Abhishek Ambareesh Wedding: ಅಭಿ-ಅವಿವಾ ಮದುವೆಯಲ್ಲಿ ಮೇಘನಾ ರಾಜ್
ಅಭಿಷೇಕ್ ಮತ್ತು ಅವಿವಾ ಮದುವೆಯಲ್ಲಿ ನಟಿ ಮೇಘನಾ ರಾಜ್ ಸುಂದರವಾಗಿ ಕಾಣಿಸುತ್ತಿದ್ದರು. ತಂದೆ ಜೊತೆ ಮದುವೆಗೆ ಆಗಮಿಸಿದ ನಟಿ ಸಂತಸ ವ್ಯಕ್ತಪಡಿಸಿದರು.
ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಬಹುಕಾಲದ ಗೆಳತಿ ಅವಿವಾ ಬಿಡಪ ಜೊತೆ ಇಂದು (ಜೂನ್ 5) ದಾಂಪತ್ಯಕ್ಕೆ ಕಾಲಿಟ್ಟರು. ಇಂದು ಬೆಳಗ್ಗೆ 9:30 ರಿಂದ 10:30 ವರೆಗೆ ನಡೆದ ಮುಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ಪತಿ-ಪತ್ನಿಯರಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಹಾಜರಾಗಿ ಶುಭಹಾರೈಸಿದ್ದಾರೆ. ಸ್ಯಾಂಡಲ್ ವುಡ್ ಹಾಗೂ ಪರಭಾಷೆಯ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದಾರೆ. ನಟಿ ಮೇಘನಾ ರಾಜ್ ಕೂಡ ಅಂಬಿ ಪುತ್ರನ ಮದ್ವೆಯಲ್ಲಿ ಭಾಗಿಯಾಗಿದ್ದರು. ತಂದೆಯ ಜೊತೆ ಮದುವೆಗೆ ಆಗಮಿಸಿದ್ದ ಮೇಘನಾ ಸುಂದರವಾಗಿ ಕಂಗೊಳಿಸುತ್ತಿದ್ದರು.