ಕೊನೆಗೂ ಕೋರ್ಟ್ ಹಾಲ್‌ನಲ್ಲಿ ದರ್ಶನ್- ಪವಿತ್ರಾ ಗೌಡ ಭೇಟಿ; ಬೆನ್ನು ತಟ್ಟಿ ಸಮಾಧಾನ ಮಾಡಿದ ಗೆಳೆಯ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಕೋರ್ಟ್‌ಗೆ ಹಾಜರ್ ಆಗಿರುವ 17 ಆರೋಪಿಗಳು. ದರ್ಶನ್ - ಪವಿತ್ರಾ ಮುಖಾ ಮುಖಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ್ದ 17 ಆರೋಪಿಗಳು ಬೇಲ್ ಮೇಲೆ ಹೊರ ಬಂದಿದ್ದಾರೆ. ಇಂದು ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ 17 ಆರೋಪಿಗಳು ಆಗಮಿಸಿದ್ದರು. ಆಗ ದರ್ಶನ್ ಮತ್ತು ಪವಿತ್ರಾ ಗೌಡ ಮುಖಾ ಮುಖಿ ಆಗಿದ್ದಾರೆ. ದರ್ಶನ್‌ನ ನೋಡುತ್ತಿದ್ದಂತೆ ಪವಿತ್ರಾ ಗೌಡ ಭಾವುಕರಾಗುತ್ತಾರೆ. ಆಗ ಬೆನ್ನು ತಟ್ಟಿ ದರ್ಶನ್ ಸಂತೈಸಿದ್ದಾರೆ. ಆದರೆ ಫೆ.25ಕ್ಕೆ ವಿಚಾರ ಮುಂದೂಡಿಕೆ ಆಗಿದೆ. ಈ ಘಟನೆಯನ್ನು ನೋಡಿದರೆ ದರ್ಶನ್ ಮತ್ತು ಪವಿತ್ರಾ ಗೌಡ ಮತ್ತೆ ಮಾತನಾಡುತ್ತಿದ್ದಾರಾ? ಯಾಕೆ ಪವಿತ್ರಾ ದರ್ಶನ್ ಬಳಿ ಮಾತನಾಡಲು ಅಷ್ಟು ಪ್ರಯತ್ನ ಪಟ್ಟರು? ದರ್ಶನ್ ಇಷ್ಟು ದಿನದಿಂದ ಮಾತನಾಡಿಲ್ವಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.
ಹೌದು! ಸುಮಾರು 6-7 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಆಗಿರುವುದು. ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಇದ್ದರು ಆದರೆ ದರ್ಶನ್ ಜೈಲಿನ ಕೂಲ್ ಲೈಫ್ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಳ್ಳಾರಿಗೆ ಎತ್ತಂಗಡಿ ಮಾಡಿದ್ದರು. ಅಲ್ಲಿಂದ ದರ್ಶನ್ ಮತ್ತು ಪವಿತ್ರಾ ಗೌಡ ಇನ್ನೂ ದೂರ ದೂರ. ಜಾಮೀನು ಪಡೆದ ಹೊರ ಬಂದಾಗ ಪವಿತ್ರಾ ಗೌಡ ಅಲ್ಲೇ ಇದ್ದ ಮುನೇಶ್ವರ ಗುಡಿಗೆಯಲ್ಲಿ ಪೂಜೆ ಸಲ್ಲಿಸಿದ್ದರು. ಆಗ ಪವಿತ್ರಾ ಮೌನವಾಗಿ ನಿಂತಿದ್ದರೂ ಸಹ ಅವರ ತಾಯಿ ಅರ್ಚನೆ ಸಮಯದಲ್ಲಿ ದರ್ಶನ್ ಹೆಸರು ತೆಗೆದರು. ಅಯ್ಯೋ ಅಮ್ಮ ಮಗಳು ಇಬ್ಬರೂ ದರ್ಶನ್‌ನ ಬಿಡುವಂತೆ ಕಾಣಿಸುತ್ತಿಲ್ಲ ಎಂದು ಟ್ರೋಲ್ ಶುರುವಾಯ್ತು. ಹೊರಗಿರುವ ದರ್ಶನ್ ಬೆನ್ನು ನೋವಿನ ಚಿಕಿತ್ಸೆ ಪಡೆದು ಪತ್ನಿ ವಿಜಯಲಕ್ಷ್ಮಿ ಅಪಾರ್ಟ್ಮೆಂಟ್ ಮತ್ತು ಮೈಸೂರು ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹೀಗಾಗಿ ಪವಿತ್ರಾ ಹೊರ ಬಂದ ಮೇಲೆ ಭೇಟಿ ಆಗಿರುವುದು ಡೌಟ್.
ಪಾಪ ಅಮ್ಮ ತಪ್ಪು ಮಾಡದೆ ನೋವು ತಿಂತಿದ್ದಾಳೆ, ಆಕೆ ಬಗ್ಗೆ ನಿಮ್ಗೆ ಏನ್ ಗೊತ್ತು ಅಂತ?; ಪವಿತ್ರಾ ಗೌಡ ಪುತ್ರಿ ಗರಂ
ಈ ವಿಚಾರಣೆ ಸಮಯದಲ್ಲಿ ಎಲ್ಲಾ ಆರೋಪಿಗಳು ಒಟ್ಟಿಗೆ ಸೇರಿದ್ದಾರೆ. ಆಗ ದರ್ಶನ್ ಜೊತೆ ಮಾತನಾಡಲು ಪವಿತ್ರಾ ಗೌಡ ಪ್ರಯತ್ನ ಪಟ್ಟಿದ್ದಾರೆ. ದರ್ಶನ್‌ನ ನೋಡುತ್ತಿದ್ದಂತೆ ಪವಿತ್ರಾ ಗೌಡ ಭಾವುಕರಾಗಿದ್ದಾರೆ, ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಗೆಳೆಯ ದರ್ಶನ್ ಹತ್ತಿರ ಬಂದು ಬೆನ್ನು ತಟ್ಟಿ ಸಂತೈಸಿದ್ದಾರೆ. ಇದನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರು ಶಾಕ್ ಆಗಿದ್ದಾರೆ. ದರ್ಶನ್ ಹೊರ ಬರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಒಂದೆರಡಲ್ಲ ಆದರೆ ಇವರಿಬ್ಬರೂ ಇನ್ನೂ ಮಾತನಾಡುತ್ತಿದ್ದಾರೆ ಎಂದು. ಅದ್ಯ ವಿಚಾರಣೆ ಮುಂದೂಡಿರುವ ಕಾರಣ ಮತ್ತೊಮ್ಮೆ ಫೆಬ್ರವರಿ ತಿಂಗಳಿನಲ್ಲಿ ಮುಖಾಮುಖಿ ಆಗಲಿದ್ದಾರೆ.
ದೇವರು ಪವಿತ್ರಾ ಗೌಡಗೆ ಸೌಂದರ್ಯ ಕೊಟ್ಟಿದ್ದಾನೆ...ನನ್ನ ಚಿನ್ನು ತಪ್ಪು ಮಾಡಿಲ್ಲ: ಮಾಜಿ ಪತಿ ಸಂಜತ್ ಸಿಂಗ್