ಅಪ್ಪು ಅಭಿಮಾನದಲ್ಲಿ ಮಿಂದೇಳಲು ರೆಡಿಯಾಗಿ: ಪುನೀತ ಪರ್ವ ಕಾರ್ಯಕ್ರಮ ಹೇಗೆ ನಡೆಯುತ್ತೆ ಗೊತ್ತಾ?
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಅಭಿಮಾನ.. ಆರಾಧನೆ.. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಅಭಿಮಾನದ ಉತ್ಸವ ಒಂದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಆ ಅಭಿಮಾನದ ಉತ್ಸವಕ್ಕೆ ಪುನೀತ್ ಪರ್ವ ಅಂತ ಹೆಸರಿಟ್ಟಿದ್ದು, ಮತ್ತೆ ಅಪ್ಪುಗೆ ನಮನ ಸಲ್ಲಿಸೋ ಅವಕಾಶ ಬರುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಂದ್ರೆ ಅಭಿಮಾನ.. ಆರಾಧನೆ.. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಅಭಿಮಾನದ ಉತ್ಸವ ಒಂದಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಆ ಅಭಿಮಾನದ ಉತ್ಸವಕ್ಕೆ ಪುನೀತ್ ಪರ್ವ ಅಂತ ಹೆಸರಿಟ್ಟಿದ್ದು, ಮತ್ತೆ ಅಪ್ಪುಗೆ ನಮನ ಸಲ್ಲಿಸೋ ಅವಕಾಶ ಬರುತ್ತಿದೆ. ಈ ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಭಿಮಾನದ ಹೊಳೆಯೇ ಹರಿಯೋದು ಗ್ಯಾರಂಟಿ. ಜನ ಸಾಗರದ ಜೊತೆ ಅಭಿಮಾನ ಹೊಳೆಯಲ್ಲಿ ತೇಲೋ ಪುನೀತ ಪರ್ವ ಕಾರ್ಯಕ್ರಮ ಅ. 21ಕ್ಕೆ ನಡೆಯುತ್ತಿದೆ. ಗಂಧದಗುಡಿ ನೆಪದಲ್ಲಿ ನಡೆಯುತ್ತಿರೋ ಈ ಅದ್ಧೂರಿ ಕಾರ್ಯಕ್ರಮ ಇತಿಹಾಸದ ಪುಟದಲ್ಲಿ ಸೇರಬೇಕೆನ್ನುವ ಆಸೆ ಅಪ್ಪು ಬಳಗದ್ದು.
ಹೀಗಾಗಿ ಪುನೀತ ಪರ್ವಕ್ಕೆ ಭಾರತೀಯ ಚಿತ್ರರಂಗದ ಬಿಗೆಸ್ಟ್ ಸ್ಟಾರ್ಸ್‌ಗಳಿಗೆ ಆಹ್ವಾನ ನೀಡಲಾಗುತ್ತಿದೆ. ಪುನೀತ ಪರ್ವ ಕಾರ್ಯಕ್ರಮದ ದಿನ ಪುನೀತ್ ಮೇಲಿನ ಪ್ರೀತಿ ಅಭಿಮಾನ ಭಕ್ತಿ ಯಾವ ಮಟ್ಟದ್ದು ಅಂತ ಫ್ಯಾನ್ಸ್ ತೋರಿಸುತ್ತಾರೆ. ಈ ಸುಂದರ ಕ್ಷಣವನ್ನ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಸ್ ಆಗಿರೋ ಬಿಗ್ ಬಿ ಅಮಿತಾ ಬಚ್ಚನ್, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಲಾಲ್, ಜ್ಯೂ, ಎನ್ಟಿಆರ್, ವಿಶಾಲ್, ವಿಕ್ಟರಿ ವೆಂಕಟೇಶ್, ಬಾಲಯ್ಯ ಸೇರಿದಂತೆ ಹಲವು ಸ್ಟಾರ್ಸ್ ಕಣ್ತುಂಬಿಕೊಳ್ಳಲಿದ್ದಾರೆ. ಯಾಕಂದ್ರೆ ಇವರಿಗೆಲ್ಲಾ ಅಪ್ಪು ಪರ್ವದ ಆಹ್ವಾನ ಹೋಗಿದೆ.
ರಿಷಬ್ ಶೆಟ್ಟರ 'ಕಾಂತರ' ಗೆಲುವಿನ ಹಿಂದಿದೆಯಾ ದೈವ ಶಕ್ತಿ? ಪ್ಯಾನ್ ಇಂಡಿಯಾ ಆಗಿದ್ದು ಇದೇ ಕಾರಣಕ್ಕಾ?
