RRRನಿಂದ ಬದಲಾಯ್ತು ಜೂ.ಎನ್‌ಟಿಆರ್, ರಾಮ್ ಚರಣ್ ಲಕ್: ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್..!
ಆಸ್ಕರ್ ಸೆಲೆಕ್ಷನ್ ಕಮಿಟಿಯಲ್ಲಿ ಭಾರತೀಯ ಸ್ಟಾರ್ಸ್
ರಾಮ್‌ಚರಣ್,ಜ್ಯೂ.ಎನ್‌ಟಿಆರ್‌ಗೆ ಆಸ್ಕರ್ ಜ್ಯೂರಿ ಚಾನ್ಸ್
ರಾಜಮೌಳಿಗೆ ಸಿಗಲಿಲ್ಲ ಆಸ್ಕರ್ ಸದಸ್ಯತ್ವ ಅವಕಾಶ
ಆರ್ ಆರ್ ಆರ್ ಸಿನಿಮಾ ಬಂದ ಮೇಲೆ ಜ್ಯೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಸಿನಿ ಬದುಕು ಬದಲಾಗಿದೆ. ಟಾಲಿವುಡ್‌ನ ಈ ಇಬ್ಬರು ಬಿಗ್ ಸ್ಟಾರ್ಸ್‌ಗೆ ವಿಶ್ವ ಸಿನಿ ರಂಗದ ಮಾನ್ಯತೆ ಸಿಕ್ತಾ ಇದೆ. ಅದ್ ಹೇಗೆ ಗೊತ್ತಾ.? ಆರ್‌ಆರ್‌ಆರ್ ಸಿನಿಮಾವನ್ನ ಇಡೀ ವಿಶ್ವವೇ ನೋಡಿ ಸಿನಿಮಾದ ಒಂದು ಹಾಡಿಗೆ ಆಸ್ಕರ್ ಪ್ರಶಸ್ತಿ ಕೊಟ್ಟಿದ್ರು. ಈಗ ಅದೇ ಆಸ್ಕರ್ ಪ್ರಶಸ್ತಿಯ ಸೆಲೆಕ್ಷನ್ ಕಮಿಟಿಗೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಎಂಟ್ರಿ ಕೊಟ್ಟಿದ್ದಾರೆ. ಆಸ್ಕರ್ ಪ್ರಶಸ್ತಿ ತಂಡಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಲಿದ್ದು, ದಿ ಅಕಾಡೆಮಿ ಮೋಷನ್ ಪಿಕ್ಚರ್ಸ್ & ಆರ್ಟ್ಸ್ ಮುಂದೆ ಸೇರಲಿರುವ 398 ಹೊಸ ಸದಸ್ಯರ ಲಿಸ್ಟ್ ರಿಲೀಸ್ ಆಗಿದೆ. ಆ ಲಿಸ್ಟ್‌ನಲಿ ಭಾರತೀಯ ಚಿತ್ರರಂಗದಿಂದ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್, ನಿರ್ಮಾಪಕ ಕರಣ್ ಜೋಹರ್, ಸಿದ್ಧಾರ್ಥ್ ರಾಯ್ ಕಪೂರ್, ನಿರ್ದೇಶಕ ಮಣಿರತ್ನಂ, ಸಂಗೀತ ನಿರ್ದೇಶಕ ಎಂಎಂ ಕೀರವಾಣಿ, ನಿರ್ದೇಶಕ ಕೆ.ಕೆ. ಸೆಂಥಿಲ್ ಕುಮಾರಂದ್ ಹೆಸರು ಲಿಸ್ಟ್‌ನಲ್ಲಿದೆ.
ಇದನ್ನೂ ವೀಕ್ಷಿಸಿ: ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!