
ಮಹಾಘಟಬಂಧನ ವಿರುದ್ಧ ವಿಭಿನ್ನ ರಾಜಕೀಯ ಅಸ್ತ್ರ: 3 ದಿನ, 3 ಸಭೆ, 3 ವಿಭಾಗ ಮೋದಿ ವಿಚಿತ್ರ ವ್ಯೂಹ..!
ಮೋದಿ ಪಾಳೆಯ ನಿರ್ಮಿಸಿದೆ 3 ಸುತ್ತಿನ ಕೋಟೆ!
ಎದುರಾಳಿಗಳಿಗೆ ಸೋಲುಣಿಸುತ್ತಾ ಈ ವ್ಯೂಹ!
ಬಲಗೊಳ್ಳುತ್ತಿರೋ ವಿಪಕ್ಷಗಳಿಗೆ ಕೇಸರಿ ರಣತಂತ್ರ!
ಲೋಕಸಭಾ ಸಂಗ್ರಾಮಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೇಗಾದ್ರೂ ಮಾಡಿ, ಮತ್ತೆ ಅಧಿಕಾರಕ್ಕೇರಲೇಬೇಕು ಅಂತ ಕೇಸರಿ ಪಾಳಯ ಡಿಸೈಡ್ ಮಾಡಿದ್ರೆ. ಶತಾಯ ಗತಾಯ ಬಿಜೆಪಿನಾ ಸೋಲಿಸಲೇಬೇಕು ಅಂತ, ಎದುರಾಳಿಗಳು ನಿರ್ಣಯ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿಯೇ, 2024ರಲ್ಲಿ ನಡೆಯಲಿರೋ ಲೋಕಸಭಾ ಚುನಾವಣೆ, ಯಾವ ಐತಿಹಾಸಿಕ ಯುದ್ಧಕ್ಕೂ ಕಡಿಮೆ ಇಲ್ಲ ಅನ್ನೋ ಹಾಗೆ ಬದಲಾಗಿದೆ. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅನ್ನೋ ಈ ಇಬ್ಬರೂ, ರಾಜಕೀಯ ಚಾಣಾಕ್ಷರು. ಅವರು ಒಂದು ಟಾರ್ಗೆಟ್ ಫಿಕ್ಸ್ ಮಾಡ್ಕೊಂಡ ಮೇಲೆ, ಅದನ್ನ ಸಾಧಿಸದೇ ಬಿಡೋದಿಲ್ಲ. ಈಗ ಅವರ ಮೇನ್ ಟಾರ್ಗೆಟ್ ಆಗಿರೋದು, ಲೋಕಸಭಾ ಚುನಾವಣೆ. ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿ ಪಟ್ಟದಲ್ಲಿ ಕೂರಿಸೋದಕ್ಕೆ, ಕೇಸರಿ ಪಾಳಯ ಸನ್ನದ್ಧವಾಗ್ತಾ ಇದೆ. ಅದೇ ಥರ, ತಮ್ಮ ಪಕ್ಷವನ್ನ ಮತ್ತೆ ಗೆಲ್ಲಿಸೋದಕ್ಕೆ ಮೋದಿ ಅವರೂ ಕೂಡ ಸರ್ವಥಾ ಸನ್ನದ್ಧರಾಗ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಗ್ಯಾರಂಟಿ “ತುತ್ತು”, ಮಿಷನ್ 20 “ಮತ್ತು”, ಯಾರಿಗೆ ಆಪತ್ತು..?: ಲೋಕಯುದ್ಧದಲ್ಲಿ ಗ್ಯಾರಂಟಿಗಳೇ ಕಾಂಗ್ರೆಸ್ ಟ್ರಂಪ್‌ಕಾರ್ಡ್..!