Asianet Suvarna News Asianet Suvarna News
breaking news image

Mohanlal in Kantara: ಕಾಂತಾರ ಕಣಕ್ಕೆ ಮಲೆಯಾಳಂನ ಲೂಸಿಫರ್! ರಿಷಬ್ ತಂದೆಯಾಗ್ತಾರಾ ಮೋಹನ್ ಲಾಲ್..?

ಪ್ಯಾನ್ ಇಂಡಿಯಾ ಪ್ರೇಕ್ಷಕಪ್ರಭು ಕಣ್ಣರಳಿಸಿರೋ ಕಾಯ್ತಿರೋ ಸಿನಿಮಾಗಳ ಪೈಕಿ ಕನ್ನಡದ ಕಾಂತಾರ ಚಾಪ್ಟರ್-1 ಕೂಡ ಒಂದು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಲಿರೋ ಕಾಂತಾರ ಪ್ರೀಕ್ವೆಲ್‌ಗಾಗಿ ಸಮಸ್ತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಅದರಲ್ಲೂ ಟೀಸರ್ ರಿಲೀಸ್ ಆದ್ಮೇಲಂತೂ ಕಾಂತಾರ ಪ್ರೀಕ್ವೆಲ್ ಮೇಲಿನ ನಿರೀಕ್ಷೆ ಸಪ್ತಸಾಗರವನ್ನೇ ದಾಟಿ ನಿಂತಿದೆ.

ಫಸ್ಟ್ ಲುಕ್ ಮೂಲಕವೇ ಪ್ಯಾನ್ ಇಂಡಿಯಾ ಲೋಕವನ್ನ ಥಂಡಾ ಹೊಡೆಸಿರೋ ಡಿವೈನ್ ಸ್ಟಾರ್, ಸಿನಿಮಾದಲ್ಲಿ ಇನ್ಯಾವ ರೀತಿ ಧಗಧಗಿಸಬಹುದು. ಕಾಡುಬೆಟ್ಟು ಶಿವಪ್ಪನ ಅಪ್ಪನ ಅವತಾರದಲ್ಲಿ ಶೆಟ್ರು ಹೇಗ್ ಕಾಣಬಹುದು ಅಂತ ಕುತೂಹಲದಿಂದ ಕಣ್ಗಳಿಂದ ಎದುರುನೋಡ್ತಿದ್ದಾರೆ. ಹೀಗಿರುವಾಗಲೇ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ರಜನಿ, ಜೂನಿಯರ್ ಎನ್ ಟಿಆರ್ ಬಳಿಕ ಇದೀಗ ಕಾಂತಾರ(Kantara) ಕಣಕ್ಕೆ ಮಾಲಿವುಡ್ ಸೂಪರ್ ಸ್ಟಾರ್ ಎಂಟ್ರಿ ವಿಷ್ಯವೀಗ ಗುಲ್ಲೆದಿದೆ. ಕಾಂತಾರ ಚಾಪ್ಟರ್1ರಲ್ಲಿ ಶೆಟ್ರು ಜೊತೆ ಯಾರೆಲ್ಲಾ ಕಲಾವಿದರು ಇರ್ತಾರೆ ಅನ್ನೋ ಬಗ್ಗೆ ಹತ್ತಾರು ಹೆಸರುಗಳಿವೆ. ರಿಷಬ್‌ಗೆ(Rishab Shetty) ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಾರೆ ಅಂತ ಹೇಳಲಾಗ್ತಿದೆ. ಇದರ ಮಧ್ಯೆ ಅಲಿಯಾ ಭಟ್, ಸಾಯಿ ಪಲ್ಲವಿ ಹೆಸ್ರು ಓಡಾಡಿದ್ವು. ಈಗ  ಮಲೆಯಾಳಂ ನಟ ಮೋಹಲ್ ಲಾಲ್(Mohanlal) ಜೊತೆ ರಿಷಬ್ ಶೆಟ್ಟಿ ಸೆರೆಯಾಗಿರೋ ಫೋಟೋ ವೈರಲ್ ಆಗಿವೆ. ಇದರ ಹಿಂದಿನ ಜಾಡು ಹಿಡಿದು ಹೋದ್ರೆ ಕಾಂತಾರ ಕಣಕ್ಕೆ ಮಲೆಯಾಳಂನ ಲೂಸಿಪರ್ ಬರ್ತಾರೆ ಅಂತ ಹೇಳಲಾಗ್ತಿದೆ. ರಿಷಬ್ ತಂದೆ ಪಾತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಾರೆ ಅಂತ ಟಾಕ್ ಆಗ್ತಿದೆ.
 
