ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?

ಇಂಥದ್ದೊಂದು ಗಾಸಿಪ್ ಸದ್ದು ಮಾಡ್ತಾ ಇದೆ. ಕಿಚ್ಚ-ರಚ್ಚು ಮಾತನಾಡ್ತಾ ಇಲ್ವಂತೆ. ದಾಸನ ಬುಲ್ ಬುಲ್ ಕಿಚ್ಚನ ಜೊತೆ ಮಾತಾಡಕಿಲ್ಲ ಅನ್ನೋ ಸುದ್ದಿ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಇಂಥದ್ದೊಂದು ಸುದ್ದಿ ಹುಟ್ಟಿಕೊಳ್ಳೋದಕ್ಕೆ ಕಾರಣ ಖುದ್ದು ರಚಿತಾ ರಾಮ್ ಮತ್ತು ಸುದೀಪ್ ವರ್ತನೆ. ಏನಾಗಿದೆ ಇವರಿಬ್ಬರ ಮಧ್ಯೆ?

Share this Video
  • FB
  • Linkdin
  • Whatsapp

ಅಕ್ಕ ಪಕ್ಕ ಇದ್ದರೂ ಮಾತನಾಡದ ಸುದೀಪ್-ರಚಿತಾ
ಬುಲ್ ಬುಲ್ ರಚಿತಾ ದಾಸನ ಪರಮಶಿಷ್ಯೆ ಅನ್ನೋದು ಗೊತ್ತೇ ಇದೆ. ದರ್ಶನ್​ ಆಪ್ತೆ ರಚಿತಾ ಸುದೀಪ್​ ಜೊತೆಗೆ ಮಾತನಾಡೋದನ್ನೆ ಬಿಟ್ಟುಬಿಟ್ಟಿದ್ದಾರಾ..? ದರ್ಶನ್-ಸುದೀಪ್​ ನಡುವಿನ ಕಿಚ್ಚನ್ನ ರಚ್ಚು ಮುಂದುವರೆಸ್ತಾ ಇದ್ದಾರಾ..? ಇಂಥದ್ದೊಂದು ಪ್ರಶ್ನೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ. ಆ ಪ್ರಶ್ನೆ ಹುಟ್ಟಿದ್ಯಾಕೆ..? ಮತ್ತದರ ಉತ್ತರ ಏನು..? ಎಲ್ಲವೂ ಇಲ್ಲಿದೆ ನೋಡಿ.

ಯೆಸ್ ಗಾಂಧಿನಗರದಲ್ಲಿ ಇಂಥದ್ದೊಂದು ಗಾಸಿಪ್ ಸದ್ದು ಮಾಡ್ತಾ ಇದೆ. ಕಿಚ್ಚ-ರಚ್ಚು ಮಾತನಾಡ್ತಾ ಇಲ್ವಂತೆ. ದಾಸನ ಬುಲ್ ಬುಲ್ ಕಿಚ್ಚನ ಜೊತೆ ಮಾತಾಡಕಿಲ್ಲವಂತೆ ಅನ್ನೋ ಸುದ್ದಿ ಸದ್ದು ಮಾಡ್ತಾ ಇದೆ. ಅಷ್ಟಕ್ಕೂ ಇಂಥದ್ದೊಂದು ಸುದ್ದಿ ಹುಟ್ಟಿಕೊಳ್ಳೋದಕ್ಕೆ ಕಾರಣ ಖುದ್ದು ರಚಿತಾ ರಾಮ್ ಮತ್ತು ಸುದೀಪ್ ವರ್ತನೆ.

ಶುಕ್ರವಾರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಕೆ.ಪಿ ಶ್ರೀಕಾಂತ್ ನಿರ್ಮಾಣದ ಹಲ್ಕಾ ಡಾನ್ ಸಿನಿಮಾ ಮುಹೂರ್ತ ನಡೆದಿದೆ. ಈ ಮುಹೂರ್ತಕ್ಕೆ ಶಿವಣ್ಣ, ಸುದೀಪ್, ದುನಿಯಾ ವಿಜಯ್, ಸಾಯಿಕುಮಾರ್, ರಚಿತಾ ಸೇರಿದಂತೆ ಸ್ಯಾಂಡಲ್​ವುಡ್​​ ತಾರೆಯರೆಲ್ಲಾ ಬಂದಿದ್ರು. ಕಿಚ್ಚ ಸಿನಿಮಾಗೆ ಕ್ಲಾಪ್ ಮಾಡಿದ್ರು.

ಸಿನಿಮಾ ಮುಹೂರ್ತಕ್ಕೆ ಬಂದ ತಾರೆಯರೆಲ್ಲಾ ಪರಸ್ಪರ ವಿಶ್ ಮಾಡಿದ್ದಾರೆ. ಕುಶಲೋಪರಿ ವಿಚಾರಿಸಿದ್ದಾರೆ. ಆದ್ರೆ ಅಕ್ಕ ಪಕ್ಕದಲ್ಲೇ ನಿಂತಿದ್ರೂ ಕಿಚ್ಚ-ರಚ್ಚು ನಡುವೆ ಮಾತಿಲ್ಲ ಕಥೆಯಿಲ್ಲ. ಒಬ್ಬರಿಗೊಬ್ರು ಹಾಯ್ ಬಾಯ್ ಕೂಡ ಹೇಳಿಕೊಳ್ಳಲಿಲ್ಲ.

