ಡ್ರಗ್ ಸ್ಮಗ್ಲಿಂಗ್ ಕಥೆಗೆ ಮಾಲೆಯಾಳಂ ಬ್ಯೂಟಿ ನಾಯಕಿ! ಡಿಸೆಂಬರ್‌ನಿಂದ ಶುರುವಾಗುತ್ತಾ ಯಶ್19 ಶೂಟಿಂಗ್ ?

ರಾಕಿ ನ್ಯೂ ವೆಂಚರ್‌ಗೆ ಫಿಕ್ಸ್ ಆದ್ರಾ ಹೀರೋಯಿನ್ ?
ಯಶ್ ಚಿತ್ರದಲ್ಲಿ ಮಲೆಯಾಳಂ ಬ್ಯೂಟಿ ನಟನೆ
ಡಿಸೆಂಬರ್‌ನಿಂದ ಶುರುವಾಗುತ್ತಾ ಯಶ್19 ಶೂಟಿಂಗ್?

First Published Sep 14, 2023, 9:11 AM IST | Last Updated Sep 14, 2023, 9:11 AM IST


ರಾಕಿ ಈಗ ಕ್ರೇಜ್ ಕಾ ಬಾಪ್.. ಯಂಗ್ ಸ್ಟಾರ್ಸ್‌ಗಳ ಫಸ್ಟ್ ಸೆಲೆಕ್ಷನ್. ಯಶ್(Yash) ಜತೆ ನಟಿಸಬೇಕು ಅಂತ ಆಸೆ ಪಟ್ಟವ್ರು ಒಂದಿಬ್ರಲ್ಲ. ಬಾಲಿವುಡ್‌ನ ಟಾಪ್ ಹೀರೋಯಿನ್ಸ್, ತೆಲುಗಿನ ಹಾಟ್ ಹೀರೋಯಿನ್ಸ್‌ಗಳೆಲ್ಲಾ ಯಶ್ ಸಿನಿಮಾ ಚಾನ್ಸ್‌ಗಾಗಿ ಕೇಳಿಕೊಂಡವರೇ. ಇದೀಗ ರಾಕಿ 19ನೇ ಸಿನಿಮಾ ಬರ್ತಿದೆ. ಈ ಸಿನಿಮಾದ ಹೀರೋಯಿನ್ ಯಾರಾಗ್ತಾರೆ ಅನ್ನೋ ದೊಡ್ಡ ಕುತೂಹಲಕ್ಕೆ ಹೊಸ ಹೆಸರೊಂದು ಆ್ಯಡ್‌ ಆಗಿದೆ. ಕೆಜಿಎಫ್‌ನಲ್ಲಿ(KGF) ಗೋಲ್ಡ್ ಸ್ಮಗ್ಲಿಂಗ್ ಹಿಂದೆ ಬಿದ್ದ ರಾಕಿ ಈಗ 19ನೇ ಸಿನಿಮಾದಲ್ಲಿ ಗೋವಾ ಡ್ರಗ್ಸ್ ಸ್ಮಗ್ಲಿಂಗ್ ಸ್ಟೋರಿಯನ್ನ ಪಿನ್ ಟು ಪಿನ್ ಬಿಚ್ಚಿಡಲಿದ್ದಾರೆ. ಈ ಸ್ಟೋರಿಯನ್ನ ಕೆತ್ತಿ ತಿದ್ದಿ ತೀಡಿ ಒಂದು ರೂಪ ಕೊಟ್ಟವ್ರು ಮಲೆಯಾಳಂನ ಟಾಪ್ ಡೈರೆಕ್ಟರ್ ಗೀತು ಮೋಹನ್ ದಾಸ್(Geetu Mohandas). ಇದೀಗ ಈಗ ಡ್ರಗ್ಸ್ ಸ್ಮಗ್ಲಿಂಗ್ ಸ್ಟೋರಿಗೆ ಮಲೆಯಾಳಂ ಬ್ಯೂಟಿ ಹೀರೋಯಿನ್(malayalam actress) ಆಗಿ ಫಿಕ್ಸ್ ಆಗಿದ್ದಾರಂತೆ ಅವ್ರೇ ಸಂಯುಕ್ತಾ ಮೆನನ್. ಸಂಯುಕ್ತಾ ಮೆನನ್ ಮಲೆಯಾಳಂ ಚಿತ್ರರಂಗದಲ್ಲಿ ಸಧ್ಯ ಟ್ರೆಂಡಿಂಗ್ನಲ್ಲಿರೋ ಚೆಲುವೆ. ನೀಳಕಾಯ ದೇಹ, ಮುದ್ದು ಮುಖ, ನೋಟದಲ್ಲೇ ಕೊಲ್ಲೋ ಕಣ್ಣೋಟ. ಅಬ್ಬಬ್ಬ ಈ ಸೌಂಧರ್ಯದ ಶಿಕರವೇ ಬಂದು ನಿಂತಕ್ಕೆ ಕಾಣಿಸ್ತಾರೆ ಈ ಬ್ಯೂಟಿ.  2016ರಿಂದ ಮಲೆಯಾಳಂ ಸಿನಿ ರಂಗದಲ್ಲಿ ಬೆಳಗುತ್ತಿರೋ ಸಂಯುಕ್ತಾ ತೆಲುಗು, ತಮಿಳು ಚಿತ್ರರಂಗಕ್ಕೆ ಚಿರ ಪರಿಚಿತ. ವಾತಿ, ಬಿಂಬಿಸಾರ ಬಿಂಬ್ಲಾ ನಾಯಕ್ತರದ ಕ್ಯಾರೆಕ್ಟರ್ ಬೇಸ್ಟ್ ಸಿನಿಮಾಗಳಲ್ಲೇ ಆಯ್ಕೆ ಮಾಡುತ್ತಾ ಬಂದಿರೋ ಸಂಯುಕ್ತಾ ಮೆನನ್‌ಗೆ(Samyuktha Menon) ಈಗ ರಾಕಿಯ ಬಿಗ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ ಅಂತ ಸುದ್ದಿಯಾಗ್ತಿದೆ. 

ಇದನ್ನೂ ವೀಕ್ಷಿಸಿ: Today Horoscope: ಇಂದು ಅಮಾವಾಸ್ಯೆ ಇದ್ದು, ಪಿತೃದೇವತೆಗಳನ್ನು ಸ್ಮರಿಸಿ..