ನರೇಶ್ ಗೆಳೆಯನಾ, ಜೊತೆಗಾರನಾ? ಪವಿತ್ರಾ ಲೋಕೇಶ್ ಉತ್ತರ

ನಟ ಸುಚೇಂದ್ರ ಪ್ರಸಾದ್ ಜೊತೆ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪವಿತ್ರಾ ಲೋಕೇಶ್. ನಾನು ಮದುವೆನೇ ಆಗಿಲ್ಲ, ವಿಚ್ಛೇದನ ಯಾಕೆ ತೆಗೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ನಾನು ಈಗ ಬೇರೆ ಇದ್ದೀನಿ. ನಾನು ಮದುವೆ ಆಗಿರುವುದಕ್ಕೆ ಏನಾದರೂ ದಾಖಲೆ ಇದಿಯಾ. ಅದು ನನಗೆ ಬಿಟ್ಟಿದ್ದು. ಮಾಧ್ಯಮದ ಮುಂದೆ ನಾನ್ಯಾಕೆ ಮಾತನಾಡಬೇಕು' ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ಬಾಬು (Naresh Babu) ಮದುವೆ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ ಇತ್ತೀಚಿಗಷ್ಟೆ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಹಾಜರಾಗಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪವಿತ್ರಾ ಲೋಕೇಶ್, ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಸುಚೇಂದ್ರ ಪ್ರಸಾದ್ ಜೊತೆ ಮದುವೆಯೇ ಆಗಿಲ್ಲ, ಇನ್ನು ವಿಚ್ಛೇದನ ಯಾಕೆ ಪಡೆಯಬೇಕು ಎಂದಿದ್ದಾರೆ. ನನ್ನವೈಯಕ್ತಿಕ ವಿಚಾರವನ್ನು ಮಾಧ್ಯಮದ ಮುಂದೆ ಕುಳಿತು ಮಾತನಾಡಲ್ಲ ಎಂದು ಪವಿತ್ರಾ ಗರಂ ಆಗಿದ್ದಾರೆ.

Related Video