ ಪುಲಿಕೇಶಿ ಜೀವನ ಚರಿತ್ರೆಯಲ್ಲಿದೆ. ಯಶ್ ಆ ಪಾತ್ರದಲ್ಲಿ ನಟಿಸಿದ್ರೆ ಫ್ಯಾನ್ಸ್ಗೆ ಹಬ್ಬವೇ ಸರಿ. ಆದ್ರೆ ಸದ್ಯಕ್ಕೆ ಅಂತಹ ಯಾವುದೇ ಚರ್ಚೆ ಯಶ್ ಬಳಗದಲ್ಲಿ ಆಗಿಲ್ಲ. ಆದ್ರೆ. ಇದು ಕೇವಲ ಅಭಿಮಾನಿಗಳ ಆಸೆ ಅಷ್ಟೇ. ಹೀಗಾಗಿ ಯಶ್ ಗತ್ತು ಗೈರತ್ತಿಗೆ ಹೇಳಿ ಮಾಡಿಸಿದ ಪಾತ್ರ ಇಮ್ಮಡಿ ಪುಲಿಕೇಶಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ಯಶ್ ಯೋಜನೆ ಮತ್ತು ಯೋಚನೆಯೇ ಬೇರೆಯದ್ದಿದೆ.
ಇದನ್ನೂ ವೀಕ್ಷಿಸಿ: 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಾಂಗ್ ರಿಲೀಸ್: ತಂಗಾಳಿಯ ಆಲಾಪದಲ್ಲಿ ಪ್ರಿಯಾ-ಮನು ರೊಮ್ಯಾನ್ಸ್!