'ಕಾಂತಾರ'ಗಾಗಿ 'ರಾಜ್ ಶೆಟ್ಟಿ' ಮಾಡಿದ ಆ ಮಹಾನ್ ಕೆಲಸವೇನು?: ರಿಷಬ್‌ ಶೆಟ್ಟಿ ಹೇಳಿದ್ರು ಸೀಕ್ರೆಟ್

ರಾಜ್‌ ಬಿ ಶೆಟ್ಟಿ ಅದ್ಭುತವಾದ ಗೈಡ್‌. ಅರ್ಜೆಂಟ್‌ ಅಲ್ಲಿ ಏನಾದ್ರೂ ಒಂದು ನಿರ್ಧಾರ ತಗೊತೀನಿ ಅಂದ್ರೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ ಎಂದು ನಟ ರಿಷಬ್ ಶೆಟ್ಟಿ ತಿಳಿಸಿದರು‌. ‌

Share this Video
  • FB
  • Linkdin
  • Whatsapp

ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಬೇರೆನೇ ಒಂದು ಪಾತ್ರ ಕೊಟ್ಟು, ಬೇರೆನೇ ಆಕ್ಟಿಂಗ್‌ ಟ್ರೈಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ರಾಜ್ ಬಿ ಶೆಟ್ಟಿ ಬಗ್ಗೆ ರಿಷಬ್ ಶೆಟ್ಟಿ ತಿಳಿಸಿದರು‌. ಅವರು ಕಾಂತಾರಕ್ಕೆ ದೊಡ್ಡ ಸಪೋರ್ಟ್‌ ನೀಡಿದ್ದಾರೆ. ದೈವದ ಸಿಕ್ವೆನ್ಸ್‌ ಶೂಟ್‌ ಮಾಡಲು ಅವರು ಬಂದು 5 ದಿನ ಕೊರಿಯೊಗ್ರಾಫ್‌ ಮಾಡಲು ಸಹಾಯ ಮಾಡಿದ್ದಾರೆ. ದೈವಕ್ಕೆ ಸಂಬಂಧ ಪಟ್ಟಂತ ಡೈಲಾಗ್‌ ಅವರೇ ಬರೆದು ಕೊಟ್ಟಿದ್ದಾರೆ ಎಂದರು. ಸ್ವಾತಿ ಮುತ್ತಿನ ಮಳೆಹನಿಯೇ ಅವರ ನಿರ್ದೇಶನದ ಮೂರನೇ ಚಿತ್ರ. ಕಥೆ ತುಂಬಾ ಅದ್ಭುತವಾಗಿದೆ. ಶೂಟಿಂಗ್‌ ಕಂಪ್ಲೀಟ್ ಆಗಿದೆ, ಚಿತ್ರದ ತಯಾರಿಯಲ್ಲಿ ಇದ್ದಾರೆ ಈ ಸಂದರ್ಭದಲ್ಲಿ ಅವರಿಗೆ ಆಲ್‌ ದಿ ಬೆಸ್ಟ್ ಹೇಳುತ್ತೇನೆ ಎಂದು ಹೇಳಿದರು.

ರೆಟ್ರೋ ಅವತಾರದಲ್ಲಿ ಶಿವಣ್ಣ ಮಿಂಚಿಂಗ್: ‘ಘೋಸ್ಟ್​’ ಮೋಷನ್​ ಪೋಸ್ಟರ್ ...

Related Video