ದಳಪತಿ 'ಲಿಯೋ'ಗೆ ರಜನಿ ಫ್ಯಾನ್ಸ್ ಟಕ್ಕರ್..? ಶಿವಣ್ಣನ 'ಘೋಸ್ಟ್‌' ಬೆನ್ನಿಗೆ ನಿಂತ ತಲೈವಾ ಫ್ಯಾನ್ಸ್!

ಕಿಲ್ಲಿಂಗ್ ಎಂಟ್ರಿ, ಸ್ಟನ್ನಿಂಗ್ ಲುಕ್. ಕಣ್ಣು ಬಿಟ್ರೆ ಎದುರಿರೋ ರಕ್ಕಸರೆಲ್ಲಾ ಸುಟ್ಟು ಬಸ್ಮ. ನಡೆದು ಬಂದ್ರೆ ಗಜ ಗಾಂಭೀರ್ಯ. ಇಂತದ್ದೊಂದು ದೃಶ್ಯವನ್ನ ನೀವೆಲ್ಲಾ ಜೈಲರ್ ಸಿನಿಮಾದಲ್ಲಿ ನೋಡಿದ್ರಿ. ಅದು ಯಾರನ್ನ ಹೇಳಿ..? ನಮ್ಮ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣನ ನರಸಿಂಹನ ಉಗ್ರರೂಪಕ್ಕೆ ತಮಿಳು ಸಿನಿ ಜಗತ್ತೇ ತಲೆ ಬಾಗಿತ್ತು.
 

First Published Sep 15, 2023, 9:35 AM IST | Last Updated Sep 15, 2023, 9:35 AM IST

ಸ್ಯಾಂಡಲ್‌ವುಡ್‌ನಲ್ಲಿ ಕ್ರೇಜ್‌ಗೆ ಅಪ್ಪ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivaraj kumar). ಈ ಕ್ರೇಜ್ ಅಂದ್ರೆ ಏನು ಅನ್ನೋದನ್ನ ಆನಂದ್ ಸಿನಿಮಾದಿಂದಲೇ ನೋಡಿದ್ದಾರೆ ಶಿವಣ್ಣ. ಇದೀಗ ತಲೈವ ರಜನಿಯ ಜೈಲರ್‌ನಲ್ಲಿ(Jailer) ಉಗ್ರ ನರಸಿಂಹನಂತೆ ವಿಜೃಂಭಿಸಿದ್ದ ಶಿವಣ್ಣನ ಘೋಸ್ಟ್ ಮೇಲೆ ರಜನಿಕಾಂತ್ ಫ್ಯಾನ್ಸ್  ಕಣ್ಣಿಟ್ಟಿದ್ದಾರೆ. ಸುಮ್ನೆ ಕಣ್ಣಿಟ್ಟಿಲ್ಲ, ಸೆಂಚ್ಯುರಿ ಸ್ಟಾರ್ ಎದುರು ಮತ್ಯಾರು ಬರಬೇಡಿ. ಬಂದ್ರೆ ಸುಟ್ಟು ಬಸ್ಮ ಆಗ್ತೀರಾ ಅಂತಿದ್ದಾರೆ. ಕಾಲಿವುಡ್‌ನಲ್ಲಿ ರಜನಿಕಾಂತ್(Rajinikanth) ಹಾಗೂ ವಿಜಯ್ ಫ್ಯಾನ್ಸ್(Vijay Fans) ನಡುವೆ ತಿಕ್ಕಾಟ ನಡಿಯುತ್ತಿದೆ. ಹೀಗಾಗಿ ಸೂಪರ್ ಸ್ಟಾರ್ ಫ್ಯಾನ್ಸ್ ಸೇರಿ ಜೈಲರ್ ಸಿನಿಮಾವನ್ನ ಗೆಲ್ಲಿಸಿದ್ರು. ಈಗ ಜೈಲರ್‌ನ ನರಸಿಂಹ ಶಿವಣ್ಣನ ಆಕ್ಷನ್ ಎಂಟರ್‌ಟೈನರ್ 'ಘೋಸ್ಟ್'(Ghost) ತಮಿಳು, ತೆಲುಗಿನಲ್ಲೂ ಬರ್ತಿದೆ. ಹೀಗಾಗಿ ಘೋಸ್ಟ್ ಸಿನಿಮಾ ಗೆಲ್ಲಿಸಬೇಕು ದಳಪತಿಯ ಲಿಯೋಗೆ ಟಕ್ಕರ್ ಕೊಡಬೇಕು ಅಂತ ಶಿವಣ್ಣನ ಘೋಸ್ಟ್ ಬೆನ್ನಿಗೆ ನಿಂತಿದ್ದಾರೆ ರಜನಿಕಾಂತ್ ಫ್ಯಾನ್ಸ್. ಐಪಿಎಲ್ ಕ್ರಿಕೆಟ್ನಲ್ಲಿ ಆರ್ಸಿನಿ ಹಾಗು ಸಿಎಸ್ಕೆ ತಂಡಗಳ ಮಧ್ಯೆ ಹೇಗೆ ರೈವಡ್ಲ್ರಿ ಇರುತ್ತೆ ಅಂತ ನಿಮ್ಗೆ ಗೊತ್ತಲ್ವಾ. ಈಗ ಅಂತದ್ದೇ ರೈವಡ್ಲ್ರಿ ಘೋಸ್ಟ್ ಹಾಗು ಲೀಯೋ ಮಧ್ಯೆ ಏರ್ಪಟ್ಟಿದೆ ಅಂತ ಟ್ರೆಂಡ್ ಶುರುವಾಗಿದೆ. ಯಾಕಂದ್ರೆ ಈ ಎರಡೂ ಸಿನಿಮಾಗಳು ದಸರಾ ಹಬ್ಬಕ್ಕೆ ಅಕ್ಟೋಬರ್ 19ಕ್ಕೆ ಒಂದೇ ದಿನ ರಿಲೀಸ್ ಆಗ್ತಿವೆ. 

ಇದನ್ನೂ ವೀಕ್ಷಿಸಿ:  ಮೂರು ಸೋಲು ಡಾರ್ಲಿಂಗ್ ಪ್ರಭಾಸ್ ಕಂಗಾಲು..! ನಟನ ಕೈ ಹಿಡಿದೇ ಬಿಟ್ರು ವಿಜಯ್ ಕಿರಗಂದುರ್!