Asianet Suvarna News Asianet Suvarna News

ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾದ ನಟಿ ಹರಿಪ್ರಿಯಾ; ಮದುವೆ ಯಾವಾಗ?

ಸ್ಯಾಂಡಲ್ ವುಡ್ ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದು ನಟ ವಸಿಷ್ಠ ಸಿಂಹ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗಿದೆ. 

vasishta simha to tie the knot with haripriya soon sgk
Author
First Published Nov 26, 2022, 5:39 PM IST

ಸ್ಯಾಂಡಲ್ ವುಡ್‌ ಮತ್ತೊಂದು ಮದುವೆ ಸಂಭ್ರಮಕ್ಕೆ ಸಂಜ್ಜಾಗಿದೆ. ಸದ್ಯ ನಟಿ ಅದಿತಿ ಪ್ರಭುದೇವ ಹಸೆಮಣೆ ಏರುತ್ತಿದ್ದಾರೆ. ನವೆಂಬರ್ 27ರಂದು ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಹರಿಪ್ರಿಯಾ ಮದುವೆ ವಿಚಾರ ಕೂಡ ವೈರಲ್ ಆಗಿದೆ. ಖ್ಯಾತ ನಟಿ ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹರಿಪ್ರಿಯಾ ಮದುವೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತಿತ್ತು. ಹರಿಪ್ರಿಯಾ ಮದುವೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಹುಡುಗ ಯಾರು, ಯಾವಾಗ ಎನ್ನುವ ಚರ್ಚೆ ಜೋರಾಗಿತ್ತು. ಸದ್ಯ ಈ ಬಗ್ಗೆ ಮಾಹಿತಿ ರಿವೀಲ್ ಆಗಿದೆ. ಆಪ್ತ ಮೂಲಗಳು ಹೇಳಿರುವ ಪ್ರಕಾರ ಹರಿಪ್ರಿಯಾ ಮದುವೆಗೆ ಸಜ್ಜಾಗಿದ್ದು, ಹುಡುಗ ಕೂಡ ಫಿಕ್ಸ್ ಆಗಿದ್ದಾರಂತೆ. ಇತ್ತೀಚಿಗಷ್ಟೆ ಮೂಗು ಚುಚ್ಚಿಕೊಂಡಿದ್ದ ಹರಿಪ್ರಿಯಾ ವಿಡಿಯೋ ವೈರಲ್ ಆಗಿತ್ತು. ಆಗಲೇ ಹರಿಪ್ರಿಯಾ ಹಸೆಮಣೆ ಏರುವುದು ಕನ್ಫರ್ಮ್ ಎನ್ನುವ ಮಾತು ಕೇಳಿಬಂದಿತ್ತು. ಇದೀಗ ಆ ಸುದ್ದಿ ನಿಜ ಎನ್ನುತ್ತಿವೆ ಮೂಲಗಳು. 

ಹೌದು ಬಹುಭಾಷಾ ನಟಿ ಹರಿಪ್ರಿಯಾ ಮದುವೆಯಾಗುತ್ತಿರುವ ಹುಡುಗ ಮತ್ಯಾರು ಅಲ್ಲ ವಸಿಷ್ಠ ಸಿಂಹ. ಸ್ಯಾಂಡಲ್ ವುಡ್‌ನ ಖ್ಯಾತ ನಟ, ಕಂಚಿನ ಕಂಠದ ಸುಂದರ ವಸಿಷ್ಠ ಸಿಂಹಾ ಜೊತೆ ಹರಿಪ್ರಿಯಾ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ವಸಿಷ್ಠ ಮತ್ತು ಹರಿಪ್ರಿಯಾ ಅವರದ್ದು ಲವ್ ಮ್ಯಾರೇಜ್. ಇಬ್ಬರೂ ತುಂಬಾ ಆಪ್ತರಾಗಿದ್ದಾರೆ. ಆಗಾಗ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಅಲ್ಲದೇ ಪಾರ್ಟ್‌ನರ್ ಅಂತರೆ ಇಬ್ಬರೂ ಕರೆಯುತ್ತಾರಂತೆ. ಆದರೆ ಎಲ್ಲಿಯೂ ಪ್ರೀತಿಯ ವಿಚಾರ ಬಿಟ್ಟುಕೊಟ್ಟಿರಲಿಲ್ಲ. ಆದರೀಗ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿದೆ. ಅಂದಹಾಗೆ ಈ ವಿಚಾರ ರಿವೀಲ್ ಆಗಿದ್ದು ಹರಿಪ್ರಿಯಾ ಅವರ ಮೂಗು ಚುಚ್ಚವ ವೇಳೆ. 

ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ, ಮದ್ವೆ ಆಗ್ತಿರಬಹುದಾ ಡೌಟು!

ಇತ್ತೀಚಿಗಷ್ಟೆ ಪರಿಪ್ರಿಯಾ ಮೂಗು ಚುಚ್ಚಿಕೊಂಚಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದರು. ಆ ವೇಳೆ ಹರಿಪ್ರಿಯಾ ಜೊತೆ ವಸಿಷ್ಠ ಸಿಂಹ ಕೂಡ ಜೊತೆಯಲ್ಲಿದ್ದರು. ಮೂಗು ಎಲ್ಲಿ ಚುಚ್ಚಬೇಕೆಂದು ಗುರುತು ಮಾಡಿದ್ದೆ ವಸಿಷ್ಠಿ. ಮೂಗು ಚುಚ್ಚಿದ ಬಳಿಕ ವಸಿಷ್ಠ ಹರಿಪ್ರಿಯಗೆ ಮುತ್ತು ನೀಡಿ ಸಮಾಧಾನ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ಸ್ವತಃ ಹರಿಪ್ರಿಯಾ ಅವರೇ ವಿಡಿಯೋ ಹಂಚಿಕೊಂಡಿದ್ದರು. ಆದರೆ ವಿಡಿಯೋದಲ್ಲಿ ವಸಿಷ್ಠ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಹರಿಪ್ರಿಯಾ ಜೊತೆ ಇದ್ದಿದ್ದು ವಸಿಷ್ಠ ಸಿಂಹ ಎನ್ನುವುದು ಗೊತ್ತಾಗಿದೆ.&

 
 
 
 
 
 
 
 
 
 
 
 
 
 
 

A post shared by Hariprriya (@iamhariprriya)

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇನ್ನೊಂದು ತಿಂಗಳಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲು ಎಲ್ಲಾ ತಯಾರಿ ಕೂಡ ಮಾಡಿದ್ದಾರಂತೆ. ಅಲ್ಲದೇ ನಿಶ್ಚಿತಾರ್ಥದ ಬಳಿಕ ಅಂದರೆ ಎರಡು ತಿಂಗಳಲ್ಲಿ ಇಬ್ಬರೂ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಆದರೆ ಈ ಬಗ್ಗೆ ಹರಿಪ್ರಿಯಾ ಕಡೆಯಿಂದ ಅಥವಾ ವಸಿಷ್ಠ ಸಿಂಹ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇಬ್ಬರು ಪ್ರೀತಿಯಲ್ಲಿದ್ದಾರೆ, ಮದುವೆಯಾಗುತ್ತಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ಜೋಡಿ ಸೂಪರ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

 


 

  

Follow Us:
Download App:
  • android
  • ios