ಯಶ್ ಆ್ಯಕ್ಟಿಂಗ್ ನೋಡಿ ಓಡಿ ಹೋದ ಮಗ; ಓಡಿದ ಗಣೇಶ ಎಂದು ನಕ್ಕಿದ ಅಪ್ಪ-ಮಗಳು- ವಿಡಿಯೋ ವೈರಲ್
ರಾಕಿಂಗ್ ಸ್ಟಾರ್ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೆಜಿಎಫ್-2 ಭರ್ಜರಿ ಸಕ್ಸಸ್ ನಲ್ಲಿರುವ ಯಶ್ ಇದೀಗ ಮಕ್ಕಳ ಜೊತೆ ಜಾಲಿ ಮೂಡ್ ಎಂಜಾಯ್ ಮಾಡುತ್ತಿದ್ದಾರೆ. ಯಶ್ ಮಕ್ಕಳ ಜೊತೆ ಸಮಯ ಕಳಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಮಗಳು ಐರಾ ರಾಕ್ ರಾಕ್ ರಾಕಿ ಭಾಯ್ ಕ್ಯೂಟ್ ಆಗಿ ಹೇಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಮಕ್ಕಳ ಜೊತೆ ಟೈಗರ್ ಆಕ್ಟಿಂಗ್ ಮಾಡಿದ್ದಾರೆ. ಅಪ್ಪನ ಅಭಿನಯ ಕಂಡು ಮಗ ಯಥರ್ವ ಓಡಿ ಹೋಗಿದ್ದಾನೆ.
ರಾಕಿಂಗ್ ಸ್ಟಾರ್ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಕೆಜಿಎಫ್-2 ಭರ್ಜರಿ ಸಕ್ಸಸ್ ನಲ್ಲಿರುವ ಯಶ್ ಇದೀಗ ಮಕ್ಕಳ ಜೊತೆ ಜಾಲಿ ಮೂಡ್ ಎಂಜಾಯ್ ಮಾಡುತ್ತಿದ್ದಾರೆ. ಯಶ್ ಮಕ್ಕಳ ಜೊತೆ ಸಮಯ ಕಳಯುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಮಗಳು ಐರಾ ರಾಕ್ ರಾಕ್ ರಾಕಿ ಭಾಯ್ ಕ್ಯೂಟ್ ಆಗಿ ಹೇಳುತ್ತಿರುವ ವಿಡಿಯೋವನ್ನು ಶೇರ್ ಮಾಡಿದ್ದರು. ಇದೀಗ ಮಕ್ಕಳ ಜೊತೆ ಟೈಗರ್ ಆಕ್ಟಿಂಗ್ ಮಾಡಿದ್ದಾರೆ. ಅಪ್ಪನ ಅಭಿನಯ ಕಂಡು ಮಗ ಯಥರ್ವ ಓಡಿ ಹೋಗಿದ್ದಾನೆ. ಮಗ ಓಡಿದನ್ನು ನೋಡಿ ಯಶ್ ಮತ್ತು ಮಗಳು ಐರಾ ಇಬ್ಬರೂ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋವನ್ನು ಯಶ್ ಹಂಚಿಕೊಂಡಿದ್ದಾರೆ. ಯಥರ್ವ ಮತ್ತು ಐರಾ ಕ್ಯೂಟ್ ಆಟಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.