ಮುತ್ತಯ್ಯ ಮುರಳೀಧರನ್ ಬಯೋಪಿಕ್ ಸಿನಿಮಾ'800’ ರಿಲೀಸ್ ದಿನಾಂಕ ಅನೌನ್ಸ್ !

ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಜೀವನಧಾರಿತ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ.
 

Share this Video
  • FB
  • Linkdin
  • Whatsapp

ಶ್ರೀಲಂಕಾ ಕ್ರಿಕೆಟ್‌ನ ದಿಗ್ಗಜ ಮುತ್ತಯ್ಯ ಮುರಳೀಧರನ್ (Muttiah Muralitharan) ಅವರ ಬಯೋಪಿಕ್(Biopic) ಸಿನಿಮಾ ಬರುತ್ತಿದೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ 800 ವಿಕೆಟ್ ಪಡೆದಿದ್ದಾರೆ ಮುತ್ತಯ್ಯ ಮುರುಳಿಧರನ್. ಹೀಗಾಗಿ ಮುತ್ತಯ್ಯ ಮುರಳೀಧರ್‌ ಜೀವನಾಧಾರಿತ ಚಿತ್ರಕ್ಕೆ ‘800’ ಎಂಬ ಟೈಟಲ್(800 movie) ಇಡಲಾಗಿದೆ. ಇದೀಗ ಆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಅಕ್ಟೋಬರ್ 6ರಂದು 800 ಸಿನಿಮಾ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಮುತ್ತಯ್ಯ ಮರುಳಿಧರನ್ ಪಾತ್ರದಲ್ಲಿ ಮಧುರ್ ಮಿತ್ತಲ್(Madhur Mittal) ನಟಿಸಿದ್ದಾರೆ.ಮುತ್ತಯ್ಯ ಮುರಳೀಧರನ್ ಅವರ ಕ್ರಿಕೆಟ್ ಬದುಕು ಹಲವು ರೋಚಕ ಅಂಶಗಳಿಂದ ಕೂಡಿದೆ. ಸಾಕಷ್ಟು ವಿವಾದಗಳನ್ನು ಅವರು ಮಾಡಿಕೊಂಡಿದ್ದಾರೆ. ಅವುಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಶ್ರೀಲಂಕಾ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳಿತ್ತು. ಈ ವೇಳೆ ಗುಂಡಿನ ದಾಳಿ ಆಗಿತ್ತು. ಈ ದಾಳಿಯ ಸಂದರ್ಭದಲ್ಲಿ ಮುತ್ತಯ್ಯ ಕೂಡ ದಾಳಿಗೆ ಒಳಗಾದ ಬಸ್​ನಲ್ಲಿ ಇದ್ದರು. ಇದನ್ನೂ ಬಯೋಪಿಕ್​ನಲ್ಲಿ ಸೇರಿಸಲಾಗಿದೆ. 

ಇದನ್ನೂ ವೀಕ್ಷಿಸಿ: 'ಫೈಟರ್' ಸಿನಿಮಾದ ಲವ್ ಸಾಂಗ್ ರಿಲೀಸ್: ಪ್ರೀತಿಸುವಂತೆ ಹಿಂದೆ ಬಿದ್ದ ನಟಿ ಲೇಖಾ ಚಂದ್ರ !

Related Video