ಗಂಗಮ್ಮ ಜಾತ್ರೆಯಲ್ಲಿ ‘ಪುಷ್ಪ 2’ ರೀತಿ ವೇಷ ಧರಿಸಿ ಎಂಟ್ರಿ ಕೊಟ್ಟ ಸಂಸದ !

ಪುಷ್ಪ 2ನಲ್ಲಿ ಅಲ್ಲು ಅರ್ಜುನ್‌ ಕಾಣಿಸಿಕೊಂಡಿರುವ ಡಿಫರೆಂಟ್‌ ಗೆಟಪ್‌ನನ್ನು, ತಿರುಪತಿ ಸಂಸದ ಗುರುಮೂರ್ತಿ ಹಾಕಿಕೊಂಡು ಎಲ್ಲರ ಗಮನ ಸೆಳೆದರು.

First Published May 20, 2023, 10:29 AM IST | Last Updated May 20, 2023, 10:29 AM IST

ಅಲ್ಲು ಅರ್ಜುನ್ ಅವರು ‘ಪುಷ್ಪ’ ಸಿನಿಮಾದ ಸಕ್ಸಸ್ ಅಲೆಯಲ್ಲಿದ್ದಾರೆ. ‘ಪುಷ್ಪ 2’ ಶೂಟಿಂಗ್‌ನಲ್ಲಿ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ‘ಪುಷ್ಪ 2’ ಚಿತ್ರದಲ್ಲಿನ ಅಲ್ಲು ಅರ್ಜುನ್ ಲುಕ್ ಸದ್ದು ಮಾಡಿತ್ತು. ತಿರುಪತಿ ಗಂಗಮ್ಮ ಜಾತ್ರೆಯಲ್ಲಿ ಪುಷ್ಪ 2 ಲುಕ್‌ನಂತೆಯೇ ಸಂಸದ ಗುರುಮೂರ್ತಿ ಎಂಟ್ರಿ ಕೊಟ್ಟಿದ್ದಾರೆ.  ಐಕಾನ್ ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ, ಡಾಲಿ ನಟನೆಯ ‘ಪುಷ್ಪ’ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಪುಷ್ಪ 2ನಲ್ಲಿ ಅಲ್ಲು ಅರ್ಜುನ್ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಅನೇಕರು ಅದೇ ರೀತಿ ವೇಷ ಧರಿಸಿಕೊಂಡು ರೀಲ್ಸ್ ಮಾಡಿ ಗಮನ ಸೆಳೆದಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಟ್ರೆಂಡ್ ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಇಲ್ಲಿದೆ. ತಿರುಪತಿ ಸಂಸದ ಗುರುಮೂರ್ತಿ ಅವರು ‘ಪುಷ್ಪ 2’ರೀತಿ ವೇಷ ಧರಿಸಿದ್ದಾರೆ. ಅವರ ಫೋಟೋ ವೈರಲ್ ಆಗಿವೆ.

ಇದನ್ನೂ ವೀಕ್ಷಿಸಿ: ಜಡೆ ಜಗಳ ಕೊನೆಗೂ ಮುಕ್ತಾಯ: ಏನಿದು ರಶ್ಮಿಕಾ- ಐಶ್ವರ್ಯಾ ಜಗಳ ?