ರಿಷಬ್ ಶೆಟ್ಟರ 'ಕಾಂತರ' ಗೆಲುವಿನ ಹಿಂದಿದೆಯಾ ದೈವ ಶಕ್ತಿ? ಪ್ಯಾನ್ ಇಂಡಿಯಾ ಆಗಿದ್ದು ಇದೇ ಕಾರಣಕ್ಕಾ?

ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಬಾಲಿವುಡ್‌ನಲ್ಲಿ ಬರೋಬ್ಬರಿ 2500 ಸ್ಕ್ರೀನ್‌ಗಳಲ್ಲಿ ಕಾಂತಾರ ಬಿಡುಗಡೆ ಆಗುತ್ತಿರೋದು ಈ ದೈವದ ಮತ್ತೊಂದು ಪವಾಡ ಅಂತ ಹೇಳಲಾಗ್ತಿದೆ.

First Published Oct 14, 2022, 7:27 PM IST | Last Updated Oct 14, 2022, 7:27 PM IST

ಕಾಂತಾರ.. ಅನ್ನೋ ಹೆಸರು ದೇಶದ ಸಿನಿಮಾ ಜಗತ್ತಿನಲ್ಲಿ ದಿಗ್ಬಂಧನ ಹಾಕಿದೆ. ಯಾವ ಸಿನಿಮಾ ರಂಗಕ್ಕೆ ಹೋದ್ರು ಕಾಂತಾರದ ಬಗ್ಗೆ ಮಾತನಾಡದೇ ಮುಂದೆ ಹೋಗೋಕೆ ಸಾಧ್ಯವಾಗುತ್ತಿಲ್ಲ. ಇಷ್ಟು ದಿನ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಕಾಂತಾರ ಈಗ ಪ್ಯಾನ್ ಇಂಡಿಯಾ ಆಗಿದೆ. ಸಿನಿಮಾ ಪ್ರೇಕ್ಷಕರ ಬಹು ದೊಡ್ಡ ಬೇಡಿಕೆಯ ಮೇರೆಗೆ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೈವಗಳ ಘರ್ಜನೆ ಕೇಳೋಕೆ ಶುರುವಾಗಿದೆ. ಕನ್ನಡಕ್ಕೆ ಮಾತ್ರ ಸೀಮಿತ ಆಗಿದ್ದ ಕಾಂತಾರ ಸಿನಿಮಾ ದೈವಗಳ ಶಕ್ತಿಯಿಂದಲೇ ಪ್ಯಾನ್ ಇಂಡಿಯಾ ಸಿನಿಮಾ ಆಯ್ತಾ ಅನ್ನೋ ಚರ್ಚೆಗಳು ಶುರುವಾಗಿವೆ. ಯಾವ್ದೇ ಕೆಲಸ ಆಗ್ಲಿ. ಆ ಕೆಲಸವನ್ನ ಭಕ್ತಿಯಿಂದ ಮಾಡಿದ್ರೆ ಆ ಕೆಲಸದ ಫಲ ಸಿಕ್ಕೇ ಸಿಗುತ್ತೆ. ಕಾಂತಾರ ಸಿನಿಮಾವನ್ನು ಕೂಡ ನಿರ್ದೇಶಕ ರಿಷಬ್ ಶೆಟ್ಟಿ ಭಕ್ತಿಪೂರ್ವಕವಾಗೆ ಮಾಡಿದ್ದಾರೆ. ಹೀಗಾಗಿ ಕಾಂತಾರದಲ್ಲಿ ತೋರಿಸಿದ ಗುಳಿಗ ಹಾಗು ಪಂಜುರ್ಲಿ ದೈವಗಳು ಈ ಸಿನಿಮಾ ಗೆಲುವಿನ ಶಕ್ತಿ ಅಂತ ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. 

