ಅಭಿಷೇಕ್ ಸಂಗೀತ್‌ನಲ್ಲಿ ಕುಣಿದು ಕುಪ್ಪಳಿಸಿದ ಸುಮಲತಾ, ಮಾಲಾಶ್ರೀ: ಹೇಯ್ ಜಲೀಲ ಹಾಡಿಗೆ ಸಖತ್ ಡ್ಯಾನ್ಸ್..!
ಅಭಿಷೇಕ್-ಅವಿವಾ ಅದ್ದೂರಿ ವೆಡ್ಡಿಂಗ್ ಪಾರ್ಟಿಗೆ ಕನ್ನಡ ಸಿನಿಮಾ ಗಣ್ಯರು ಮಾತ್ರವಲ್ಲದೇ ಪರಭಾಷೆಯ ತಾರೆಯರು ಆಗಮಿಸಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಬಾಬು ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿದಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿದಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ. ಅಭಿಷೇಕ್-ಅವಿವಾ ಅದ್ದೂರಿ ವೆಡ್ಡಿಂಗ್ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್‌ಗಳಾದ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ, ರಮ್ಯಾಕೃಷ್ಣ, ಶಿವರಾಜ್‌ಕುಮಾರ್, ಮಾಲಾಶ್ರೀ, ಗುರುಕಿರಣ್, ಭಾರತಿ ವಿಷ್ಣುವರ್ಧನ್ ಪ್ರಭುದೇವ, ಮಂಚು ಮನೋಜ್ ಸೇರಿದಂತೆ ಹಲವರು ಸಂಗೀತ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕರಡಿ: ಸ್ವಲ್ಪದರಲ್ಲೇ ಬಚಾವ್... ಅಬ್ಬಾ..! ಭಯಾನಕ ವಿಡಿಯೋ