'777 ಚಾರ್ಲಿ' ನೋಡಿ ಸಿಗರೇಟು ಬಿಡ್ತಾ ಇದ್ದೀನಿ ಅಂತ ಒಬ್ರು ಹೇಳಿದ್ರು; ನಟಿ ಸಂಗೀತಾ

777 ಚಾರ್ಲಿ ಸಿನಿಮಾದಲ್ಲಿ ನಟಿ ಸಂಗೀತಾ, ದೇವಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿದ ಸಂಗೀತಾ ಪಾರ್ಟ್‌2ನಲ್ಲಿ ಧರ್ಮ ಮತ್ತು ದೇವಿಕಾಗೆ ಲವ್ ಆಗುತ್ತಾ ಎಂದು ಕೇಳಿದ್ದಕ್ಕೆ, ಒಂದು ವೇಳೆ ಹಾಗೆ ಆದರೆ ಚಾರ್ಲಿಗೆ ಅರ್ಥವಿರಲ್ಲ ಎಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಕಿರಣ್ ರಾಜ್ ನಿರ್ದೇಶನದ 777 ಚಾರ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಭಾಷೆಯ ಪ್ರೇಕ್ಷಕರು ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಸಂಗೀತಾ, ದೇವಿಕಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಬಗ್ಗೆ ಮಾತನಾಡಿದ ಸಂಗೀತಾ ಪಾರ್ಟ್‌2ನಲ್ಲಿ ಧರ್ಮ ಮತ್ತು ದೇವಿಕಾಗೆ ಲವ್ ಆಗುತ್ತಾ ಎಂದು ಕೇಳಿದ್ದಕ್ಕೆ, ಒಂದು ವೇಳೆ ಹಾಗೆ ಆದರೆ ಚಾರ್ಲಿಗೆ ಅರ್ಥವಿರಲ್ಲ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ರಕ್ಷಿತ್ ಶೆಟ್ಟಿಯ ತುಂಬಾ ಇಷ್ಟದ ಸಿನಿಮಾದ ಬಗ್ಗೆಯೂ ಮಾತನಾಡಿದ್ದಾರೆ. ಉಳಿದವರು ಕಂಡಂತೆ ಸಿನಿಮಾ ತುಂಬಾ ಇಷ್ಟ ಎಂದು ಸಂಗೀತಾ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video