ಹೊರ ರಾಜ್ಯಕ್ಕೆ ತೆರಳಲು ಅನುಮತಿ ಬೇಡಿದ ಪವಿತ್ರಾ ಗೌಡ; ಟ್ರಿಪ್ ಅಲ್ಲ ತೀರ್ಥಯಾತ್ರೆಗಂತೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಪವಿತ್ರಾ ಮತ್ತು ದರ್ಶನ್ 6 ತಿಂಗಳ ನಂತರ ನ್ಯಾಯಾಲಯದಲ್ಲಿ ಮುಖಾಮುಖಿಯಾದರು. ಪವಿತ್ರಾ ನ್ಯಾಯಾಲಯದಿಂದ ಪ್ರಯಾಣಕ್ಕೆ ಅನುಮತಿ ಪಡೆದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ-1 & ಎ2 ಆಗಿರೋ ಪವಿತ್ರಾ ಆಂಡ್ ದರ್ಶನ್ ಮತ್ತು ಇತರ 15 ಆರೋಪಿಗಳು ಇವತ್ತು 57ನೇ ಸೆಷೆನ್ಸ್ ಕೋರ್ಟ್ಗೆ ಹಾಜರಾಗಿದ್ದಾರೆ. 6 ತಿಂಗಳ ನಂತರ ದರ್ಶನ್ ಆಂಡ್ ಪವಿತ್ರಾ ಮುಖಾಮುಖಿ ಆಗಿದ್ದು , ಇಬ್ಬರ ನಡುವೆ ಕಣ್ಣೀರಿನ ಡ್ರಾಮಾ ನಡೆದಿದೆ. ಇನ್ನು ಪವಿತ್ರಾ ಗೌಡ ಬೆಂಗಳೂರಿನಿಂದ ಹೊರ ಹೋಗಲು ಅನುಮತಿ ಪಡೆದುಕೊಂಡಿದ್ದಾಳೆ. ತಾನು ದೇವಸ್ಥಾನಕ್ಕೆ ಮತ್ತು ವ್ಯವಹಾರದ ನಿಮಿತ್ತ ಮುಂಬೈ ಮತ್ತು ದೆಹಲಿಗೆ ಹೋಗಬೇಕಿದೆ ಅದಕ್ಕೆ ಅನುಮತಿ ಕೊಡಿ ಅಂತ ಪವಿತ್ರಾ ಮನವಿ ಸಲ್ಲಿಸಿದ್ಳು. ತನ್ನ ಒಡೆತನದ ರೆಡ್ ಕಾರ್ಪೆಟ್ ಸ್ಟುಡಿಯೋಗೆ ಕಚ್ಚಾ ವಸ್ತುಗಳನ್ನ ತರೋದಕ್ಕೆ ದೆಹಲಿ ಹೋಗಬೇಕು ಅದಕ್ಕೆ ಅನುಮತಿ ಕೊಡಿ ಅಂತ ಕೇಳಿಕೊಂಡ್ಳು. ಅದಕ್ಕೂ ಕೋರ್ಟ್ ಯೆಸ್ ಅಂದಿದೆ.ಆದ್ರೆ ಈ ಕೇಸ್ ಅಂತೂ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಈ ಕೇಸ್ ಯಾವ ಸ್ವರೂಪ ಪಡೆಯುತ್ತೆ ಅನ್ನೋದನ್ನ ಕಾದುನೋಡಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇವತ್ತು ಕೋರ್ಟ್ನಲ್ಲಿ ತಬ್ಬಿಕೊಂಡಿರೋ ದರ್ಶನ್ & ಪವಿತ್ರಾ ಮತ್ತೆ ದೋಸ್ತಿ ಬೆಳೆಸ್ತಾರಾ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.
ಕೊನೆಗೂ ಕೋರ್ಟ್ ಹಾಲ್‌ನಲ್ಲಿ ದರ್ಶನ್- ಪವಿತ್ರಾ ಗೌಡ ಭೇಟಿ; ಬೆನ್ನು ತಟ್ಟಿ ಸಮಾಧಾನ ಮಾಡಿದ ಗೆಳೆಯ