'ಭುವನಂ ಗಗನಂ' ಚಿತ್ರದ ಬಗ್ಗೆ ನಟಿ ರಚನಾ ರೈ, ರೆಚೆಲ್ ಡೇವಿಡ್ ಹೇಳಿದ್ದೇನು?

'ಭುವನಂ ಗಗನಂ' ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾ. ಪ್ರಮೋದ್‌ಗೆ ಜೋಡಿಯಾಗಿ 'ಲವ್ ಮಾಕ್ಟೇಲ್' ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ವಾಮನ' ಸಿನಿಮಾದ ನಾಯಕಿ ರಚನಾ ರೈ ನಟಿಸುತ್ತಿದ್ದು, ಇಬ್ಬರು ನಾಯಕಿಯರು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Share this Video
  • FB
  • Linkdin
  • Whatsapp

'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಹಾಗೂ 'ರತ್ನನ್ ಪ್ರಪಂಚ' ಖ್ಯಾತಿಯ ಪ್ರಮೋದ್ ನಾಯಕರಾಗಿ ನಟಿಸ್ತಿರುವ ಹೊಸ ಸಿನಿಮಾಗೆ 'ಭುವನಂ ಗಗನಂ' ಎಂಬ ಟೈಟಲ್ ಇಡಲಾಗಿದ್ದು, ಈ ಹಿಂದೆ 'ರಾಜರು' ಎಂಬ ಚಿತ್ರ ಮಾಡಿದ್ದ ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. 'ಭುವನಂ ಗಗನಂ' ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾ. ಪ್ರಮೋದ್‌ಗೆ ಜೋಡಿಯಾಗಿ 'ಲವ್ ಮಾಕ್ಟೇಲ್' ಖ್ಯಾತಿಯ ರೆಚೆಲ್ ಡೇವಿಡ್, ಪೃಥ್ವಿಗೆ ಜೋಡಿಯಾಗಿ ವಾಮನ' ಸಿನಿಮಾದ ನಾಯಕಿ ರಚನಾ ರೈ ನಟಿಸ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ರಚನಾ ರೈ, ಸಿನಿಮಾದ ಪಾತ್ರದ ಬಗ್ಗೆ ನಿರ್ದೇಶಕರು ನನಗೆ ಏನು ಹೇಳಬಾರದು ಎಂದಿದ್ದಾರೆ. ಈ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕರಿಗೆ ಹಾಗೂ ನಿರ್ಮಾಪಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. ಇನ್ನು ಚಿತ್ರದ ಮತ್ತೊಬ್ಬ ನಟಿ ರೆಚೆಲ್ ಡೇವಿಡ್, ಇದು ನನ್ನ ಎರಡನೇ ಸಿನಿಮಾ. ತುಂಬಾ ಎಕ್ಸೈಟ್ ಆಗಿದ್ದೀನಿ. ಯಾಕಂದ್ರೆ ನನಗೆ ಟ್ರಾವೆಲ್ ಸಬ್ಜೆಕ್ಟ್ ತುಂಬಾ ಇಷ್ಟ. ನಿರ್ದೇಶಕರು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು ಎಂದು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video