ಕಿಚ್ಚನ ದನಿಯಲ್ಲಿ ‘ನೀ ನನ್ನ ಜೀವ ಗೆಳೆಯ ಕಣೋ’: ‘ಫ್ರೆಂಡ್​ಶಿಪ್​’ ಆಂಥಮ್ ಹಾಡಿದ ಸುದೀಪ್

ಫ್ಲರ್ಟ್ ಸಿನಿಮಾದಲ್ಲಿ ಕಿಚ್ಚ ಹಾಡಿರೋ ಆ ಹಾಡನ್ನ ಫ್ರೆಂಡ್ ಶಿಪ್ ಆಂಥಮ್ ಅಂದ್ರೂ ತಪ್ಪಾಗಲ್ಲ. ಕಿಚ್ಚ ಸುದೀಪ್ ನಟ, ನಿರ್ಮಾಪಕ, ನಿರ್ದೇಶಕ ಅಷ್ಟೇ ಅಲ್ಲ ಒಳ್ಳೆ ಗಾಯಕ ಕೂಡ ಹೌದು.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಫ್ರೆಂಡ್​ಶಿಪ್ ಗೋಸ್ಕರ ಏನ್ ಮಾಡೋದಕ್ಕೂ ರೆಡಿ. ಸದ್ಯ ಫ್ರೆಂಡ್​ಶಿಪ್ ಗೋಸ್ಕರನೇ ಸುದೀಪ್ ಒಂದು ಫ್ರೆಂಡ್ ಶಿಪ್ ಸಾಂಗ್ ಹಾಡಿದ್ದಾರೆ. ಫ್ಲರ್ಟ್ ಸಿನಿಮಾದಲ್ಲಿ ಕಿಚ್ಚ ಹಾಡಿರೋ ಆ ಹಾಡನ್ನ ಫ್ರೆಂಡ್ ಶಿಪ್ ಆಂಥಮ್ ಅಂದ್ರೂ ತಪ್ಪಾಗಲ್ಲ. ಕಿಚ್ಚ ಸುದೀಪ್ ನಟ, ನಿರ್ಮಾಪಕ, ನಿರ್ದೇಶಕ ಅಷ್ಟೇ ಅಲ್ಲ ಒಳ್ಳೆ ಗಾಯಕ ಕೂಡ ಹೌದು ಅನ್ನೋದು ನಿಮಗೆ ಗೊತ್ತೇ ಇದೆ. ಹಲವು ಸೊಗಸಾದ ಹಾಡುಗಳು ಸುದೀಪ್ ದನಿಯಲ್ಲಿ ಮೂಡಿಬಂದಿವೆ. ಫ್ಲರ್ಟ್ ಅನ್ನೋ ಸಿನಿಮಾಗಾಗಿ ಸುದೀಪ್ ಒಂದು ಸ್ಪೆಷಲ್​ ಸಾಂಗ್​​ ಹಾಡಿದ್ದಾರೆ. ‘ನೀ ನನ್ನ ಜೀವ ಗೆಳೆಯ ಕಣೋ’ ಅನ್ನೋ ಲಿರಿಕ್ಸ್ ಇರುವ ಈ ಹಾಡು ಸ್ನೇಹಿತರ ಪಾಲಿಗೆ ಆಂಥಮ್ ಆದ್ರೂ ಅಚ್ಚರಿ ಇಲ್ಲ.

ಅಂದಹಾಗೆ ಈ ಹಾಡನ್ನ ಕಿಚ್ಚ ಹಾಡಿರೋದು ಕೂಡ ಫ್ರೆಂಡ್ ಶಿಪ್​ಗಾಗಿಯೇ. ಹೌದು ಫ್ಲರ್ಟ್ ಸಿನಿಮಾ ಚಂದನ್ ಕುಮಾರ್ ನಟನೆ ಜೊತೆಗೆ ಮೊದಲ ನಿರ್ದೇಶನ ಮಾಡ್ತಾ ಇರೋ ಸಿನಿಮಾ. ಚಂದನ್ ಬಿಗ್ ಬಾಸ್ ಸೀಸನ್-3ನಲ್ಲಿ ರನ್ನರ್ ಅಪ್ ಆಗಿದ್ರು. ಬಿಗ್ ಬಾಸ್​ ಸ್ಪರ್ಧಿಗಳ ಅನೇಕ ಸಾಹಸಗಳಿಗೆ ಕಿಚ್ಚ ಸಾಥ್ ಕೊಟ್ಟಿದ್ದಾರೆ. ಸದ್ಯ ನಿರ್ದೇಶಕನಾಗ್ತಾ ಇರೋ ಚಂದುಗೂ ಈ ಹಾಡು ಹಾಡುವ ಮೂಲಕ ಸಪೋರ್ಟ್ ಮಾಡಿದ್ದಾರೆ. ನಕುಲ್ ಅಭಯಂಕರ್ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದಾರೆ. ‘ಫ್ಲರ್ಟ್’ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಚಂದನ್ ಜೊತೆಗೆ ಗಿರಿ ಗೆಳೆಯನಾಗಿ ನಟನೆ ಮಾಡಿದ್ದಾರೆ.

Related Video