Asianet Suvarna News Asianet Suvarna News

ಪ್ರಥಮ್ ಮೇಲೆ ಫ್ಯಾನ್ಸ್ ಕೋಪ: ಮದುವೆಗಾದ್ರೂ ಕರೀತೀರೋ ಇಲ್ವೋ ಅಂದವರಿಗೆ ಹೇಳಿದ್ದೇನು?

ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ, ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ವೆಜ್ ಊಟ ಇದಾಗಿರಬಹುದು" ಎಂದು ನಟ ಪ್ರಥಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
 

First Published Jun 15, 2023, 1:11 PM IST | Last Updated Jun 15, 2023, 1:11 PM IST

ಬಿಗ್ ಬಾಸ್ ವಿನ್ನರ್ ಪ್ರಥಮ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಸೈಲೆಂಟಾಗಿ ಎಂಗೇಂಜ್ ಆಗಿ ಹುಡುಗಿ ಫೋಟೊ ಹಾಕದೆ ಕುತೂಹಲ ಮೂಡಿಸಿದ್ದರು. ನಂತರ ಫೋಟೋ ರಿವೀಲಾಯ್ತು. ಪ್ರಥಮ್ ಮಂಡ್ಯದ ಭಾನುಶ್ರೀ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪ್ರಥಮ್ ಏಕಾಏಕಿ ಯಾರಿಗೂ ಹೇಳದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲವರು ಈ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದಾರಂತೆ. ಅವರಿಗೆ ಪ್ರಥಮ್ ಉತ್ತರ ನೀಡಿದ್ದಾರೆ. ನಿಶ್ಚಿತಾರ್ಥ ಮೊನ್ನೆ ಆಯ್ತು, ನಾಲ್ಕು ಜನರ ಕರೆದು ಊಟ ಹಾಕಿಸಬೇಕಿತ್ತು ಅನ್ನೋದು ಹಲವರ ಅಭಿಪ್ರಾಯ. ಇನ್ನೆರಡು ದಿನದಲ್ಲಿ ವೃದ್ಧಾಶ್ರಮವೊಂದರ 138ಜನರಿಗೆ ಸಿಹಿ ಊಟ. ಚಳಿಗಾಲದ ಆಸರೆಗಾಗಿ ಒಂದು ಶಾಲು. ಮದುವೆ ಅವ್ರಿಷ್ಟದಂತೆ ಅವ್ರು ಮಾಡಬಹುದು. ನನ್ನ ಕಡೆಯಿಂದ ಒಂದು 200 ಜನರಿಗೆ ನಮ್ಮೂರು ಕೊಳ್ಳೇಗಾಲ, ಹನೂರಲ್ಲಿ ಬೀಗರ ಊಟ. ಇಷ್ಟೇ ನನ್ನ ಮದುವೆಯ ಮೆನು" ಎಂದು ಒಳ್ಳೆ ಹುಡ್ಗ ಪ್ರಥಮ್ ಅವರು ಉತ್ತರ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: ಅಲ್ಲು ಅರ್ಜುನ್‌ ತೋಳಿನಲ್ಲಿ ಶ್ರೀಲೀಲಾ: ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿದ್ರು ಅಂದ್ರು ಫ್ಯಾನ್ಸ್‌!

Video Top Stories