
31 ಡೇಸ್ ಪ್ರೀಮೀಯರ್ ಶೋಗೆ ಮಸ್ತ್ ರೆಸ್ಪಾನ್ಸ್, ಮತ್ತೊಂದು ‘ಸು ಫ್ರಂ ಸೋ’ ಎಂದ ಪ್ರೇಕ್ಷಕರು!
ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ಮೆಚ್ಚುಗೆ ಗಳಿಸಿರುವ '೩೧ ಡೇಸ್' ಸಿನಿಮಾ, ಹೊಸ ತಲೆಮಾರಿನ ಪ್ರೇಮಕಥೆಯನ್ನು ಹೊಂದಿದೆ. ನಿರಂಜನ್ ಶೆಟ್ಟಿ ಮತ್ತು ಪ್ರಜ್ವಲಿ ಸುವರ್ಣ ನಟಿಸಿರುವ ಈ ಚಿತ್ರ, ರಾಜ್ ರವಿಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದೆ.
ಈ ವಾರಾಂತ್ಯ ತೆರೆಗೆ ಬರೋದಕ್ಕೆ ಸಜ್ಜಾಗಿದೆ ನಿರಂಜನ್ ಶೆಟ್ಟಿ ನಟನೆಯ 31 ಡೇಸ್ ಸಿನಿಮಾ. ಈಗಾಗ್ಲೇ ಶಿವಮೊಗ್ಗದಲ್ಲಿ ನಡೆದ ಪ್ರೀಮೀಯರ್ ಶೋನಲ್ಲಿ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಬಂದಿದ್ದು, ಇದು ಮತ್ತೊಂದು ಸು ಫ್ರಂ ಸೋ ಆಗುತ್ತೆ ಅಂತಿದ್ದಾರೆ ಪ್ರೇಕ್ಷಕರು. 31 ಡೇಸ್ ಸಿನಿಮಾದ ವಿಭಿನ್ನ ಪೋಸ್ಟರ್ಸ್, ವಿಶಿಷ್ಟ ಟೀಸರ್, ಸ್ಪೆಷಲ್ ಟ್ರೈಲರ್ ಗಮನ ಸೆಳೆದಿವೆ. ಇದ್ಯಾವ ತರಹದ ಸಿನಿಮಾ ಇರಬಹುದು ಅನ್ನೋ ಕುತೂಹಲವನ್ನ ಪ್ರೇಕ್ಷಕರಲ್ಲಿ ಹುಟ್ಟಿಸಿದೆ. ಇದು ಹೊಸ ಜನರೇಶನ್ ನ ಲವ್ ಕಹಾನಿಯನ್ನ ಲವಲವಿಕೆಯಿಂದ ತೆರೆಗೆ ತರ್ತಾ ಇರೋ ಸಿನಿಮಾ. "ಜಾಲಿಡೇಸ್" ಖ್ಯಾತಿಯ ನಿರಂಜನ್ ಶೆಟ್ಟಿ ಚಿತ್ರದ ನಾಯಕನಾದ್ರೆ ‘ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. Nstar ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸಿರುವ "31DAYS" ಚಿತ್ರವನ್ನ ರಾಜ ರವಿಕುಮಾರ್ ನಿರ್ದೇಶನ ಮಾಡಿದ್ದಾರೆ. ವಿ.ಮನೋಹರ್ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದು, ಮನೋಹರ್ ಅವರ 150ನೇ ಸಿನಿಮಾ ಇದು. ಸು ಫ್ರಂ ಸೋ ಕೂಡ ಪ್ರೀಮಿಯರ್ ಶೋನಲ್ಲಿ ಗಮನ ಸೆಳೆದು, ವರ್ಡ್ ಆಫ್ ಮೌತ್ನಿಂದ ಪ್ರೇಕ್ಷಕರನ್ನ ತಲುಪಿತ್ತು. ಸದ್ಯ 31 ಡೇಸ್ ಸಿನಿಮಾ ಕೂಡ ಅದೇ ಹಾದಿಯಲ್ಲಿದೆ ಅಂದ್ರೆ ತಪ್ಪಾಗಲ್ಲ.