Matinee Trailer Release: ಸತೀಶ್-ರಚಿತಾ ಚಿತ್ರಕ್ಕೆ ಸಿಕ್ತು ದರ್ಶನ್ ಸಾಥ್! ಮ್ಯಾಟ್ನಿ ಟ್ರೈಲರ್ ರಿಲೀಸ್ ಮಾಡಿದ ದರ್ಶನ್..!

ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತರಾಮ್ ಅಭಿನಯದ ಮ್ಯಾಟ್ನಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ನಟ ದರ್ಶನ್ ಮ್ಯಾಟಿ ಸಿನಿಮಾದ ಟ್ರೈಲರ್ ಲಾಂಚ್ ಮಾಡುವ ಮೂಲಕ ಸಿನಿಮಾಗೆ ಸಾಥ್ ನೀಡಿದ್ದಾರೆ. ದರ್ಶನ್ ಜತೆ ಡಾಲಿ ಧನಂಜಯ್ ಕೂಡ ಸ್ನೇಹಿತನ ಸಿನಿಮಾಗಾಗಿ ನಿಂತಿದ್ರು.
 

Share this Video
  • FB
  • Linkdin
  • Whatsapp

ಇಷ್ಟು ದಿನಗಳ ಕಾಲ ತೆರೆ ಮೇಲೆ ಕ್ಯೂಟ್ ಹಾಗೂ ರೋಮ್ಯಾಂಟಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ರಚಿತಾ ರಾಮ್(Rachita Ram) ಮ್ಯಾಟ್ನಿ ಸಿನಿಮಾದಲ್ಲಿ(Matinee Movie) ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸತೀಶ್ ನಿನಾಸಂ(Sathish Ninasam) ಕೂಡ ಇದೆ ಮೊದಲ ಬಾರಿಗೆ ಹಾರರ್ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್(Trailer) ಸಾಕಷ್ಟು ಕುತೂಹಲ ಮೂಡಿಸಿದ್ದು ಸಿನಿಮಾದಲ್ಲಿ ಯಾರು ಡೆವಿಲ್ ಎನ್ನುವುದು ಕುತೂಹಲ ಮೂಡಿಸಿದೆ. ಮ್ಯಾಟ್ನಿ ಚಿತ್ರದಲ್ಲಿ ಸತೀಶ್, ರಚಿತಾ ರಾಮ್(Rachita Ram) ಸೇರಿದಂತೆ ಅದಿತಿ ಪ್ರಭುದೇವಾ ಶಿವರಾಜ್ ಕೆಆರ್ ಪೇಟೆ, ನಾಗಭೂಷಣ್, ಪೂರ್ಣ ಮೈಸೂರು, ದಿಗಂತ್ ದಿವಾಕರ್, ತುಳಸಿ ಶಿವರಾಮ್ ತಬಲ ನಾಣಿ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಮ್ಯಾಟ್ನಿ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು ಪಾರ್ವತಿ ಗೌಡ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ: Toxic Movie: ಯಶ್‌ಗೆ ಕರೀನಾ ತಂಗಿಯಾದ್ರೆ ನಾಯಕಿ ಯಾರು..? ಸಾಯಿ ಪಲ್ಲವಿಗೆ ಗಾಳ ಹಾಕಿದೆಯಾ ಟಾಕ್ಸಿಕ್ ಟೀಂ..?

Related Video