ಆಸ್ಪತ್ರೆಗೆ ದಾಸ ಶಿಫ್ಟ್: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ
ಹೈಕೋರ್ಟ್ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್‌ಗೆ ಟ್ರೀಟ್ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ.
ಹೈಕೋರ್ಟ್ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್‌ಗೆ ಟ್ರೀಟ್ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ. ಫ್ಯಾನ್ಸ್ ಹುಚ್ಚಾಟ, ಎಳೆದಾಟದಿಂದ ದರ್ಶನ್ ನೋವಿನಿಂದ ಕಿರುಚುವ ಪರಿಸ್ಥಿತಿ ಎದುರಾಗಿದೆ. ಬೆನ್ನು ನೋವಿನಿಂದ ಪರದಾಡ್ತಾ ಇರೋ ದರ್ಶನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಚ್ಚು ಅಭಿಮಾನಿಗಳು ಸೇರಿಕೊಳ್ತಾರೆ ಅನ್ನೋ ಕಾರಣಕ್ಕೇನೆ ತಡರಾತ್ರಿ ದರ್ಶನ್ನ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೂ ಕೂಡ ದಾಸನ ಅಂದಾಭಿಮಾನಿಗಳ ಪಡೆ ಆಸ್ಪತ್ರೆಯೆದರು ಸೇರಿ ಗಲಾಟೆ ಮಾಡಿದೆ. ಆಸ್ಪತ್ರೆ ಎದುರು ಸೇರಿದ ಫ್ಯಾನ್ಸ್ನ ಕಂಟ್ರೋಲ್ ಮಾಡೋದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.
ಜೈ ಡಿ ಬಾಸ್.. ಡಿ ಬಾಸ್ ಅಂತ ಕೂಗ್ತಾ ಇದ್ದ ಅಭಿಮಾನಿಗಳು ದರ್ಶನ್ನ ಮುಟ್ಟೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಯುವಕನೊಬ್ಬ ದರ್ಶನ್ ಕೈಯನ್ನ ಜೋರಾಗಿ ಎಳೆದಿದ್ದು, ಮೊದಲೇ ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್ ನೋವಿನಿಂದ ಕಿರುಚಿಕೊಂಡಿದ್ದಾರೆ. ಹೌದು ಬೆನ್ನು ಹುರಿಯ ನೋವಿನಿಂದ ಬಳಲ್ತಾ ಇರೋ ದರ್ಶನ್‌ಗೆ MRI ಸ್ಕ್ಯಾನ್ ಮಾಡಿರೋ ವೈದ್ಯರು , ಸರ್ಜರಿ ಮಾಡಿಸಿಕೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದಾರೆ. ವಿಮ್ಸ್ ನ್ಯೂರೋ ಸರ್ಜನ್ ಡಾ.ವಿಶ್ವನಾಥ್ , ದರ್ಶನ್ ಪರಿಸ್ಥಿತಿಯನ್ನ ನೋಡಿ ಅತಿ ಶಿಘ್ರದಲ್ಲಿ ಸರ್ಜರಿ ಒಳಗಾಗುವಂತೆ ಸೂಚನೆ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡ ದರ್ಶನ್ ಆರೋಗ್ಯದ ವರದಿ ನೀಡೋದಕ್ಕೆ ಸೂಚನೆ ಕೊಟ್ಟಿದ್ದು 28ನೇ ತಾರೀಖು ಈ ವರದಿ ಹೈಕೋರ್ಟ್ಗೆ ಸಲ್ಲಿಕೆ ಆಗಲಿದೆ. ದರ್ಶನ್ ಬೆನ್ನು ನೋವಿನ ಕಾರಣಕ್ಕೆ ಶೀಘ್ರ ಬೇಲ್ ನೀಡುವಂತೆ ಈಗಾಗ್ಲೇ ದರ್ಶನ್ ಪರ ವಕೀಲರು ಕೇಳಿಕೊಂಡಿದ್ದಾರೆ.
ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ದರ್ಶನ್ ಆರೋಗ್ಯದ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 28ನೇ ತಾರೀಖು ಈ ವರದಿ ಹೈಕೋರ್ಟ್ಗೆ ಸಲ್ಲಿಕೆ ಆಗಲಿದ್ದು, ಇದನ್ನ ಪರಿಗಣಿಸಿ ಹೈಕೊರ್ಟ್ ಬೇಲ್ ನೀಡಬಹುದು ಅನ್ನೋ ಅಸೆ ದರ್ಶನ್ ಪಾಳೆಯದಲ್ಲಿದೆ. ಆದ್ರೆ ಒಂದು ವೇಳೆ 28ನೇ ತಾರೀಖಿಗೂ ಹೈಕೋರ್ಟ್ನಲ್ಲಿ ಬೇಲ್ ಸಿಗದೇ ಹೋದ್ರೆ ದರ್ಶನ್ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ. ಯಾಕಂದ್ರೆ ಈಗಲೇ ದರ್ಶನ್ ನಡೆದಾಡೋಕೆ ಕಷ್ಟಪಡ್ತಿರುವಂತಿದೆ. ದರ್ಶನ್ ಮುಖದಲ್ಲಿ ನೋವಿನ ಗೆರೆಗಳು ಕಾಣ್ತಾ ಇವೆ. ವೈದ್ಯರ ಸಲಹೆಯಂತೆ ಶೀಘ್ರದಲ್ಲಿ ಶತ್ರಚಿಕಿತ್ಸೆ ಪಡೆಯದೇ ಹೋದ್ರೆ ದರ್ಶನ್ ಸ್ಥಿತಿ ಮತ್ತಷ್ಟು ಬಿಗಡಾಯಿಸೋದು ಫಿಕ್ಸ್ ಎನ್ನಲಾಗ್ತಾ ಇದೆ. ದರ್ಶನ್ ಕಣ್ಣು ಮತ್ತೆ ಹೈಕೋರ್ಟ್ ನತ್ತ ನೆಟ್ಟಿದೆ.