Mugilpete: ರವಿಚಂದ್ರನ್ ಪುತ್ರನ ರೊಮ್ಯಾಂಟಿಕ್ ಸಾಂಗ್ ರಿಲೀಸ್

'ಮುಗಿಲ್‌ಪೇಟೆ' (Mugilpete) ಚಿತ್ರದ ಮತ್ತೊಂದು ಹಾಡು  ಬಿಡುಗಡೆಯಾಗಿದೆ. 'ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ' ಎಂಬ ರೊಮ್ಯಾಂಟಿಕ್ ಸಾಂಗ್ ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಮನುರಂಜನ್ ಹಾಗೂ ಚಿತ್ರದ ನಾಯಕಿ ಕಯಾದು ಲೋಹರ್ (Kayadu Lohar) ಕೆಮಿಸ್ಟ್ರಿ ಸಖತ್ತಾಗಿ ಮೂಡಿಬಂದಿದೆ.

First Published Nov 10, 2021, 5:00 PM IST | Last Updated Nov 10, 2021, 5:00 PM IST

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರ ಪುತ್ರ ಮನುರಂಜನ್ (Manuranjan) ನಾಯಕನಾಗಿ ನಟಿಸಿರುವ 'ಮುಗಿಲ್‌ಪೇಟೆ' (Mugilpete) ಚಿತ್ರದ ಮತ್ತೊಂದು ಹಾಡು  ಬಿಡುಗಡೆಯಾಗಿದೆ. 'ಜೀನ್ಸ್ ಅಲ್ಲಿ ಮಾಸ್ ಆಗಾವ್ಲೆ' ಎಂಬ ರೊಮ್ಯಾಂಟಿಕ್ ಸಾಂಗ್ ಲಹರಿ ಮ್ಯೂಸಿಕ್ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಡಿನಲ್ಲಿ ಮನುರಂಜನ್ ಹಾಗೂ ಚಿತ್ರದ ನಾಯಕಿ ಕಯಾದು ಲೋಹರ್ (Kayadu Lohar) ಕೆಮಿಸ್ಟ್ರಿ ಸಖತ್ತಾಗಿ ಮೂಡಿಬಂದಿದೆ. ಈ ಹಾಡಿಗೆ ಭರ್ಜರಿ ಚೇತನ್ ಸಾಹಿತ್ಯವಿದೆ. ಟಿಪ್ಪು ನಾರಾಯಣ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದ್ದು, ಶ್ರೀಧರ್.ವಿ.ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.

'ಮುಗಿಲ್​ಪೇಟೆ' ಬಿಡುಗಡೆಗೂ ಮುನ್ನ ಆ ತಾಯಿಯ ದರ್ಶನ ಮಾಡು: ಕ್ರೇಜಿಸ್ಟಾರ್ ರವಿಚಂದ್ರನ್

'ಮುಗಿಲ್‌ಪೇಟೆ' ಚಿತ್ರದ ಫಸ್ಟ್‌ಲುಕ್ ಹಾಗೂ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಲ್ಲದೇ ದಸರಾ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಹಾಡು 'ತಾರಿಫು ಮಾಡಲು' ವಿಡಿಯೊ ಸಾಂಗ್‌ ಬಿಡುಗಡೆಯಾಗಿ ಸಿನಿರಸಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಲ್ಲದೇ ಚಿತ್ರವು ಇದೇ ತಿಂಗಳು ತೆರೆಗೆ ಬರಲು ಸಜ್ಜಾಗಿದ್ದು,  ಚಿತ್ರದ ಪ್ರಚಾರ (Promotion) ಕಾರ್ಯಕ್ರಮಗಳಿಗೆ ಮನುರಂಜನ್ ಸೇರಿದಂತೆ ಚಿತ್ರತಂಡ ತಯಾರಿಯನ್ನು ನಡೆಸಿದೆ. ವಿಶೇಷವಾಗಿ ವಿ.ರವಿಚಂದ್ರನ್ ತಮ್ಮ ಪುತ್ರನಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು, ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿ ಅನಂತರ ಚಿತ್ರದ ಪ್ರಚಾರ ಮಾಡಿ ಎಂದಿದ್ದರು.

Video Top Stories