Rashmika Mandanna: ಕರ್ನಾಟಕದಿಂದ ರಶ್ಮಿಕಾ ಮಂದಣ್ಣ ಬ್ಯಾನ್?: ಏನಿದು 'ಕಿರಿಕ್' ಬೆಡಗಿ

ನಟಿ ರಶ್ಮಿಕಾ ಅವರನ್ನು ಕರ್ನಾಟಕದಿಂದ ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿ, ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Share this Video
  • FB
  • Linkdin
  • Whatsapp

ಇತ್ತೀಚಿನ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, 'ಕಿರಿಕ್ ಪಾರ್ಟಿ' ಸಿನಿಮಾದ ಪ್ರೊಡಕ್ಷನ್ ಹೌಸ್ ಹೆಸರು ಹೇಳದೆ ಆಕ್ಷನ್ ಮಾಡಿ ತೋರಿಸಿದ್ದರು. ಅದಕ್ಕೆ ಪ್ರತಿಯುತ್ತರವಾಗಿ ರಿಷಬ್ ಕೂಡ ಟಾಂಗ್ ಕೊಟ್ಟಿದ್ದರು. ಆ ವಿಡಿಯೋ ಸಖತ್ ಟ್ರೋಲ್ ಕೂಡ ಆಗಿತ್ತು. ತನ್ನನ್ನು ಬೆಳೆಸಿದ ಸಂಸ್ಥೆಯನ್ನೇ ಒದ್ದು ಹೋದವಳು ಎಂದು ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ಮುಂದೆ ರಶ್ಮಿಕಾ ಸಿನಿಮಾ ಕನ್ನಡಿಗರು ನೋಡಬಾರದು, ಕರ್ನಾಟಕದಲ್ಲಿ ರಶ್ಮಿಕಾ ಸಿನಿಮಾ ಬ್ಯಾನ್ ಮಾಡಬೇಕು ಎಂಬ ಬಾಯ್ಕಟ್ ರಶ್ಮಿಕಾ ಎನ್ನುವ ಪೋಸ್ಟರ್‌ಗಳು ಹರಿದಾಡುತ್ತಿವೆ. 'ರಶ್ಮಿಕಾ ಮಂದಣ್ಣ ಬ್ಯಾನ್‌' ಹಾಗೂ 'ಬಾಯ್ಕಟ್‌ ರಶ್ಮಿಕಾ' ಎಂಬ ಹ್ಯಾಷ್‌ ಟ್ಯಾಗ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿವೆ. ಈ ಸುದ್ದಿಯಿಂದ ರಶ್ಮಿಕಾ ನಟನೆಯ ಸಿನಿಮಾ ತಂಡಕ್ಕೆ ಭಯ ಶುರುವಾಗಿದೆ ಎನ್ನಲಾಗಿದೆ. ಅದರಲ್ಲೂ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ 'ಪುಷ್ಪ-2' ಮತ್ತು ದಳಪತಿ ವಿಜಯ್ ನಟನೆಯ 'ವರಿಸು' ಸಿನಿಮಾ ತಂಡ ಸಂಕಷ್ಟಕ್ಕೆ ಸಿಲುಕಿವೆ ಎನ್ನುವ ಮಾತು ಕೇಳಿ ಬಂದಿದೆ.

ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ಹರಿಪ್ರಿಯಾ; ಮದುವೆ ಯಾವಾಗ?

Related Video