ಅಮ್ಮನ ಜೊತೆ ಡ್ಯಾನ್ಸ್‌ ಮಾಡಿದ ನಟ ವಿನೋದ್ ರಾಜ್‌: ವಿಡಿಯೋ

ನಟ ವಿನೋದ್‌ ರಾಜ್‌ ತಮ್ಮ ತಾಯಿ ಲೀಲಾವತಿ ಅವರೊಂದಿಗೆ ಹಾಡಿಗೆ ಡ್ಯಾನ್ಸ್‌ ಮಾಡುವ ವಿಡಿಯೋ ಸದ್ಯ ವೈರಲ್‌ ಆಗುತ್ತಿದೆ.
 

Share this Video
  • FB
  • Linkdin
  • Whatsapp

ಕನ್ನಡದ ಖ್ಯಾತ ನಟ ವಿನೋದ್ ರಾಜ್ ಅವರು ತಮ್ಮ ತಾಯಿಯ ಆರೋಗ್ಯ ಸರಿಯಾಗಲಿ ಎಂದು ಅವರ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಕನ್ನಡದ ಖ್ಯಾತ ನಟರಾದ ವಿನೋದ್ ರಾಜ್ ತಮ್ಮ ತಾಯಿಯನ್ನು ನೋಡಿಕೊಳ್ಳುವ ರೀತಿ ನೋಡಿದರೆ, ತಾಯಿ ಮಗನ ಭಾಂದವ್ಯ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ನಟಿ ಲೀಲಾವತಿ ಅವರ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಬೆಳಗಿನ ವ್ಯಾಯಾಮಕ್ಕೆ ಹಾಡಿನ ಜೊತೆಯಲ್ಲಿ ಹೆಜ್ಜೆ ಹಾಕಿಸಿದ್ದಾರೆ. ಪ್ರತಿದಿನ ಬೆಳಿಗ್ಗೆ ತಾಯಿಯ ಆಸೆಯಂತೆ ವಿನೋದ್ ರಾಜ್ ಅಮ್ಮನ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದು, ಅವರೊಂದಿಗೆ ಬೇರೆ ಬೇರೆ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ.

ಇದನ್ನೂ ವೀಕ್ಷಿಸಿ: ಆ್ಯಕ್ಷನ್ ಪ್ರಿನ್ಸ್ ನಟಿಸಿರೋ ಮಾರ್ಟಿನ್ ಬರೋದ್ಯಾವಾಗ ?: ಶೂಟಿಂಗ್ ಭಾಕಿ ಉಳಿಸಿದ್ದೇಕೆ ನಿರ್ದೇಶಕ ಎ.ಪಿ. ಅರ್ಜುನ್?

Related Video