ಶಾರುಖ್ ಖಾನ್ ಜೊತೆ ರಾಕಿಭಾಯ್ ? ಜವಾನ್ ಸಿನಿಮಾದಲ್ಲಿ ಯಶ್ ಪಾತ್ರವೇನು?
ಜವಾನ್ ಸಿನಿಮಾ ಸೆ.7ನೇ ತಾರೀಖು ವಿಶ್ವಾದ್ಯಂತ ತೆರೆಕಾಣುತ್ತಿದೆ. ಜವಾನ್ ಸಿನಿಮಾ ಹಿಂದಿ ಮಾತ್ರವಲ್ಲ ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.
ಕುತೂಹಲ ಹುಟ್ಟುಹಾಕಿದೆ ಗಾಂಧಿನಗರದಲ್ಲಿ ಜವಾನ್ ರಿಲೀಸ್. ಒಂದು ಟೈಮ್‌ನಲ್ಲಿ ಶಾರುಖ್ ಖಾನ್(Shah Rukh Khan) ಜೀರೋ ಸಿನಿಮಾ ರಿಲೀಸ್ ಆದಾಗ ಅದರ ಎದುರಲ್ಲೆ ರಿಲೀಸ್ ಆದ ಯಶ್ ಕೆಜಿಎಫ್ ಗೆದ್ದು ಬೀಗಿದ್ದು, ನಿಮಗೆಲ್ಲ ನೆನಪಿರಬೇಕು. ಶಾರುಖ್ ಖಾನ್ ಅಂತ ಸೂಪರ್ ಸ್ಟಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೀರೋ ಆಗಿತ್ತು. ಯಶ್ ಹೀರೋ ಆಗಿದ್ದ ಕೆಜಿಎಫ್ ನೂರಾರು ಕೋಟಿ ಕಲೆಕ್ಷನ್ ಮಾಡಿತ್ತು. ಆಗಲೂ ಯಶ್ ನಾನು ಶಾರುಖ್ ಖಾನ್ ಅವರ ದೊಡ್ಡ ಅಭಿಮಾನಿ ಎಂದಿದ್ದರು. ಇತ್ತ ಶಾರುಖ್ ಖಾನ್ ಕೂಡ ಯಶ್ ಬಗ್ಗೆ ರಾಕಿಭಾಯ್(Raki bhai Yash) ಎಂದೇ ಉದ್ಗರಿಸಿದ್ದರು. ಬಾಲಿವುಡ್‌ನಲ್ಲಿ ಎಲ್ಲ ಸ್ಟಾರ್‌ಗಳು ಯಶ್ ಸಿನಿಮಾದತ್ತ ಒಮ್ಮೆಲೆ ತಿರುಗಿನೋಡಿದ್ದರು. ಕನ್ನಡ ಹೀರೋ.. ಕನ್ನಡ ಸಿನಿಮಾ ಈ ಮಟ್ಟಿಗೆ ಸದ್ದು ಪ್ರಭಾವ ಬೀರಿತ್ತು. ನಮ್ ಅಣ್ತಮ್ಮ ಯಶ್ ರೇಂಜೆ ಬದಲಾಗಿ ಹೋಯ್ತು. ಇದೀಗ ಶಾರುಖ್ ಖಾನ್ ಜವಾನ್ (Jawan) ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಅಟ್ಲಿ ನಿರ್ದೇಶನದ, ಅನಿರುದ್ ಸಂಗೀತ, ನಯನತಾರ ನಾಯಕಿಯಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಜವಾನ್ ಗೆ ಸೌತ್‌ನ ಸಿನಿಮಾ ಇಂಡಸ್ಟ್ರಿಯ ಬಹುತೇಕ ಸಾಥ್ ಸಿಕ್ಕಿದೆ. ಇದೀಗ ಶಾರುಖ್ ಖಾನ್ ಜವಾನ್ ಜೊತೆ ರಾಕಿಭಾಯ್ ಹೆಸರು ತಳುಕು ಹಾಕಿ ಕೊಂಡಿದೆ.
ಇದನ್ನೂ ವೀಕ್ಷಿಸಿ: Today Horoscope: ಕರ್ಕಟಕ ರಾಶಿಯವರ ಇಂದಿನ ಭವಿಷ್ಯ ಹೀಗಿದ್ದು, ಅಮ್ಮನವರ ಪ್ರಾರ್ಥನೆ ಮಾಡಿ