
ಬೈಕ್ ಸವಾರನ ಮೇಲೆ ದಾಳಿಗೆ ಮುಂದಾದ ಕರಡಿ: ಸ್ವಲ್ಪದರಲ್ಲೇ ಬಚಾವ್... ಅಬ್ಬಾ..! ಭಯಾನಕ ವಿಡಿಯೋ
ಕೊಪ್ಪಳದಲ್ಲಿ ಕರಡಿಯೊಂದು ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ದಾಳಿ ಮಾಡಲು ಬಂದಿದ್ದು, ಆತ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾನೆ.
ಕರಡಿಯೊಂದು ಬೈಕ್ ಸವಾರನ ಮೇಲೆ ದಾಳಿ ನಡೆಸಲು ಮುಂದಾದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯ ಗುಂಡೂರು ಗ್ರಾಮದಲ್ಲಿ ನಡೆದಿದೆ. ರಸ್ತೆಯಲ್ಲಿ ಬೈಕ್ ಸವಾರ ಹೋಗುತ್ತಿರುವಾಗ ಕರಡಿ ಆತನನ್ನು ಬೆನ್ನಟ್ಟಿಕೊಂಡು ಬರುತ್ತಿದೆ. ಸವಾರ ಸ್ವಲ್ಪದರಲ್ಲೇ ಕರಡಿಯಿಂದ ಬಚಾವ್ ಆಗಿದ್ದಾನೆ. ಅಕ್ಕ ಪಕ್ಕದಲ್ಲಿ ಯಾವುದೇ ಗುಡ್ಡಗಾಡು ಪ್ರದೇಶ ಇಲ್ಲದಿದ್ರು ಕೂಡ ಕರಡಿಗಳು ಗ್ರಾಮಕ್ಕೆ ನುಗ್ಗುತ್ತಿವೆ. ಅಲ್ಲದೇ ಹೊಲಗಳಲ್ಲಿ ಬೆಳೆಯನ್ನು ನಾಶ ಮಾಡುತ್ತಿವೆ. ಗ್ರಾಮಸ್ಥರ ಕೂಗಾಟ ಕಂಡು ಕರಡಿ ಓಡಿ ಹೋಗಿದೆ. ಅಲ್ಲದೇ ಕರಡಿಗಳನ್ನು ಕಂಡು ಗ್ರಾಮಸ್ಥರು ಭಯಭೀತರಾಗಿದ್ದು, ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಶಕ್ತಿ ಯೋಜನೆಗೆ ಚಾಲನೆ: ಸ್ತ್ರೀಯರು ಫುಲ್ ಖುಷ್... ಈ ಬಗ್ಗೆ ಮಹಿಳಾಮಣಿಗಳು ಹೇಳೋದೇನು ?