ರಾಜ್ಯಾದ್ಯಂತ ತೆರೆಗೆ ಬಂದಿದೆ ಕೊತ್ತಲವಾಡಿ: ಹಳ್ಳಿ ಕಥೆಗೆ ಪೃಥ್ವಿ ಅಂಬರ್ ಮಾಸ್ ಟಚ್!

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಸದ್ಯ ಅದೇ ಭರವಸೆಯೊಂದಿಗೆ ಚಿತ್ರ ನೋಡಿದ ಪ್ರೇಕ್ಷಕರು ಏನಂದ್ರು..? ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಚಿತ್ರತಂಡದವರು ಏನಂದ್ರು. ನೋಡೋಣ ಬನ್ನಿ.

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಾಣದ ಕೊತ್ತಲವಾಡಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬಂದಿದೆ. ಪೃಥ್ವಿ ಅಂಬರ್-ಕಾವ್ಯ ಶೈವ ನಟಿಸಿರೋ ಈ ಸಿನಿಮಾ ತನ್ನ ಟ್ರೈಲರ್ & ಸಾಂಗ್ಸ್ ನಿಂದ ಭರವಸೆ ಮೂಡಿಸಿತ್ತು. ಈ ಸಿನಿಮಾ ಔಟ್ ಅಂಡ್ ಔಟ್ ಹಳ್ಳಿ ಸೊಗಡಿನ ಕಥೆಯಾಗಿದೆ. ರಾಜ್ಯದೆಲ್ಲೆಡೆ ಮರಳು ಮಾಫಿಯಾ ನಡೆಯುತ್ತದೆ ಅನ್ನೋ ಸುದ್ದಿ ಕೇಳ್ತಾನೆ ಇರ್ತೀವಿ. ಇಂಥದ್ದೇ ಕಥೆಯನ್ನು ಕೊತ್ತಲವಾಡಿ ಒಳಗೊಂಡಿದೆ. ಕೊತ್ತಲವಾಡಿ ಹಳ್ಳಿ ಸುತ್ತ ಹಚ್ಚ ಹಸಿರ ಅರಣ್ಯ. ಇದರ ಮಧ್ಯೆ ಕಾವೇರಿ ನದಿ ಹರಿದು ಹೋಗುತ್ತದೆ. ಈ ನದಿಗೂ ಕೊತ್ತಲವಾಡಿ ಹಳ್ಳಿಯ ಜನರಿಗೂ ಒಂದು ಸಂಬಂಧವಿದೆ. ಅದು ಏನು ಅನ್ನೋದನ್ನು ನೀವು ಚಿತ್ರಮಂದಿರಗಳಲ್ಲೇ ನೋಡಬೇಕು.

ಪಕ್ಕಾ ಹಳ್ಳಿ ಹೈದನಾಗಿ ಪೃಥ್ವಿ ಅಂಬಾರ್​ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದಾರೆ. ಅತ್ಯುತ್ತಮ ಅಭಿನಯದ ಜೊತೆಗೆ ಆ್ಯಕ್ಷನ್​​ನಿಂದಾಗಿ ಸಖತ್​ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಪ್ರೇಯಸಿಯಾಗಿ ಕಾವ್ಯ ಶೈವ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಗುಜಾರಿ ಬಾಬು ಎಂಬ ಸಮಾಜ ಸೇವಕನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ಅವರು ಕುತಂತ್ರಿಯಾಗಿ ಕೊತ್ತಲವಾಡಿ ಚಿತ್ರಪೂರ್ತಿ ಅವರಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ನಟರಂಗ, ಅವಿನಾಶ್, ಬಲ ರಾಜ್ವಾಡಿ ಹಾಗೂ ರಘು ರಾಮನಕೊಪ್ಪ ತಮಗೆ ಕೊಟ್ಟ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಸದ್ಯ ಅದೇ ಭರವಸೆಯೊಂದಿಗೆ ಚಿತ್ರ ನೋಡಿದ ಪ್ರೇಕ್ಷಕರು ಏನಂದ್ರು..? ಪ್ರೇಕ್ಷಕರ ರೆಸ್ಪಾನ್ಸ್ ನೋಡಿ ಚಿತ್ರತಂಡದವರು ಏನಂದ್ರು. ನೋಡೋಣ ಬನ್ನಿ.

Related Video