Asianet Suvarna News Asianet Suvarna News

'ಮುಗಿಲ್​ಪೇಟೆ' ಬಿಡುಗಡೆಗೂ ಮುನ್ನ ಆ ತಾಯಿಯ ದರ್ಶನ ಮಾಡು: ಕ್ರೇಜಿಸ್ಟಾರ್ ರವಿಚಂದ್ರನ್

ನೀನು ಮೈಸೂರಿಗೆ ಹೋದಾಗ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು, ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡು, ಹಾಗೆ ಕಾಲೇಜಿನವರಿಗೆಲ್ಲಾ ನನ್ನ ಶುಭಾಶಯಗಳನ್ನು ತಿಳಿಸುವಂತೆ ರವಿಚಂದ್ರನ್, ಮನುರಂಜನ್‌ಗೆ ಹೇಳಿದ್ದಾರೆ.

CrazyStar ravichandran talks with his son manuranjan video goes viral
Author
Bangalore, First Published Nov 7, 2021, 6:33 PM IST
  • Facebook
  • Twitter
  • Whatsapp

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಪ್ರಚಾರ (Promotion) ಕಾರ್ಯಕ್ರಮಗಳಿಗೆ ಮನುರಂಜನ್ ಸೇರಿದಂತೆ ಚಿತ್ರತಂಡ ತಯಾರಿ ನಡೆಸಿದೆ. ಈ ನಡುವೆ ಮನುರಂಜನ್ ಸಾಮಾಜಿಕ ಜಾಲತಾಣದಲ್ಲಿ (Social Media) ವಿಶೇಷವಾದ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮನುರಂಜನ್‌ಗೆ ಸೂಚನೆಯೊಂದನ್ನು ನೀಡುತ್ತಾರೆ.

ಹೌದು! ಮನುರಂಜನ್ ಬಳಿ ಬಂದ ರವಿಚಂದ್ರನ್ ಯಾವಾಗ 'ಮುಗಿಲ್‌ಪೇಟೆ' ಚಿತ್ರ ತೆರೆ ಕಾಣುತ್ತದೆ ಎಂದಾಗ ಇದೇ ತಿಂಗಳು 19ಕ್ಕೆ ಎಂದು ಮನು ಹೇಳುತ್ತಾರೆ. ಮತ್ತೆ ಚಿತ್ರದ ಪ್ರಚಾರ ಯಾವಾಗ ಎಂದಾಗ ನಾಳೆ ಮೈಸೂರಿಗೆ ಹೋಗುತ್ತಿದ್ದೇನೆ ಅನ್ನುತ್ತಾರೆ. ಆಗ ರವಿಚಂದ್ರನ್, ಮೈಸೂರಿನಲ್ಲಿ ಎಲ್ಲಿ ಎಂದು ಕೇಳುತ್ತಾರೆ. ಮಹಾರಾಣಿ, ಮಹಾರಾಜ, ಯುವರಾಜ ಕಾಲೇಜಿಗಳಿಗೆ ಪ್ರಚಾರಕ್ಕೆ ತೆರೆಳುತ್ತಿದ್ದೇನೆ ಎಂದು ಮನುರಂಜನ್ ಹೇಳುತ್ತಾರೆ. ನಂತರ ನೀನು ಮೈಸೂರಿಗೆ ಹೋದಾಗ ಮೊದಲು ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು, ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡು, ಹಾಗೆ ಕಾಲೇಜಿನವರಿಗೆಲ್ಲಾ ನನ್ನ ಶುಭಾಶಯಗಳನ್ನು ತಿಳಿಸುವಂತೆ ರವಿಚಂದ್ರನ್, ಮನುರಂಜನ್‌ಗೆ ಹೇಳಿದ್ದಾರೆ. ಇದೀಗ ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.

ಅನೌನ್ಸ್ ಆಯ್ತು 'ಮುಗಿಲ್ ಪೇಟೆ' ಸಿನಿಮಾ ರಿಲೀಸ್ ಡೇಟ್.!

