ಲೀಲಾವತಿ ಅಮ್ಮನವರು ಸ್ನೇಹ ಜೀವಿ, ತುಂಬಾ ಪ್ರಾಣಿ ಪ್ರಿಯರು: ನಿರ್ಮಾಪಕ ಕೆ.ಮಂಜು

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತಾ ಕಾರ್ಯ ನಡೆಯುತ್ತಿದೆ.

Share this Video
  • FB
  • Linkdin
  • Whatsapp

ಹಿರಿಯ ನಟಿ ಲೀಲಾವತಿ(Leelavathi) ಇಹಲೋಕ ತ್ಯಜಿಸಿದ್ದು, ನೆಲಮಂಗಲದ(Nelamangala) ಅಂಬೇಡ್ಕರ್‌ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಇಲ್ಲಿ ಬೆಳಗ್ಗೆ 10 ಗಂಟೆವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಂತರ ಮಧ್ಯಾಹ್ನದವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗುವುದು. ನಟಿ ಲೀಲಾವತಿ ಬಗ್ಗೆ ನಿರ್ಮಾಪಕ ಕೆ.ಮಂಜು(Produced K Manju) ಮಾತನಾಡಿದ್ದು, ಅವರು ಪ್ರಾಣಿಪ್ರಿಯರು ಆಗಿದ್ದರು. ಪ್ರತಿಯೊಬ್ಬರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ಚೆನ್ನಾಗಿ ಬದುಕಿ, ಯಾರಿಗೂ ಏನೂ ತೊಂದರೆ ಕೊಡದಂತೆ ಬದುಕಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೆ.ಮಂಜು ಹೇಳಿದರು.

ಇದನ್ನೂ ವೀಕ್ಷಿಸಿ: ಚೆಂದದ ಬದುಕು ಮುಗಿಸಿದ ಚಿತ್ರರಂಗದ ಕಲಾವತಿ ಲೀಲಾವತಿ!

Related Video