James 2022: ಪುನೀತ್ 'ಟ್ರೇಡ್‌ಮಾರ್ಕ್' ಹಾಡು ನೋಡಿ ಥ್ರಿಲ್ ಆದ ಅಭಿಮಾನಿಗಳು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' ಸಾಂಗ್ ಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ತೆರೆಮೇಲೆ ಪುನೀತ್‌ ರಾಜ್‌ಕುಮಾರ್ ಭರ್ಜರಿ ಸ್ಟೆಪ್ಸ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ 'ಜೇಮ್ಸ್' (James) ಸಾಂಗ್ ಶಿವರಾತ್ರಿ ಹಬ್ಬದಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ತೆರೆಮೇಲೆ ಪುನೀತ್‌ ರಾಜ್‌ಕುಮಾರ್ ಭರ್ಜರಿ ಸ್ಟೆಪ್ಸ್‌ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಇನ್ನು ಈ ಹಾಡು ರಿಲೀಸ್‌ ಆದ ಕೆಲವೇ ನಿಮಿಷಗಳಲ್ಲೇ ಸೋಶಿಯಲ್‌ ಮೀಡಿಯಾದಲ್ಲಿ 'ಟ್ರೇಡ್‌ಮಾರ್ಕ್' (Trademark) ವೈರಲ್‌ ಆಗಿತ್ತು, ಹಾಡಿಗೆ ಮತ್ತು ಪುನೀತ್‌ ಡ್ಯಾನ್ಸ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ವಿಶೇಷವಾಗಿ ಅಪ್ಪು ಅಭಿಮಾನಿಗಳು ಈ ಹಾಡನ್ನು ಸ್ವಾಗತಿಸುವುದಕ್ಕೆ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. 

James 2022: ಮಹಾಶಿವರಾತ್ರಿಗೆ ರಿಲೀಸ್ ಆಯ್ತು ಪವರ್ ಪ್ಯಾಕ್ಡ್ 'ಟ್ರೇಡ್​ಮಾರ್ಕ್' ಸಾಂಗ್

ಹೌದು! ಬೆಂಗಳೂರಿನ ವಿಜಯನಗರ ಮೈದಾನದಲ್ಲಿ ದೊಡ್ಡ ಎಲ್‌ಇಡಿ ಅಳವಡಿಸಿ 'ಜೇಮ್ಸ್' ಸಿನಿಮಾದ 'ಟ್ರೇಡ್‌ಮಾರ್ಕ್' ಹಾಡನ್ನು ಪ್ರದರ್ಶನ ಮಾಡಲಾಯಿತು. ಈ ಅದ್ಧೂರಿ ಕಾರ್ಯಕ್ರಮಕ್ಕೆ ನೂರಾರು ಜನ ಅಭಿಮಾನಿಗಳು ಆಗಮಿಸಿದ್ದರು. 'ಟ್ರೇಡ್‌ಮಾರ್ಕ್' ಹಾಡು ಬರುತ್ತಿದ್ದಂತೆ ಅಪ್ಪುಗೆ ಜೈಕಾರ ಹಾಕಿ ಅಭಿಮಾನಿಗಳು ಕುಣಿದು ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದೆ. 'ಜೇಮ್ಸ್' ಚಿತ್ರಕ್ಕೆ ಚೇತನ್ ಕುಮಾರ್ (Chetan Kumar) ಆಕ್ಷನ್ ಕಟ್ ಹೇಳಿದ್ದು, ಪುನೀತ್ ಹುಟ್ಟುಹಬ್ಬ ಮಾರ್ಚ್ 17ರಂದು 'ಜೇಮ್ಸ್' ಸಿನಿಮಾ ತೆರಕಾಣಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video