Asianet Suvarna News Asianet Suvarna News

KGF 2 ಥಿಯೇಟರ್‌ನಲ್ಲಿ ರಿಯಲ್ ಬುಲೆಟ್ ಗನ್: ಹಾವೇರಿಯಲ್ಲಿ ಸಿನಿಮೀಯ ಘಟನೆ!

ಸಿನಿಮಾ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬನ ಹೊಟ್ಟೆಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ನಡೆದಿದೆ. ಗಾಯಾಳುವನ್ನು ವಸಂತ ಕುಮಾರ್ ಎಂದು ಗುರುತಿಸಲಾಗಿದೆ. 

ಬಾಕ್ಸಾಫೀಸ್‍ನಲ್ಲಿ ಕೆಜಿಎಫ್-2 (KGF 2) ಧೂಳೆಬ್ಬಿಸುತ್ತಿದೆ. ವಾರದ ದಿನಗಳಲ್ಲೂ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ.  ಈವರೆಗೂ ಹಿಂದಿ ಮಾರ್ಕೆಟ್ ಒಂದ್ರಲ್ಲೇ 219.6 ಕೋಟಿ ರೂಪಾಯಿ ಗಳಿಸಿದೆ. ಅಭಿಮಾನಿಗಳು ರಾಕಿಯಂತೆ ಡೈಲಾಗ್ ಹೊಡಿಯುತ್ತಾ ಪೋಸ್ ಕೊಡೋದಲ್ದೆ ರಾಕೀಭಾಯ್ರಂತೆ ಸುತ್ತಿಗೆ ತಂದು ಕ್ಯಾಮೆರಾಗಳಿಗೆ ಜನ ಗಳ ಮುಂದೆ ಬ್ಯುಲ್ಡಬ್ ಕೊಡುತ್ತಿದ್ದಾರೆ. ಇನ್ಯಾರೋ ಒಬ್ಬ ಗನ್ ತಂದು ಕ್ಯಾಮೆರಾ ಮುಂದೆ ಸಿನಿಮಾ ಸಖತ್ತಾಗಿದೆ ಎಂದಿದ್ದ. ಆದರೆ ಇದೀಗ ಬರೀ ಪೋಸ್ ಕೊಡೋದಲ್ಲ ರಿಯಲ್ಲಾಗೆ ಒಂದು ಸಿನಿಮೀಯ ಘಟನೆ ನಡೆದು ಹೋಗಿದೆ. ಹಾವೇರಿ ಚಿತ್ರಮಂದಿರದಲ್ಲಿ ರಿಯಲ್ ಗನ್ ತಂದು ಗುಂಡು ಹಾರಿಸಿದ್ದಾನೆ. 

ಕೆಜಿಎಫ್ 2 ರಿಲೀಸ್ ನಂತರ ರಾಕಿಂಗ್ ಸ್ಟಾರ್ ಯಶ್ ಎಲ್ಲಿದ್ದಾರೆ.?

ಸಿನಿಮಾ ವೀಕ್ಷಣೆ ಮಾಡುವ ಸಂದರ್ಭದಲ್ಲಿ ಗುಂಡು ಹಾರಿದ ಪರಿಣಾಮ ಯುವಕನೊಬ್ಬನ ಹೊಟ್ಟೆಗೆ ಗಾಯವಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ನಡೆದಿದೆ. ಗಾಯಾಳುವನ್ನು ವಸಂತ ಕುಮಾರ್ ಎಂದು ಗುರುತಿಸಲಾಗಿದೆ. ಕೂಡಲೇ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರಮಂದಿರದಲ್ಲಿ ಗುಂಡು ಹಾರಿರುವುದನ್ನು ಎಸ್‍ಪಿ ಹನುಮಂತರಾಯ ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.