ಕಾಂತಾರ ಪ್ರೀಕ್ವೆಲ್ ನಲ್ಲಿ ರಿಷಬ್ ಹಾಗೂ ಜೂನಿಯರ್ ಎನ್ ಟಿಆರ್ ಸಂಗಮವಾಗ್ತಿದೆ ಎಂಬ ಸುದ್ದಿ ಪ್ರೇಕ್ಷಕರನ್ನು ಒಂಟಿಗಾಲಲ್ಲಿ ನಿಲ್ಲಿಸಿದೆ. ಈ ಬಗ್ಗೆ ರಿಷಬ್ ತುಟಿ ಬಿಚ್ಚಿಲ್ಲ. ಹಾಗಂತ ಇದು ಗಾಳಿ ಸುದ್ದಿ ಎನ್ನುವ ಹಾಗಿಲ್ಲ. ಯಾಕಂದ್ರೆ ಇದು ಬಣ್ಣದ ಲೋಕ ಇಲ್ಲಿ ಏನ್ ಬೇಕಾದ್ರೂ ಆಗಬಹುದು. ಅದೇ ರೀತಿ ದಟ್ಟ ಕಾನನದಲ್ಲಿ ಕಾಣೆಯಾದ ಕಾಡುಬೆಟ್ಟ ಶಿವನ ತಂದೆಯಾಗಿ ಸೂಪರ್ ಸ್ಟಾರ್ ರಜನಿಕಾಂತ್ ಬಣ್ಣ ಹಚ್ಚಲಿದ್ದಾರೆ  ಎಂಬ ದೊಡ್ಡ ಸಮಾಚಾರ ಹರಿದಾಡಿತ್ತು. ಇದಕ್ಕೆ ರಿಷಬ್ ನೋ ಎಂದಿದ್ರು. ಇದೀಗ ಕಾಂತಾರ ರಣಕಣಕ್ಕೆ ಮೋಹನ್ ಲಾಲ್ ಎಂಟ್ರಿ ಖಬರ್ ಹರಿದಾಡ್ತಿದೆ. ಕೊಲ್ಲೂರಿನ ಮುಂಕಾಬಿಕ ದರ್ಶನ ಪಡೆದು ಪುನೀತರಾಗಿರುವ ಮಾಲಿವುಡ್ ಸ್ಟಾರ್ ರಿಷಬ್ ದಂಪತಿ ಜೊತೆಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿದವರೆಲ್ಲಾ ರಿಷಬ್ ತಂದೆಯಾಗ್ತಾರಾ ಮಾಲಿವುಡ್ ಸೂಪರ್ ಸ್ಟಾರ್ ಎಂಬ ಲೆಕ್ಕಚಾರದಲ್ಲಿ ತೊಡಗಿದ್ದಾರೆ.

ಇದನ್ನೂ ವೀಕ್ಷಿಸಿ:  Martin movie: 'ಮಾರ್ಟಿನ್' ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್! ಇದಕ್ಕೆ ಎಪಿ ಅರ್ಜುನ್, ಉದಯ್ ಕೆ ಮಹ್ತಾ ಸ್ಪಷ್ಟನೆ ಹೀಗಿದೆ?

Video Top Stories