ಪುನೀತ ಪರ್ವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಾಗಿ ಮಾಡುತ್ತಿರೋ ಕೊನೆಯ ಬಿಗ್ಗೆಸ್ಟ್ ಪ್ರೋಗ್ರಾಂ. ಈ ಕಾರ್ಯಕ್ರವನ್ನ ಚಂದಗಾಣಿಸೋ ಸಂಪುರ್ಣ ಜವಾಬ್ಧಾರಿ ದೊಡ್ಮನೆ ಮೂರನೇ ತಲೆಮಾರು ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್, ಹಾಗು ಧೀರೆನ್ ರಾಮ್‌ಕುಮಾರ್ ಹೆಗಲ ಮೇಲಿದೆ. ಈ ಮೂವರು ಸೇರಿ ಕಾರ್ಯಕ್ರಮಕ್ಕೆ ಬರೋ ಗೆಸ್ಟ್‌ಗಳಿಗೆ ಆಹ್ವಾನ ನೀಡುತ್ತಿದ್ದಾರೆ. ಇದರ ಜೊತೆಗೆ ವೇದಿಕೆ ಕಾರ್ಯಕ್ರಮದ ಸಂಪುರ್ಣ ಹೊಣೆ ಯುವ ರಾಜ್‌ಕುಮಾರ್ ವಹಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಪುನೀತ ಪರ್ವ ಕಾರ್ಯಕ್ರಮದ ಕೇಂದ್ರ ಬಿಂದು ಆಗುತ್ತಿದ್ದಾರೆ. ಯಶ್, ಕಿಚ್ಚ ಸುದೀಪ್, ರವಿಂಚದ್ರನ್, ರಮೇಶ್ ಅರವಿಂದ್, ಉಪೇಂದ್ರ ಆದಿಯಾಗಿ ಕನ್ನಡದ ಎಲ್ಲಾ ಸ್ಟಾರ್ಸ್‌ಗೆ ಕಾರ್ಯಕ್ರಮ ಆಹ್ವಾನ ಹೋಗಿದೆ.
ಅಪ್ಪು ಜೊತೆ ನಟಿಸಿದ ಕಲಾವಿಧರು, ತಂತ್ರಜ್ಞರು, ಹೀರೋಯಿನ್‌ಗಳಿಗೆ ಕರೆಯೋಲೆ ಹೋಗಿದೆ. ಹೀಗಾಗಿ ಆ ದಿನ ಸ್ಯಾಂಡಲ್‌ವುಡ್‌ನ ಎಲ್ಲಾ ಹೀರೋ ಹೀರೋಯಿನ್ಸ್, ಸಹ ಕಲಾವಿಧರು, ತಂತ್ರಜ್ಞರು ಕೆಲಸಕ್ಕ ರಜೆ ಹಾಕಿ ಪ್ರೋಗ್ರಾಂಗೆ ಬರಲಿದ್ದಾರೆ. ಇದರ ಜೊತೆಗೆ ಮುಖ್ಯಂತ್ರಿಗಳು, ಕೇಂದ್ರ ಸಚಿವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಇನ್ನು ಈ ಪುನೀತ ಪರ್ವಕ್ಕೆ ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ. ಯಾಕಂದ್ರೆ ಅಪ್ಪು ಅಭಿಮಾನಿಗಳಿಗೆ ಕಾರ್ಯಕ್ರಮಕ್ಕೆ ಬರಲು ಮುಕ್ತ ಅವಕಾಶ ಇದೆ. ಸ್ಯಾಂಡಲ್‌ವುಡ್‌ನ ಹೀರೋಯಿನ್ಸ್ ಹಾಗು ಹೀರೋಗಳಿಂದ ಡಾನ್ಸ್ ಪರ್ಫಾಮೆನ್ಸ್ ಇರುತ್ತೆ. ಬಾಂಬೆಯ ಟೀಂ ಒಂದು ಈ ಡಾನ್ಸ್ ಪರ್ಫಾಮೆನ್ಸ್‌ನಲ್ಲಿ ಪಾರ್ಟಿಸಿಪೆಟ್ ಮಾಡಲಿದ್ದಾರೆ. ಒಟ್ಟಿನಲ್ಲಿ ಆ ದಿನ ಅಪ್ಪು ಅಭಿಮಾನದ ಕಡಲು ಸೃಷ್ಟಿಯಾಗೋದಂತು ಪಕ್ಕಾ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment