'ಭಕ್ತ ಪ್ರಹ್ಲಾದ' ಚಿತ್ರಕ್ಕೂ ಪವರ್ ಸ್ಟಾರ್ 'ಲಕ್ಕಿ ಮ್ಯಾನ್‌'ಗೂ ಇದೆ ನಂಟು; ಏನದು?

ಪುನೀತ್ ಅವರ ಲಕ್ಕಿ ಮ್ಯಾನ್ ಗೂ ಅಣ್ಣಾವ್ರ ಭಕ್ತಪ್ರಹ್ಲಾದ ಸಿನಿಮಾಗೂ ಈಗ ಹೊಸ ನಂಟೊಂದು ಹುಟ್ಟಿಕೊಂಡಿದೆ.  ಲಕ್ಕಿ ಮ್ಯಾನ್ ಸೆಪ್ಟೆಂಬರ್ 09ರಂದು ಬಿಡುಗಡೆ ಆಗುತ್ತಿದೆ. ಕಾಕತಾಳಿಯವೋ ಏನೋ ಲಕ್ಕಿ ಮ್ಯಾನ್ ಬಿಡುಗಡೆ ಆಗುತ್ತಿರೋದು, ಅಪ್ಪು ಬಾಲನಟನಾಗಿ ನಟಿಸಿದ್ಧ 'ಭಕ್ತ ಪ್ರಹ್ಲಾದ' ಸಿನಿಮಾ ಬಿಡುಗಡೆಯಾದ ದಿನದಂದೇ. 

First Published Sep 6, 2022, 3:10 PM IST | Last Updated Sep 6, 2022, 3:10 PM IST

ಭಕ್ತ ಪ್ರಹ್ಲಾದ ಸಿನಿಮಾವನ್ನ ಮರೆಯೋಕೆ ಸಾಧ್ಯನಾ. ಒಂದ್ ಕಡೆ ನಟ ಸಾರ್ವಭೌಮ ಧಗಧಗಿಸಿ ನಟಿಸಿದ್ದನ್ನ ಕಣ್ತುಂಬಿಕೊಳ್ಳೋದಾದ್ರೆ, ಮತ್ತೊಂದು ಕಡೆ ಪುನೀತ್ ರಾಜ್ ಕುಮಾರ್ ಅಪ್ಪನನ್ನೇ ಮೀರಿಸೋ ಮಟ್ಟಕ್ಕೆ ವಿಜೃಂಭಿಸಿದ್ರು. ಈ ಸಿನಿಮಾದಲ್ಲಿ ಪುನೀತ್ ವಿಷ್ಣು ಭಕ್ತನಾಗಿ ನಟಿಸಿದ್ರು. ಇದೀಗ ಪವರ್ ಸ್ಟಾರ್ ನಟಿಸಿರೋ ಲಕ್ಕಿ ಮ್ಯಾನ್ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ಅಪ್ಪು ದೇವರ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪುನೀತ್ ಅವರ ಲಕ್ಕಿ ಮ್ಯಾನ್ ಗೂ ಅಣ್ಣಾವ್ರ ಭಕ್ತಪ್ರಹ್ಲಾದ ಸಿನಿಮಾಗೂ ಈಗ ಹೊಸ ನಂಟೊಂದು ಹುಟ್ಟಿಕೊಂಡಿದೆ. ದೊಡ್ಮನೆ ಮುಕುಟ ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ದೇವರಾಗಿದ್ದಾರೆ. ಈ ದೇವರನ್ನ ದೇವರ ರೂಪದಲ್ಲೇ ಕಾಣೋ ಸಿನಿಮಾ ಲಕ್ಕಿ ಮ್ಯಾನ್ ಸೆಪ್ಟೆಂಬರ್ 09ರಂದು ಬಿಡುಗಡೆ ಆಗುತ್ತಿದೆ. ಕಾಕತಾಳಿಯವೋ ಏನೋ ಲಕ್ಕಿ ಮ್ಯಾನ್ ಬಿಡುಗಡೆ ಆಗುತ್ತಿರೋದು, ಅಪ್ಪು ಬಾಲನಟನಾಗಿ ನಟಿಸಿದ್ಧ 'ಭಕ್ತ ಪ್ರಹ್ಲಾದ' ಸಿನಿಮಾ ಬಿಡುಗಡೆಯಾದ ದಿನದಂದೇ. ಸೆಪ್ಟೆಂಬರ್ 09ರಂದು ಭಕ್ತಪ್ರಹ್ಲಾದ ಚಿತ್ರ ತೆರೆ ಕಂಡಿತ್ತು. ಅದೇ ದಿನ, ಇದೇ ತಿಂಗಳು ಪುನೀತ್ ದೇವರ ರೂಪದಲ್ಲಿ ಲಕ್ಕಿ ಮ್ಯಾನ್ ಸಿನಿಮಾದಲ್ಲಿ ತೆರೆ ಮೇಲೆ ಬರುತ್ತಿದ್ದಾರೆ.