
ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
ಕಾಂತಾರ ಬಳಿಕ ಮತ್ತೊಮ್ಮೆ ತೆರೆ ಮೇಲೆ ದೈವ ಆವಾಹನೆ ಆಗಲಿದೆ. ಕರಾವಳಿಯ ದೈವದ ಇತಿಹಾಸ, ಪವಾಡ ತೋರಿಸೋ ಮತ್ತೊಂದು ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಯಾವುದು ಈ ಚಿತ್ರ... ಈ ಸ್ಟೋರಿ ನೋಡಿ.
ಕಾಂತಾರ ಬಳಿಕ ಮತ್ತೊಮ್ಮೆ ತೆರೆ ಮೇಲೆ ದೈವ ಆವಾಹನೆ ಆಗಲಿದೆ. ಕರಾವಳಿಯ ದೈವದ ಇತಿಹಾಸ, ಪವಾಡ ತೋರಿಸೋ ಮತ್ತೊಂದು ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದೆ. ಯಾವುದು ಈ ಚಿತ್ರ... ಈ ಸ್ಟೋರಿ ನೋಡಿ. ಕರಾವಳಿ ದೈವಗಳ ಪವಾಡ, ವೈಭವವನ್ನು ಜಗತ್ತಿಗೆ ತೋರಿಸಿದ ಸಿನಿಮಾ ಕಾಂತಾರ. ಕಾಂತಾರ ಮತ್ತು ಕಾಂತರ ಚಾಪ್ಟರ್1 ಅಮೋಘ ಯಶಸ್ಸಿನ ನಂತರ ದೈವಗಳ ದೈವಿಕ ಕಥೆಯುಳ್ಳ ಅನೇಕ ಸಿನಿಮಾ ತೆರೆಗೆ ಬರ್ತಾ ಇವೆ. ಅವುಗಳ ಸಾಲಿಗೆ ಸೇರುವ ಮತ್ತೊಂದು ಬಿಗ್ ಸಿನಿಮಾ ಕೊರಗಜ್ಜ. ಕೊರಗಜ್ಜನ ಪವಾಡಗಳ ಬಗ್ಗೆ ಕರಾವಳಿಗರಲ್ಲಿ ಅವರದ್ದೇ ಆದ ನಂಬಿಕೆಗಳಿವೆ. ಸದ್ಯ ಇಂಥ ಕೊರಗಜ್ಜನ ಕಥೆಯುಳ್ಳ ಚಿತ್ರವನ್ನು ರೆಡಿ ಮಾಡಿದ್ದಾರೆ ನಿರ್ದೇಶಕ ಸುಧೀರ್ ಅತ್ತಾವರ್.
ಕಬೀರ್ ಬೇಡಿ ಮುಖ್ಯಪಾತ್ರದಲ್ಲಿ ನಟಿಸಿರೋ ಈ ಚಿತ್ರದ ಗುಳಿಗ...ಗುಳಿಗ... ಅನ್ನೋ ಹಾಡು ರಿಲೀಸ್ ಆಗಿದ್ದು, ಭರ್ಜರಿ ಸೌಂಡ್ ಮಾಡ್ತಾ ಇದೆ. ನಿರ್ದೇಶಕ ಸುಧೀರ್ ಅತ್ತಾವರ್ ರವರೇ ಬರೆದಿರುವ "ಗುಳಿಗ.,..ಘೋರ ಗುಳಿಗಾ...!" ಎನ್ನುವ ರ್ ಯಾಪ್ ಮಿಶ್ರಿತ ಹಾಡನ್ನ ಸಂಗೀತ ನಿರ್ದೇಶಕ ಗೋಪಿಸುಂದರ್ ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಬಹಳಷ್ಟು ಸವಾಲುಗಳನ್ನು ಎದುರಿಸಿ ಸಜ್ಜಾಗಿರೋ ಕೊರಗಜ್ಜ ಸಿನಿಮಾ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ತುಳು, ಕನ್ನಡ ಜೊತೆ ಆರು ಭಾಷೆಗಳಲ್ಲಿ ಸಿದ್ಧವಾಗಿರುವ ಈ ಸಿನಿಮಾ ಮತ್ತೊಮ್ಮೆ ವಿಶ್ವದಾದ್ಯಂತ ದೈವ ಪವಾಡ ಸಾರೋದಕ್ಕೆ ಸಜ್ಜಾಗಿದೆ.