
Renukaswamy Case: ಸುಪ್ರೀಂ ಎದುರು ದರ್ಶನ್ ದರ್ಬಾರ್ ಕತೆ ರಿವೀಲ್..; ರೇಣುಕಾಸ್ವಾಮಿ ಪರ ಧ್ವನಿಯೆತ್ತಿದ ರಮ್ಯಾ!
ದರ್ಶನ್ & ಗ್ಯಾಂಗ್ನ ಬೇಲ್ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ಗೆ ಹಲವು ಹಿನ್ನಡೆ ಆಗಿವೆ. ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮಾಡಿದ ಮೋಜು-ಮಸ್ತಿ ಸುಪ್ರೀಂ ಗಮನಕ್ಕೆ ಬಂದಿದೆ.
ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್ ಪರ ವಕೀಲ ದರ್ಶನ್ಗೆ ಹೈಕೋರ್ಟ್ ನೀಡಿರುವ ಬೇಲ್ ಯಾಕೆ ರದ್ದು ಮಾಡಬೇಕು ಅನ್ನೋ ಸಂಗತಿಗಳನ್ನ ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ. ದರ್ಶನ್ ಒಬ್ಬ ಪ್ರಭಾವಿ ವ್ಯಕ್ತಿ, ಜನಪ್ರೀಯ ನಟ ಆತ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅನ್ನೋದನ್ನ ಕೋರ್ಟ್ಗೆ ಮನವರಿಕೆ ಮಾಡಿಸಿದ್ದಾರೆ. ಹೌದು ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಅಲ್ಲಿರುವ ಕೆಲ ರೌಡಿಗಳ ಜೊತೆ ಸೇರಿ ಐಷಾರಾಮಿ ಲೈಫ್ ಲೀಡ್ ಮಾಡಿಕೊಂಡಿದ್ರು. ದರ್ಶನ್ ಸಿಗರೇಟ್ ಹೊಡೀತಾ ಕುಳಿತಿದ್ದ ಫೋಟೋ ಹೊರಬಂದು ದಾಸನ ದರ್ಬಾರ್ ಹೊರಗೆ ಬಂದಿತ್ತು. ಅಲ್ಲಿಂದ ಮುಂದೆ ದರ್ಶನ್ನ ಬಳ್ಳಾರಿ ಜೈಲಿಗೆ ಕಳಿಸಿದ್ರೆ, ಡಿ ಗ್ಯಾಂಗ್ನ ಒಬ್ಬೊಬ್ಬ ಸದಸ್ಯರನ್ನೂ ಒಂದೊಂದು ಜೈಲಿಗೆ ವರ್ಗಾಯಿಸಲಾಗಿತ್ತು. ಇದನ್ನ ಸುಪ್ರೀಂ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿ ಸಿದ್ದಾರ್ಥ್ ಲೂತ್ರಾ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