Asianet Suvarna News Asianet Suvarna News

ನೇತ್ರದಾನದ ಮೂಲಕ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ವಿಜಯಪುರ ಅಭಿಮಾನಿಗಳು

ಪುನೀತ್ ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಅವರ ದಾರಿಯನ್ನೇ ಅನುಸರಿಸಿದ್ದಾರೆ. ವಿಜಯಪುರದ 40ಕ್ಕೂ ಹೆಚ್ಚು ಯುವಕರು ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ, ನೇತ್ರದಾನ ಮಾಡಿದ್ದಾರೆ. ಹಾಗೂ 35ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಪುನೀತ್‌ಗೆ ಸಂತಾಪ ಸೂಚಿಸಿದ್ದಾರೆ. 

First Published Oct 31, 2021, 8:15 PM IST | Last Updated Oct 31, 2021, 8:15 PM IST

ವಿಜಯಪುರ (ಅ.31): ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ( Puneeth Rajkumar) ಅಕಾಲಿಕ ನಿಧನದಿಂದ ಇಡೀ ಕರ್ನಾಟಕದಲ್ಲಿ ಸೂತಕದ ಛಾಯೆ ಆವರಿಸಿದೆ. ಕೋಟ್ಯಾಂತರ ಅಭಿಮಾನಿಗಳು ಪುನೀತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. 

ತಮ್ಮ ಪುನೀತ್‌ನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಶಿವರಾಜ್‌ಕುಮಾರ್!

ಹಾಗೆಯೇ ಪುನೀತ್ ಕೂಡ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇದೀಗ ಪುನೀತ್ ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಅವರ ದಾರಿಯನ್ನೇ ಅನುಸರಿಸಿದ್ದಾರೆ. ವಿಜಯಪುರದ 40ಕ್ಕೂ ಹೆಚ್ಚು ಯುವಕರು ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿ, ನೇತ್ರದಾನ ಮಾಡಿದ್ದಾರೆ. ಹಾಗೂ 35ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಪುನೀತ್‌ಗೆ ಸಂತಾಪ ಸೂಚಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Asianet Suvarna Entertainment

Video Top Stories