ರೆಟ್ರೋ ಅವತಾರದಲ್ಲಿ ಶಿವಣ್ಣ ಮಿಂಚಿಂಗ್: ‘ಘೋಸ್ಟ್’ ಮೋಷನ್ ಪೋಸ್ಟರ್ ನೋಡಿ ದಂಗಾದ ಫ್ಯಾನ್ಸ್
ವೇದನಾಗಿ ತೆರೆ ಮೇಲೆ ಬಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಇದೀಗ 'ಘೋಸ್ಟ್' ಅವತಾರದಲ್ಲಿ ಹೊಸ ನಿರೀಕ್ಷೆಯೊಂದನ್ನು ಚೆಲ್ಲಿದ್ದಾರೆ.
ಚಿತ್ರಮಂದಿರಗಳಲ್ಲಿ ವೇದನ ಜಪ ನಡೆಯುತ್ತಿದೆ. ಮತ್ತೊಂದು ಕಡೆ ಶಿವಣ್ಣ ತನ್ನ ಫ್ಯಾನ್ಸ್'ಗೆ ಹೊಸ ವರ್ಷದಲ್ಲಿ ಇನ್ನೊಂದು ಕೊಡುಗೆ ಕೊಟ್ಟಿದ್ದಾರೆ. ಅದೇ 'ಘೋಸ್ಟ್' ಸಿನಿಮಾದ ಮೊದಲ ಮೋಷನ್ ಪೋಸ್ಟರ್. ಈ ಬಾರಿ ಸೆಂಚುರಿ ಸ್ಟಾರ್ ಘೋಸ್ಟ್ ಲುಕ್ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ. ಸ್ಟೈಲಿಷ್ ಗ್ಯಾಂಗ್‌ಸ್ಟರ್ ಶಿವಣ್ಣನ 'ಘೋಸ್ಟ್' ಲುಕ್‌ಗೆ ವಾವ್ಹ್ ವಾವ್ಹ್ ಎನ್ನುತ್ತಿದ್ದಾರೆ. ಘೋಸ್ಟ್ ಸಿನಿಮಾದ ಮೋಷನ್ ಪೋಸ್ಟರ್ ವೀಡಿಯೋ ನೋಡಿದ್ರೆ ಶಿವಣ್ಣನ ಎನರ್ಜಿಗೆ ಸರಿಸಾಟಿ ಯಾರಿಲ್ಲ ಅಂತ ಮತ್ತೆ ಮತ್ತೆ ಹೇಳಬೇಕನ್ನಿಸುತ್ತೆ. ಈ ಸಿನಿಮಾವನ್ನು ಶ್ರೀನಿ ನಿರ್ದೇಶನ ಮಾಡುತ್ತಿದ್ದಾರೆ.