ದಾಸನಿಗೆ ಉಮಾಪತಿ ಟಕ್ಕರ್, ಮತ್ತೆ ಶುರು ತಗಡು ವಾರ್

ಉಮಾಪತಿ ಮತ್ತೊಮ್ಮೆ ದಾಸನನ್ನ ಕೆಣಕಿದ್ದಾರೆ. ಜೈಲಿಗೆ ಹೋಗಿಬಂದರನ್ನ ಆದರ್ಶ ಆಗಿಸಿಕೊಳ್ಳಬೇಡಿ ಅಂತ ಹೇಳಿ.. ದರ್ಶನ್​ ಗೆ ಕುಟುಕಿದ್ದಾರೆ.
 

Share this Video
  • FB
  • Linkdin
  • Whatsapp

ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ದರ್ಶನ್ ನಡುವೆ ನಡೆದಿದ್ದ ತಗಡು ವಾರ್ ಕಥೆ ಗೊತ್ತೇ ಇದೆ. ಕಳೆದ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಈ ವಿವಾದ ಮುಗಿದ ಅಧ್ಯಾಯ ಅಂತ ಎಲ್ಲರೂ ಭಾವಿಸಿದ್ರು. ಆದ್ರೆ ಉಮಾಪತಿ ಮತ್ತೊಮ್ಮೆ ದಾಸನನ್ನ ಕೆಣಕಿದ್ದಾರೆ. ಜೈಲಿಗೆ ಹೋಗಿಬಂದರನ್ನ ಆದರ್ಶ ಆಗಿಸಿಕೊಳ್ಳಬೇಡಿ ಅಂತ ಹೇಳಿ.. ದರ್ಶನ್​​ಗೆ ಕುಟುಕಿದ್ದಾರೆ. ಅಲ್ಲಿಗೆ ತಗಡು ವಾರ್ ಚಾಪ್ಟರ್-2 ಶುರುವಾಗಿದೆ.ಜೈಲಿಗೆ ಹೋಗಿ ಬಂದವನು.’ ದರ್ಶನ್ ಕಾಲೆಳೆದ ನಿರ್ಮಾಪಕ ಯೆಸ್ 2024ರ ಮೊದಲಾರ್ಧದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ತಗಡು ವಾರ್ ಮತ್ತೆ ಶುರುವಾಗುವಂತೆ ಕಾಣ್ತಾ ಇದೆ. ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಹಲಗಡಿಕೊಪ್ಪದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಗೌಡ ಭಾಗಿಯಾಗಿದ್ರು. ಈ ವೇಳೆ ವೇದಿಕೆ ಮೇಲೆ ಮಾತನಾಡೋವಾಗ ಉಮಾಪತಿ ಇನ್​ಡೈರೆಕ್ಟ್ ಆಗಿ ದರ್ಶನ್​ಗೆ ಟಾಂಗ್ ಕೊಟ್ಟಿದ್ದಾರೆ.

Related Video