Petromax: ಎಲ್ಲಾ ಡಬಲ್ ಮೀನಿಂಗ್, ಯಾಕ್‌ ಸರ್‌? ಪ್ರಶ್ನೆಗೆ ನಾಗಭೂಷಣ್‌ ತಿರುಗೇಟು

ಕನ್ನಡ ಚಿತ್ರರಂಗದ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಚಿತ್ರದಲ್ಲಿ ಪಂಚ್ ಡೈಲಾಗ್‌ಗಳ ಮೂಲಕ ನಾಗಭೂಷಣ್‌ ಹೈಲೈಟ್ ಆಗಿ ಕಾಣಿಸಿಕೊಂಡಿದ್ದು,  ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಚಿತ್ರದಲ್ಲಿ ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ವಿಜಯ್‌ ಪ್ರಸಾದ್‌ ಅವರ ಚಿತ್ರಗಳಲ್ಲಿ ಅದೇ ‘ಕಾಮ’ನ್‌ ಡೈಲಾಗ್‌ಗಳು ಇರುತ್ತವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಜೀವನ, ಪ್ರೀತಿ, ಶುದ್ಧ ಮನಸ್ಸುಗಳು, ಅದ್ಭುತ ಸಂಬಂಧಗಳು, ಸಮಾಜದ ಬಗ್ಗೆ ‘ಕಾಮ’ನ್‌ ಭಾಷೆಯಲ್ಲೇ ಹೇಳುತ್ತಾರೆ. ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್‌, ಕಾರುಣ್ಯ ರಾಮ್‌, ಅರುಣ್‌, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಪಂಚ್ ಡೈಲಾಗ್‌ಗಳ ಮೂಲಕ ನಾಗಭೂಷಣ್‌ ಚಿತ್ರದಲ್ಲಿ ಹೈಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಈ ಚಿತ್ರದಲ್ಲಿ ಎಲ್ಲಾ ಡಬಲ್ ಮೀನಿಂಗ್? ಯಾಕ್‌ ಸರ್‌ ಎಂಬ ಪ್ರಶ್ನೆಗೆ ನಾಗಭೂಷಣ್‌ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video