ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ! ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್..!
ಶಿವಣ್ಣನ 'ಘೋಸ್ಟ್' ಭಯಕ್ಕೆ ಬೆಚ್ಚಿ ಬಿದ್ದ ಲಿಯೋ.!
ಬಾಕ್ಸಾಫೀಸ್‌ನಲ್ಲಿ ಗೆದ್ದ ಒರಿಜಿನಲ್ ಗ್ಯಾಂಗ್‌ಸ್ಟರ್..!
ಘೋಸ್ಟ್ ಸೂಪರ್ ಸಕ್ಸಸ್.. ಶಿವಣ್ಣ ಸೆಲೆಬ್ರೇಷನ್!
ಘೋಸ್ಟ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ ಎಕ್ಸ್ಟ್ರಾಡಿನರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಸಿನಿಮಾ. ದಸರಾ ಹಬ್ಬಕ್ಕೆ ಬಂದ ಘೋಸ್ಟ್(Ghost) ಒಂದೇ ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ ದಸರಾ ಧಮಾಕ ಸೃಷ್ಟಿಸಿದೆ. ಘೋಸ್ಟ್ ಒಂದು ವಾರದ ಒಟ್ಟು ಕಲೆಕ್ಷನ್ 25 ಕೋಟಿ ದಾಟಿದೆ. ಈ ಮೂಲಕ ಕನ್ನಡ ಬಾಕ್ಸಾಫೀಸ್‌ನಲ್ಲಿ ಶಿವಣ್ಣನ(Shivaraj Kumar) ಘೋಸ್ಟ್ ಜೊತೆ ಪೈಪೋಟಿಗೆ ಬಿದ್ದಿದ್ದ ತಮಿಳಿನ ವಿಜಯ್ ನಟನೆಯ ಲೀಯೋ(Leo) ಸಿನಿಮಾ ಕರ್ನಾಟಕದಲ್ಲಿ ಮೂಲೆ ಗುಂಪಾಗಿದೆ. ಶ್ರೀನಿ ನಿರ್ದೇಶನದ ಘೋಸ್ಟ್ ಸೂಪರ್ ಡೂಪರ್ ಹಿಟ್ ಲೀಸ್ಟ್ ಸೇರಿದೆ. ಹೀಗಾಗಿ ನಿರ್ಮಾಪಕ ಸಂದೇಶ್ ಎನ್ ಘೋಸ್ಟ್ ಟೀಂ ಅನ್ನ ಒಂದೆಡೆ ಗುಡ್ಡೆ ಹಾಕಿ ತಮ್ಮ ಸಿನಿಮಾ ಸಕ್ಸಸ್ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಕ್ಸಸ್ ಮೀಟ್ನಲ್ಲಿ ಶಿವರಾಜ್ ಕುಮಾರ್, ದತ್ತಣ್ಣ, ಅರ್ಜುನ್ ಜನ್ಯ, ನಿರ್ದೇಶಕ ಶ್ರೀನಿ, ನಿರ್ಮಾಪಕ ಸಂದೇಶ್ ಎನ್. ನಟ ಅಭಿಜಿತ್ ಭಾಗಿ ಆಗಿದ್ರು.
ಇದನ್ನೂ ವೀಕ್ಷಿಸಿ: 'ಟಗರು ಪಲ್ಯ'ದಲ್ಲಿ ಸಿಕ್ಕಾಪಟ್ಟೆ ಮನರಂಜನೆ: ಭರ್ಜರಿ ಬಾಡೂಟಕ್ಕೆ ರೆಡಿ ಕನ್ನಡ ಸಿನಿ ಪ್ರೇಕ್ಷಕರು..!