Puneeth Rajkumar: ಸಾಬೂನಿನಲ್ಲಿ ಅರಳಿದ ಅಪ್ಪು... ಅದ್ಭುತ ಕಲಾಕೃತಿ

* ಸಾಬೂನಿನಲ್ಲಿ ಮೂಡಿದ ನಟ ಪುನೀತ್ ರಾಜ್ ಕುಮಾರ್ ಕಲಾಕೃತಿ* ಮಂಗಳೂರಿನ ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಮೂಡಿದ ಚಿತ್ರ* ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ* ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಮೂಡಿದ ಸಾಬೂನು ಕಲಾಕೃತಿ

Share this Video
  • FB
  • Linkdin
  • Whatsapp

ಮಂಗಳೂರು (ಮಾ. 16) ಅಗಲಿದ ಪುನೀತ್ ರಾಜ್ ಕುಮಾರ್ (Puneeth rajkumar) ಅವರ ಸ್ಮರಣೆಯನ್ನು ಪ್ರತಿಯೊಬ್ಬರು ಮಾಡಿಕೊಳ್ಳುತ್ತಲೇ ಇದ್ದಾರೆ. ಸಾಬೂನಿನಲ್ಲಿ (Soap Carving) ಪುನೀತ್ ರಾಜ್ ಕುಮಾರ್ ಅರಳಿದ್ದಾರೆ. ಅದ್ಭುತವಾಗಿದೆ ಪುನೀತ್ ರಾಜ್ ಕುಮಾರ್ ಅವರ ಕಲಾಕೃತಿ.

Add Asianetnews Kannada as a Preferred SourcegooglePreferred

ಮಂಗಳೂರಿನ (Mangaluru) ಚಿತ್ರಕಲಾವಿದ ದೇವಿಕಿರಣ್ ಗಣೇಶ್ ಪುರ ಕೈಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಚಿತ್ರ ಮೂಡಿದೆ. ಅಪ್ಪು ಹುಟ್ಟಿದ ಹಬ್ಬಕ್ಕೆ ಪುನೀತ್ ಅಪ್ಪಟ ಅಭಿಮಾನಿಯ ಉಡುಗೊರೆ ನೀಡಿದ್ದಾರೆ. ಸತತ ಎರಡು ಗಂಟೆಗಳ ಪರಿಶ್ರಮದಲ್ಲಿ ಸಾಬೂನು ಕಲಾಕೃತಿ ಮೂಡಿದೆ. ಸಾಬೂನಿನಲ್ಲಿ ಮೂಡಿದ ಅಪ್ಪು ಕಲಾಕೃತಿಯ ಮೇಕಿಂಗ್ ವಿಡಿಯೋ ವೈರಲ್ (Video Viral) ಆಗುತ್ತಿದೆ. ಜೇಮ್ಸ್ ಸಿನಿಮಾ ಬಿಡುಗಡೆ ಹೊತ್ತಲ್ಲಿ ಇದೊಂದು ಅದ್ಭುತ ಕಲಾಕೃತಿ ಮೂಡಿಬಂದಿದೆ.

ಜಗಣ್ಣ ಈ ವರ್ಷ ಹುಟ್ಟುಹಬ್ಬ ಆಚರಿಸುವುದಿಲ್ಲ, ಅಪ್ಪುಗಾಗಿ ಮಹತ್ವದ ನಿರ್ಧಾರ!

ಹಲವು ವೇದಿಕೆಗಳಲ್ಲಿ ಅಪ್ಪು ಲೈವ್ ಆರ್ಟ್ ಮೂಲಕ ಕೈಚಳಕ ತೋರಿದ್ದ ದೇವಿಕಿರಣ್ ಈಗ ಮತ್ತೊಂದು ಸಾಹಸ ಮಾಡಿದ್ದಾರೆ. 'ಕಷ್ಟಪಟ್ಟು, ಇಷ್ಟಪಟ್ಟು ಸಾಬೂನಿನಲ್ಲಿ ಕೆತ್ತಿ ಪುನೀತ್ ರ ಚಿತ್ರ ಮಾಡಿದ್ದೇನೆ' 'ಬೇರೆ ಯಾವುದರಲ್ಲೂ ಮಾಡೋದು ಬೇಡ ಅಂತ ಸಾಬೂನಿನಲ್ಲಿ ಮಾಡಿ ಅವರಿಗೆ ಅರ್ಪಿಸಿದ್ದೇನೆ 'ಅವರನ್ನ ಭೇಟಿಯಾಗಲು ಸಾಧ್ಯವಾಗಿಲ್ಲ, ಆದ್ರೆ ಈ ಮೂಲಕ ಅವರನ್ನ ನೆನಪು ಮಾಡಿಕೊಳ್ತೇನೆ' 'ಜೇಮ್ಸ್ ಸಿನಿಮಾ ನೋಡೋಕೆ ಕಾತರನಾಗಿದ್ದೇನೆ, ಮೊದಲ ಶೋ ನೋಡಲು ಆಸೆ ಆಗ್ತಿದೆ ಎಂದು ತಿಳಿಸಿದ್ದಾರೆ.

Related Video