ಅದಕ್ಕೆ ಮೊದಲ ಸಾಕ್ಷಿಯೇ, ಈ ಗುಳಿಗ ಹಾಗು ಪಂಜುರ್ಲಿ ದೈವಗನ್ನ ಆರಾಧಿಸೋ ನಟ ರಕ್ಷಿತ್ ಶೆಟ್ಟಿ. ಕಾಂತಾರ ಸಿನಿಮಾ ಬಿಡುಗಡೆಗು ಮೊದಲು ನಡೆಯೋ ಪ್ರೀಮಿಯರ್ ಶೋನಲ್ಲಿ ನಟ ರಕ್ಷಿತ್ ಶೆಟ್ಟಿ ಸಿನಿಮಾ ನೋಡಿ ಕೂತಿದ್ದ ಜಾಗದಿಂದಲೇ ಓಡಿಬಂದು ರಿಷಬ್ ಶೆಟ್ಟಿಯನ್ನ ಅಪ್ಪಿಕೊಂಡಿದ್ರು. ಆಗ್ಲೆ ಗೊತ್ತಾಗಿತ್ತು ಕಾಂತಾರ ದೊಡ್ಡ ಹೆಸರು ಖ್ಯಾತಿ, ಕೀರ್ತಿ ಎಲ್ಲವನ್ನೂ ಮಾಡುತ್ತೆ ಅಂತ. ಚಿತ್ರಮಂದಿರದಲ್ಲಿ ಕಾಂತಾರ ಸಿನಿಮಾ ನೋಡುತ್ತಿದ್ದ ವ್ಯಕ್ತಿ ಮೇಲೆ ದೈವ ಬಂದಿದ್ದ ವೀಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ್ರೆ ಗೊತ್ತಾಗುತ್ತೆ ಕಾಂತಾರ ಸಿನಿಮಾ ಪ್ರೇಕ್ಷಕರ ಮನಸ್ಸನ್ನ ಎಷ್ಟು ಆವರಿಸಿಕೊಲ್ಳುತ್ತೆ ಅಂತ. ಎಂಟರ್ಟೈನ್ಮೆಂಟ್ ಜೊತೆಗೆ ದೈವದ ಮೇಲೆ ಭಕ್ತಿ ಭಾವ ಮೂಡವಂತೆ ಮಾಡಿದೆ ಕಾಂತಾರ. ಕಾಂತಾರ ಸಿನಿಮಾ ಬಂದ ಮೇಲೆ ಮಂಗಳೂರಿನಲ್ಲಿ ಘಟನೆಯೊಂದು ನಡೆದಿತ್ತು. ಶಾರದೋತ್ಸವದ ಬ್ಯಾನರ್ ಒಂದನ್ನ ಕಿಡಿಗೇಡಿಗಳು ಹರಿದು ಹಾಕಿದ್ರು. ಕೊನೆಗೆ ಶಾರದೋತ್ಸವ ಮಾಡೋ ಸಂಘ ಆ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿ ಆಗಲಿ ಅಂತ ಗುಳಿಗ ದೈವಕ್ಕೆ ಬೇಡಿಕೊಂಡಿದ್ರು. 

ಗುಳಿಗ ದೈವಕ್ಕೆ ಬೇಡಿಕೊಂಡ ಕೆಲವೇ ಹೊತ್ತಲ್ಲಿ ಆ ಕಿಡಿಗೇಡಿಗಳು ಅರೆಸ್ಟ್ ಆಗಿದ್ರು. ಇದೂ ಕಾಂತಾರ ಸಿನಿಮಾ ಟೈಂನಲ್ಲೇ ಆಗಿದ್ದು ವಿಶೇಷವಾಗಿತ್ತು. ಅಷ್ಟೆ ಅಲ್ಲ ಕಾಂತಾರ ಸಿನಿಮಾದ ಮೇಲೆ ದೈವನ ಅನುಗ್ರಹ ಇದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆಯೂ ಇದೆ. ಕಾಂತಾರ ಸಿನಿಮಾ ಮಾಡಿರೋ ನಿರ್ದೇಶಕ ರಿಷಬ್ ಶೆಟ್ಟಿ, ಈ ಕಥೆಯನ್ನ ಸಿನಿಮಾ ಮಾಡಬಹುದಾ ಅಂತ ಪಂಜುರ್ಲಿ ದೈವದ ಬಳಿ ಕೇಳಿದ್ರಂತೆ. ಆಗ ಪಂಜುರ್ಲಿ ತನ್ನ ಮುಖಕ್ಕೆ ಹಚ್ಚಿಕೊಂಡಿದ್ದ ಬಣ್ಣವನ್ನ ರಿಷಬ್ ಶೆಟ್ಟಿ ಮುಖಕ್ಕೆ ಬಳಿದು ಮಾಡು ಹೋಗು ಎಂದು ಒಪ್ಪಿಕೊಂಡಿತ್ತಂತೆ. ಹೀಗಾಗಿ ಈ ಸಿನಿಮಾ ದೊಡ್ಡ ಹಿಟ್ ಆಗಿದೆ. ಕಾಂತಾರ ಗೆಲುವಿಗೆ ದೈವದ ಆಶೀರ್ವಾಧವೇ ಕಾರಣ ಅಂತ ಕಾಂತಾರ ಟೀಂ ಹೇಳಿಕೊಳ್ಳುತ್ತಿದ್ದಾರೆ. ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಈ ಚಿತ್ರ ಹಿಂದಿಯಲ್ಲೂ ಬಿಡುಗಡೆ ಆಗುತ್ತಿದೆ. ಬಾಲಿವುಡ್‌ನಲ್ಲಿ ಬರೋಬ್ಬರಿ 2500 ಸ್ಕ್ರೀನ್‌ಗಳಲ್ಲಿ ಕಾಂತಾರ ಬಿಡುಗಡೆ ಆಗುತ್ತಿರೋದು ಈ ದೈವದ ಮತ್ತೊಂದು ಪವಾಡ ಅಂತ ಹೇಳಲಾಗ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment