KGF Chapter 2: ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್‌ನ ಮ್ಯಾಜಿಕ್ ಹೀಗಿದೆ ನೋಡಿ

ಪ್ರಶಾಂತ್ ನೀಲ್.. ಕೆಜಿಎಫ್ ಎನ್ನುವ ಚಿನ್ನದಂತ ಸಿನಿಮಾ ನೀಡಿದೋ ಸ್ಟಾರ್ ಡೈರೆಕ್ಟರ್. ಕನ್ನಡ ಸಿನಿಮಾರಂಗದಲ್ಲಿಯೂ ಊಹೆಗೂ ನಿಲುಕದಂತಹ ಸಿನಿಮಾ ಮಾಡೋ ಸಾಮರ್ಥ್ಯ ಇದೇ ಎಂದು ತೋರಿಸಿಕೊಟ್ಟ ನಿರ್ದೇಶಕ.

Share this Video
  • FB
  • Linkdin
  • Whatsapp

ಪ್ರಶಾಂತ್ ನೀಲ್ (Prashanth Neel).. ಕೆಜಿಎಫ್ (KGF) ಎನ್ನುವ ಚಿನ್ನದಂತ ಸಿನಿಮಾ ನೀಡಿದೋ ಸ್ಟಾರ್ ಡೈರೆಕ್ಟರ್. ಕನ್ನಡ ಸಿನಿಮಾರಂಗದಲ್ಲಿಯೂ ಊಹೆಗೂ ನಿಲುಕದಂತಹ ಸಿನಿಮಾ ಮಾಡೋ ಸಾಮರ್ಥ್ಯ ಇದೇ ಎಂದು ತೋರಿಸಿಕೊಟ್ಟ ನಿರ್ದೇಶಕ. ‘ಕೆಜಿಎಫ್‌ 2’ (KGF Chapter 2) ಚಿತ್ರವನ್ನು 26 ದಿನಗಳಲ್ಲಿ 5.5 ಕೋಟಿಗೂ ಅಧಿಕ ಜನ ಚಿತ್ರಮಂದಿರದಲ್ಲಿ ವೀಕ್ಷಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಇದು ದಾಖಲೆಯ ವೀಕ್ಷಣೆಯಾಗಿದೆ. ಚಿತ್ರ ಈವರೆಗೆ 1160 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ 70 ಲಕ್ಷ, ತಮಿಳ್ನಾಡಿನ ಸುಮಾರು 70 ಲಕ್ಷ ಜನ, ಆಂಧ್ರಪ್ರದೇಶ, ತೆಲಂಗಾಣದಲ್ಲಿ 85 ಲಕ್ಷ ಜನ, ಕೇರಳದಲ್ಲಿ 45 ಲಕ್ಷ ಮಂದಿ ಈ ಚಿತ್ರ ವೀಕ್ಷಿಸಿದ್ದಾರೆ. 

ಯಶ್ ಆ್ಯಕ್ಟಿಂಗ್ ನೋಡಿ ಓಡಿ ಹೋದ ಮಗ; ಓಡಿದ ಗಣೇಶ ಎಂದು ನಕ್ಕಿದ ಅಪ್ಪ-ಮಗಳು- ವಿಡಿಯೋ ವೈರಲ್

ಒಟ್ಟಾರೆ ದಕ್ಷಿಣ ಭಾರತದಲ್ಲಿ 2.70 ಕೋಟಿಗೂ ಹೆಚ್ಚು ಜನ ಈ ಸಿನಿಮಾ ನೋಡಿದ್ದಾರೆ. ಉತ್ತರ ಭಾರತದಲ್ಲಿ 2.35 ಕೋಟಿಗೂ ಅಧಿಕ ಮಂದಿ ‘ಕೆಜಿಎಫ್‌ 2’ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ. ‘ಗದ್ದರ್‌’ ಹಾಗೂ ‘ಬಾಹುಬಲಿ’ ಬಳಿಕ ಚಿತ್ರಮಂದಿರದಲ್ಲಿ ಅತ್ಯಧಿಕ ಜನ ವೀಕ್ಷಿಸಿದ ಮೂರನೇ ಚಿತ್ರವಾಗಿ ‘ಕೆಜಿಎಫ್‌ 2’ ಹೊರಹೊಮ್ಮಿದೆ. ಇನ್ನು ಈ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಸೆಟ್‌ನಲ್ಲಿ ಹೇಗಿರ್ತಾರೆ. ಅವ್ರ ಕೈಕೆಳಗೆ ಎಷ್ಟು ಜನ ಕೆಲಸ ಮಾಡ್ತಾರೆ. ಕೆಜಿಎಫ್ ಒಂದು ಅದ್ಬುತ ಸಿನಿಮಾ ಆಗೋದಕ್ಕೆ ಹೇಗೆಲ್ಲಾ ಶ್ರಮ ಪಟ್ಟಿದ್ರು ನೀಲ್ ಅನ್ನೋದನ್ನ ಹೇಳ್ತಿದೆ ಈ ಮೇಕಿಂಗ್. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video