ಪ್ರೇಮಮಯಿ ಲೀಲಾವತಿ 11ನೇ ದಿನದ ವೈಕುಂಠ ಸಮಾರಾಧನೆ ಮಾಡಿದ ಮಗ..!
ಸ್ಯಾಂಡಲ್‌ವುಡ್‌ನ ಹಿರಿಯ ಜೀವ ನಟಿ ಲೀಲಾವತಿ ಅಗಲಿ ಇಂದಿಗೆ 11 ದಿನವಾಗಿದೆ. ಲೀಲಾವತಿಯವರ 11ನೇ ದಿನದ ವೈಕುಂಠ ಸಮಾರಾಧನೆಯನ್ನು ಸೋಲದೇವನಹಳ್ಳಿಯಲ್ಲಿ ನೆರವೇರಿಸಲಾಯ್ತು.
ಪುಣ್ಯ ತಿಥಿಗೆ ಲೀಲಾವತಿಗೆ(Leelavati) ಇಷ್ಟವಾಗುವ ವಿಶೇಷ ತಿನಿಸುಗಳನ್ನು ನೈವೇದ್ಯದ ರೂಪದಲ್ಲಿ ಇಡಲಾಗಿತ್ತು. ವೈಕುಂಠ ಸಮಾರಾಧನೆಗೆ ಸೋಲದೇವನಹಳ್ಳಿಯ(Soladevanahalli) ಜನರು ಸೇರಿ ಸಿನಿಮಾರಂಗದ ಗಣ್ಯರು ಆಗಮಿಸಿ, ಬರುವವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಪೂಜಾ ಕೆಲಸಗಳಲ್ಲಿ ಪುತ್ರ ವಿನೋದ್ ರಾಜ್(Vinod raj), ಸೊಸೆ ಅನು, ಮೊಮ್ಮಗ ಯುವರಾಜ ಲೀಲಮ್ಮನ ತಿಥಿ ಕಾರ್ಯದಲ್ಲಿ ಭಾಗವಹಿಸಿದ್ರು. ಚಿತ್ರರಂಗ ಕಂಡ ಹಿರಿ ಜೀವ ಲೀಲಾವತಿಯವ್ರು, ಸುದೀರ್ಘ 5 ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಈ ಹಿರಿ ಜೀವ ಇನ್ನು ನೆನಪು ಮಾತ್ರ.
ಇದನ್ನೂ ವೀಕ್ಷಿಸಿ: ಡಂಕಿ v/s ಸಲಾರ್..ಯಾರು ಗೆಲ್ತಾರೆ..? ಯಾರು ಸೋಲ್ತಾರೆ..?