Asianet Suvarna News Asianet Suvarna News

ಸಿರಿ ಜೊತೆ ಪ್ರೀತಿಯ ಹೆಜ್ಜೆ ಇಟ್ಟ ರಾಜ್ ಬಿ ಶೆಟ್ಟಿ: ಸ್ವಾತಿ ಮುತ್ತಿನ ಮಳೆ ಹನಿಯೇ ರೊಮ್ಯಾಂಟಿಕ್ ಸಾಂಗ್ ರಿಲೀಸ್

ರಾಜ್ ಬಿ ಶೆಟ್ಟಿ ಬೆಳ್ಳಿತೆರೆಯಲ್ಲಿ ಎಂತಹ ಕಲಾಕರ್ ಅಂತ ನಿಮ್ಗೆಲ್ಲಾ ಗೊತ್ತು. ಒಂದು ಮೊಟ್ಟೆ ಕತೆಯಲ್ಲಿ ಲವ್ ಸ್ಟೋರಿ ಕಟ್ಟಿದ್ದ ರಾಜ್ ಬಿ ಶೆಟ್ಟಿ ಗರುಡಾಗಮನ ರುಷಭಾವಹನ ಹಾಗು ಟೋಬಿ ಸಿನಿಮಾದಲ್ಲಿ ಮಾಸ್ ಅವತಾರ ತಾಳಿದ್ರು. 

ರಾಜ್ ಬಿ ಶೆಟ್ಟಿ ಬೆಳ್ಳಿತೆರೆಯಲ್ಲಿ ಎಂತಹ ಕಲಾಕರ್ ಅಂತ ನಿಮ್ಗೆಲ್ಲಾ ಗೊತ್ತು. ಒಂದು ಮೊಟ್ಟೆ ಕತೆಯಲ್ಲಿ ಲವ್ ಸ್ಟೋರಿ ಕಟ್ಟಿದ್ದ ರಾಜ್ ಬಿ ಶೆಟ್ಟಿ ಗರುಡಾಗಮನ ರುಷಭಾವಹನ ಹಾಗು ಟೋಬಿ ಸಿನಿಮಾದಲ್ಲಿ ಮಾಸ್ ಅವತಾರ ತಾಳಿದ್ರು. ಈಗ ಒನ್ಸ್ ಅಗೈ ಮತ್ತೆ ಪ್ರೇಮಿಯಾಗಿದ್ದಾರೆ ಶೆಟ್ರು. ಅದು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಪ್ರೀತಿಯ ಕಾಣಿಗೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ಮೂಲಕ.  ಈ ಚಿತ್ರದ ಲವ್ ಸಾಂಗ್ ರಿಲೀಸ್ ಆಗಿದೆ. ಸಿರಿ ರವಿಕುಮಾರ್ ಜೊತೆ ರಾಜ್ ಬಿ ಶೆಟ್ಟಿ ಪ್ರೀಯ ಹೆಜ್ಜೆ ಇಟ್ಟಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ನಟಿ ರಮ್ಯಾ ನಿರ್ಮಾಣದ ಮೊದಲ ಚಿತ್ರ. ಈ ಸಿನಿಮಾದಲ್ಲಿ ನಾಯಕಿಯಾಗಿ ರಮ್ಯಾ ನಟಿಸಬೇಕಿತ್ತು. 

ಆದ್ರೆ ಅದೇನ್ ಆಯ್ತೋ ಗೊತ್ತಿಲ್ಲ. ಆ ಜಾಗಕ್ಕೆ ಸಿರಿ ರವಿ ಕುಮಾರ್ ಬಂದ್ರು. ಯಾರ್ ಬಂದ್ರೆ ಏನಂತೆ ನಮ್ ಕೆಲಸ ಪ್ರೇಕ್ಷಕರಿಗೆ ಇಷ್ಟ ಆಗ್ಬೇಕು ಅಂತ ಯೋಚ್ನೆ ಮಾಡೋ ರಾಜ್ ಬಿ ಶೆಟ್ಟಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನ ಮುತ್ತಿನಂತೆ ಕಾಪಾಡಿಕೊಂಡು ಕಥೆ ಚಿತ್ರಕತೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಹೀರೋ ಕೂಡ ರಾಜ್ ಬಿ ಶೆಟ್ಟಿಯವರೇ.. ಸ್ವಾತಿ ಮುತ್ತಿನ ಮಳೆ ಹನಿಯೇ ಪ್ರ್ಯೂರ್ ಲವ್ ಸ್ಟೋರಿ ಸಿನಿಮಾ. ಮಿಧುನ್‍ ಮುಕುಂದನ್‍ ಸಂಗೀತ ನೀಡಿದ್ದಾರೆ. ಮಾಧುರಿ ಶೇಷಾದ್ರಿ ಕಂಠದಲ್ಲಿ ಹಾಡು ಮೂಡಿ ಬಂದಿದ್ದು ಪೃಥ್ವಿ ಸಾಹಿತ್ಯ ಬರೆದಿದ್ದಾರೆ. ‘ಸ್ಯಾಂಡಲ್‌ವುಡ್‌ ಕ್ವೀನ್‌’ ರಮ್ಯಾ ದಿವ್ಯ ಸ್ಪಂದನಾ ಅವರ ಒಡೆತನದ ‘ಆ್ಯಪಲ್‍ ಬಾಕ್ಸ್ ಸ್ಟುಡಿಯೋಸ್‍’ ಸಂಸ್ಥೆಯ ಮೂಲಕ ನಿರ್ಮಾಣ ಆದ ಮೊದಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’. ನವೆಂಬರ್ 24ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

Video Top Stories