ಕಾವೇರಿ ಹೋರಾಟ ಅಖಾಡಕ್ಕಿಳಿದಿದ್ದ ಪುನೀತ್,ಶಿವಣ್ಣ: ತಮಿಳುನಾಡಿನ ವಿರುದ್ಧ ಆಕ್ರೋಶಗೊಂಡಿದ್ದ ಸ್ಟಾರ್‌ಗಳು
ಈ ಹಿಂದೆ ನಡೆದಿದ್ದ ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್ ಸಾಥ್ ನೀಡಿತ್ತು. ಅಣ್ಣವ್ರ ‘ಗೋಕಾಕ್ ಚಳವಳಿ’ಯೇ ಕಾವೇರಿ ಹೋರಾಟಕ್ಕೆ ಮಾದರಿ ಎಂದು ಹೇಳಲಾಗುತ್ತಿದೆ.
ಸದ್ಯ ಕಾವೇರಿ ಹೋರಾಟ ತೀವ್ರಗೊಂಡಿದೆ. ಕಾವೇರಿ(cauvery) ನೀರು ತಮಿಳುನಾಡಿಗೆ ಹರಿದ ಹಿನ್ನೆಲೆ ರೈತರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ. ಆದ್ರೆ ಈ ಹೋರಾಟಕ್ಕೆ ಇಲ್ಲಿತನಕ ಸ್ಯಾಂಡಲ್‌ವುಡ್ ಬೆಂಬಲವನ್ನು ನೀಡಿಲ್ಲ. ಈ ಹಿಂದೆ ಅಂದರೆ 2016ರಲ್ಲಿ ನಡೆದ ಕಾವೇರಿ ಹೋರಾಟದಲ್ಲಿ ನಟ ಪುನೀತ್ ರಾಜ್‌ಕುಮಾರ್(Puneeth Rajkumar), ಶಿವರಾಜ್ ಕುಮಾರ್(Shivaraj Kumar)ಸೇರಿದಂತೆ ಹಲವಾರು ನಟರು ಭಾಗಿಯಾಗಿದ್ರು. ಇನ್ನೂ ಗೋಕಾಕ್ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ನಟ ಡಾ. ರಾಜ್‌ಕುಮಾರ್ (DR. Rajkumar) ನಟರು ಕನ್ನಡ ನಾಡು, ನುಡಿ, ಜಲಕ್ಕೋಸ್ಕರ ಹೋರಾಡಬೇಕು ಎಂದು ಹೇಳಿಕೊಟ್ಟಿದ್ದರು. ಹಾಗಾಗಿ ಸ್ಯಾಂಡಲ್‌ವುಡ್(Sandalwood) ಸ್ಟಾರ್ಸ್ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ರು.
ಇದನ್ನೂ ವೀಕ್ಷಿಸಿ: ಕನ್ನಡಪರ ಹೋರಾಟಕ್ಕಿಳಿದಿದ್ದ ಡಾ.ರಾಜ್‍ಕುಮಾರ್..! ಗೋಕಾಕ್ ಚಳವಳಿಯ ಇತಿಹಾಸವೇ ರೋಚಕ..!