ಹೌದು ರಚಿತಾ ರಾಮ್ ದರ್ಶನ್ ಪಾಲಿಗೆ ಅದೆಷ್ಟು ಆಪ್ತೆ ಅನ್ನೋದು ಗೊತ್ತೇ ಇದೆ. ದರ್ಶನ್ ನಟನೆ-ನಿರ್ಮಾಣದ ಬುಲ್ ಬುಲ್ ಸಿನಿಮಾದಿಂದಲೇ ರಚ್ಚು ಸಿನಿ ಇಂಡಸ್ಟ್ರಿಗೆ ಬಂದಿದ್ದು. ಈಗಲೂ ದರ್ಶನ್ ನನ್ನ ಗಾಡ್ ಫಾದರ್ ಅಂತಾರೆ ರಚಿತಾ.

ಇನ್ನೂ ರಚಿತಾ ಒಂದು ಟೈಂನಲ್ಲಿ ಸುದೀಪ್ ಜೊತೆಗೂ ಕೆಲಸ ಮಾಡಿದ್ದಾರೆ. ಹತ್ತು ವರ್ಷಗಳ ಹಿಂದೆ ಬಂದ ರನ್ನ ಸಿನಿಮಾದಲ್ಲಿ ರಚ್ಚು-ಕಿಚ್ಚ ತಿತಿಲಿ ತಿತಿಲಿ ಅಂತ ಹಾಡಿ ಕುಣಿದಿದ್ರು. ಸಿನಿಮಾ ಸೂಪರ್ ಹಿಟ್ ಆಗಿತ್ತು.

ಕಿಚ್ಚನ ಮುಕುಂದ ಮುರಾರಿನಲ್ಲೂ ರಚಿತಾ ಒಂದು ಸ್ಪೆಷಲ್ ಸಾಂಗ್ ಮಾಡಿದ್ರು. ಮುಂದೆ ಸುದೀಪ್-ದರ್ಶನ್ ದೂರವಾದ ಮೇಲೆ ಕೂಡ ರಚಿತಾ, ಇಬ್ಬರ ಜೊತೆಗೂ ನಂಟು ಇಟ್ಟುಕೊಂಡಿದ್ರು.

ಆದ್ರೆ ದರ್ಶನ್ ಜೈಲು ಪಾಲಾದ ಮೇಲೆ ರಚಿತಾ ದರ್ಶನ್ ಪರ ಗಟ್ಟಿಯಾಗಿ ನಿಂತಿಕೊಂಡಿದ್ರು.ಜೈಲಿಗೆ ಹೋಗಿ ದಾಸನಿಗೆ ಧೈರ್ಯ ತುಂಬಿ ಬಂದಿದ್ರು. ಒಂದು ರೀತಿ ದರ್ಶನ್ ಫ್ಯಾನ್ಸ್ ಪಾಲಿಗೆ ರಚ್ಚು ಲೇ‘ಡಿ’ ಬಾಸ್ ಆಗಿದ್ದಾರೆ.

ಹೌದು ಹಲ್ಕಾ ಡಾನ್ ಮುಹೂರ್ತಕ್ಕೆ ಬಂದಾಗ ರಚಿತಾ, ಸುದೀಪ್ ಜೊತೆಗೆ ಮಾತನಾಡಿಲ್ಲ. ಇತ್ತೀಚಿಗೆ ಈ ಇಬ್ಬರೂ ಒಟ್ಟಿಗೆ ವೇದಿಕೆ ಹಂಚಿಕೊಂಡಿಲ್ಲ. ಬಹುಶಃ ಇಬ್ಬರ ನಡುವೆ ಮಾತು ನಿಂತು ಬಹಳವೇ ಕಾಲವಾಗಿದೆ. ಬಹುಶಃ ದರ್ಶನ್ ಫ್ಯಾನ್ಸ್ ಮೆಚ್ಚಿಸೋಕೆ ರಚ್ಚು ಹೀಗೆ ಕಿಚ್ಚನಿಂದ ದೂರವಾದ್ರಾ ಗೊತ್ತಿಲ್ಲ. ಒಟ್ನಲ್ಲಿ ಇವರಿಬ್ಬರ ನಡುವಿನ ಅಂತರ ಸ್ಯಾಂಡಲ್​ವುಡ್​​ನಲ್ಲಿ ಈಗ ಹಾಟ್ ಟಾಪಿಕ್ ಆಗಿದೆ.
ಈ ಸ್ಟೋರಿ ಕಿಕ್ ನೋಡಲು ಸಿನಿಮಾ ಹಂಗಾಮ ನೋಡಿ..

Related Video