ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ

ದರ್ಶನ್ ಸಾರಥಿ ಸಿನಿಮಾದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ದು, ಕೈ ಮುಗಿದು ಏರು ಇದು ಕನ್ನಡದ ತೇರು ಅಂತ ಹಾಡಿದ್ದು ಹೊತ್ತೇ ಇದೆಯಲ್ವಾ. ಈಗ ನಮ್ಮ ಡಿಂಪಲ್ ಕ್ವೀನ್ ಈ ಕನ್ನಡದ ತೇರನ್ನ ಏರಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಸ್ಟೋರಿ ನೋಡಿ..

Share this Video
  • FB
  • Linkdin
  • Whatsapp

ಕನ್ನಡದ ತೇರು ಏರಿದ ರಚಿತಾ ರಾಮ್..!
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಕನ್ನಡದ ತೇರು ಏರಿದ್ದಾರೆ. ಖಾಕಿ ಯುನಿಫಾರ್ಮ್ ತೊಟ್ಟು ಆಟೋರಾಣಿ ಆಗಿದ್ದಾರೆ. ಅಷ್ಟಕ್ಕೂ ರಚ್ಚು ಆಟೋ ಚಾಲಕಿ ಪಾತ್ರ ಮಾಡ್ತಿಲ್ಲ.. ಬದ್ಲಾಗಿ ಆಟೋ ಚಾಲಕರ ಸಂಘಕ್ಕೆ ರಾಯಭಾರಿ ಆಗಿದ್ದಾರೆ.

ಡಿಂಪಲ್ ಕ್ವೀನ್ ರಚ್ಚು ಈಗ ಆಟೋ ರಾಣಿ 
ದರ್ಶನ್ ಸಾರಥಿ ಸಿನಿಮಾದಲ್ಲಿ ಆಟೋ ಚಾಲಕನ ಪಾತ್ರ ಮಾಡಿದ್ದು, ಕೈ ಮುಗಿದು ಏರು ಇದು ಕನ್ನಡದ ತೇರು ಅಂತ ಹಾಡಿದ್ದು ಹೊತ್ತೇ ಇದೆಯಲ್ವಾ. ಈಗ ನಮ್ಮ ಡಿಂಪಲ್ ಕ್ವೀನ್ ಈ ಕನ್ನಡದ ತೇರನ್ನ ಏರಿದ್ದಾರೆ.

ಖಾಕಿ ಯುನಿಫಾರ್ಮ್ ತೊಟ್ಟು ಆಟೋ ಏರಿ ಆಟೋರಾಣಿಯಾಗಿದ್ದಾರೆ ರಚಿತಾ. ಅಸಲಿಗೆ ರಚ್ಚು ಹೀಗೆ ಆಟೋ ಏರಿ ಪೋಸ್ ಕೊಟ್ಟಿರೋದು ಸಿನಿಮಾದಲ್ಲಲ್ಲ. ಬದಲಾಗಿ ರಿಯಲ್ ಲೈಫ್​ನಲ್ಲಿ.

ಆಟೋ ಚಾಲಕರ ಸಂಘಕ್ಕೆ ರಚ್ಚು ರಾಯಭಾರಿ
ಹೌದು ಆಟೋ ಚಾಲಕರ ಸಂಘ, ಡಿಂಪಲ್ ಕ್ವೀನ್ ರಚಿತಾನ ಭೇಟಿ ಮಾಡಿ ತಮ್ಮ ಸಂಘಕ್ಕೆ ರಾಯಭಾರಿ ಆಗುವಂತೆ ಕೇಳಿಕೊಂಡಿದೆ. ಅದಕ್ಕೆ ಒಂದೇ ಮಾತಲ್ಲಿ ಯೆಸ್ ಅಂದಿರೋ ರಚ್ಚು, ಆಟೋ ಚಾಲಕರ ಬೆಂಬಲಕ್ಕೆ ನಿಂತುಕೊಂಡಿದ್ದಾರೆ.

ರಾಜ್ಯಾದ್ಯಂತ ಬಹಳಷ್ಟು ಹೆಣ್ಣುಮಕ್ಕಳು ಕೂಡ ಆಟೋ ಓಡಿಸ್ತಾ ಜೀವನ ಮಾಡ್ತಿದ್ದಾರೆ. ಅಂಥ ಹೆಣ್ಣುಮಕ್ಕಳಿಗೆ ರಚಿತಾ ಸ್ಪೂರ್ತಿ ತುಂಬಿದ್ದಾರೆ,. ಇನ್ನೂ ರಚಿತಾನ ಈ ಗೆಟಪ್​ನಲ್ಲಿ ನೋಡಿದ ಫ್ಯಾನ್ಸ್ ರೀಲ್​ನಲ್ಲೂ ರಚ್ಚು ಆಟೋ ರಾಣಿ ಪಾತ್ರ ಮಾಡಲಿ. ಲೇಡಿ ಸಾರಥಿಯಾಗಿ ತೆರೆ ಮೇಲೆ ಬರಲಿ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಸ್ಟೋರಿ ನೋಡಿ..

Related Video