'ಮುಗಿಲ್‌ಪೇಟೆ' ಚಿತ್ರದ ಟೀಸರ್ (Teaser) ಈಗಾಗಲೇ ಬಿಡುಗಡೆಯಾಗಿದ್ದು, ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಹಾಗೂ ದಸರಾ ಹಬ್ಬದ ಪ್ರಯುಕ್ತ ಚಿತ್ರದ 'ತಾರಿಫು ಮಾಡಲು' ವಿಡಿಯೊ ಸಾಂಗ್‌ ಬಿಡುಗಡೆಯಾಗಿ ಯೂಟ್ಯೂಬ್‌ನಲ್ಲಿ (Youtube) ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.  'ಮುಗಿಲ್‌ಪೇಟೆ' ಚಿತ್ರದ ಹೆಸರು ನೋಡಿದರೆ ಸಾಫ್ಟ್‌ ಅನಿಸಬಹುದು. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಲುಕ್‌ ಮಾತ್ರ ತುಂಬಾ ಮಾಸ್‌ ಮತ್ತು ರಗಡ್‌ ಆಗಿದೆ. ಈಗಾಗಲೇ ನೀವು ಚಿತ್ರದ ಫಸ್ಟ್‌ ಲುಕ್‌ ನೋಡಿದ್ದರೆ ನನ್ನ ಈ ಮಾತನ್ನು ಒಪ್ಪುತ್ತೀರಿ. ಸಿನಿಮಾ ಆರಂಭಿಸಿದಾಗ ನಮಗೆ ಇದ್ದ ಅಂದಾಜಿಗಿಂತಲೂ ಹೆಚ್ಚಾಗಿಯೇ ಈ ಸಿನಿಮಾ ಮೂಡಿ ಬಂದಿದೆ. ನನಗೆ ಒಂದು ಪಾಸಿಟಿವ್‌ ಭಾವನೆ ಮೂಡಿಸುತ್ತಿರುವ ಕತೆ ಇದು. ಒಂದು ಕಮರ್ಷಿಯಲ್‌ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಚಿತ್ರಗಳಲ್ಲಿವೆ. ಹೀಗಾಗಿ ಇದೊಂದು ಪ್ರೇಮ ಕಾವ್ಯ ಚಿತ್ರ ಎಂದು ಮನುರಂಜನ್ ಈ ಹಿಂದೆ ತಿಳಿಸಿದ್ದರು.

ಕನ್ನಡ ಚಿತ್ರರಂಗದ ಅಪೂರ್ವ ಸಹೋದರರು ಮನು- ವಿಕ್ರಮ್‌ ರವಿಚಂದ್ರನ್‌

ಇನ್ನು 'ಮುಗಿಲ್‌ಪೇಟೆ' ಚಿತ್ರಕ್ಕೆ ಭರತ್ ಎಸ್. ನಾವುಂದ (Bharath S Navunda) ಆಕ್ಷನ್ ಕಟ್ ಹೇಳಿದ್ದು, ಶ್ರೀಧರ್ ಸಂಭ್ರಮ್ ಅವರ ಸಂಗೀತ ಸಂಯೋಜನೆ ಇದೆ. ಮನುರಂಜನ್‌ಗೆ ನಾಯಕಿಯಾಗಿ ಕಯಾದು ಲೋಹರ್ (Kayadu Lohar) ಅಭಿನಯಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು ಹೀಗೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. ರವಿವರ್ಮ (ಗಂಗು) ಛಾಯಾಗ್ರಹಣ, ಡಾ.ರವಿವರ್ಮ, ವಿಜಯ್ ಸಾಹಸ ನಿರ್ದೇಶನ, ಅರ್ಜುನ್ ಕಿಟ್ಟು ಸಂಕಲನ, ಹರ್ಷ, ಮುರಳಿ , ಮೋಹನ್ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸತೀಶ್ ಅವರ ಕಲಾ ನಿರ್ದೇಶನವಿದೆ. ಇದೇ ತಿಂಗಳು 19ರಂದು ಚಿತ್ರ ಬಿಡುಗಡೆಯಾಗಲಿದೆ.
 

Follow Us:
Download App:
  • android
  • ios